ETV Bharat / bharat

ವಾರಾಣಸಿ: ರೆಸ್ಟೋರೆಂಟ್​ನಲ್ಲಿ ಊಟ ಮಾಡುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಸಾವು

ಉತ್ತರ ಪ್ರದೇಶದ ವಾರಾಣಸಿಯ ರೆಸ್ಟೋರೆಂಟ್​ವೊಂದರಲ್ಲಿ ಊಟ ಮಾಡುವಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತ ಪಟ್ಟಿರುವ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹೃದಯಾಘಾತದಿಂದ ವ್ಯಕ್ತಿಯೊರ್ವ ಸಾವು
ಹೃದಯಾಘಾತದಿಂದ ವ್ಯಕ್ತಿಯೊರ್ವ ಸಾವು
author img

By ETV Bharat Karnataka Team

Published : Feb 13, 2024, 10:30 AM IST

ವಾರಾಣಸಿ (ಉತ್ತರ ಪ್ರದೇಶ) : ಸಾವಿಗೆ ಸಾವಿರ ದಾರಿ ಎಂಬಂತೆ ರೆಸ್ಟೋರೆಂಟ್​ನಲ್ಲಿ ಊಟ ಮಾಡುವಾಗ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಕಚಾರಿ ಚೌಕಿ ಪ್ರದೇಶದ ಢಾಬಾವೊಂದರಲ್ಲಿ ಘಟನೆ ನಡೆದಿದೆ. ಮೃತರನ್ನು ಚಾಂದಮರಿ ಶಿವಪುರ ನಿವಾಸಿ ರಾಕೇಶ್ ಅವಸ್ತಿ ಎಂದು ಗುರುತಿಸಲಾಗಿದೆ. ಇವರು ಎಲೆಕ್ಟ್ರೀಷಿಯನ್​ ಆಗಿ ಕೆಲಸ ಮಾಡಿಕೊಂಡಿದ್ದರು.

ಸೋಮವಾರ ಸಂಜೆ ರಾಕೇಶ್​ ರಾತ್ರಿ ಊಟ ಮಾಡಲು ಕಚಾರಿ ಚೌಕಿ ಪ್ರದೇಶದ ಸರ್ಕ್ಯೂಟ್ ಮುಂಭಾಗದಲ್ಲಿರುವ ಢಾಬಾವೊಂದಕ್ಕೆ ಬಂದಿದ್ದರು. ಊಟವನ್ನು ಆರ್ಡರ್​ ಮಾಡಿ ತಿನ್ನುತ್ತಿದ್ದರು. ಈ ವೇಳೆ, ಹೃದಯಾಘಾತದಿಂದ ಏಕಾಏಕಿ ಕುಳಿತಿದ್ದ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾರೆ. ಪಕ್ಕದಲ್ಲಿದ್ದವರು ರಾಕೇಶ್​ ಅವರನ್ನು ಮೇಲೆ ಎತ್ತಿ ಕೂರಿಸಿದ್ದಾರೆ. ಬಳಿಕ ಢಾಬಾದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಪೊಲೀಸರು ರಾಕೇಶ್​ ಅವರ ಪತ್ನಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲ ಕೂಡಲೇ ದೀನ್ ದಯಾಳ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ರಾಕೇಶ್​ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆಯ ಸುದ್ದಿ ಕೇಳಿ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ ಇಡೀ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಹೊರ ಬರುತ್ತಿದ್ದಂತೆ ಎಲ್ಲೆಡೆ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ : ಬೆಂಗಳೂರು: ಕೆಎಸ್ಆರ್​ಟಿಸಿ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.