ETV Bharat / bharat

ಬಿಹಾರದ ಎಲ್ಲ 243 ಕ್ಷೇತ್ರಗಳಲ್ಲಿ ಜನ್ ಸುರಾಜ್ ಸ್ಪರ್ಧೆ: ಸಂಸ್ಥಾಪಕ ಪ್ರಶಾಂತ್ ಕಿಶೋರ್ ಘೋಷಣೆ - Prashant Kishor - PRASHANT KISHOR

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜನ್ ಸುರಾಜ್ ಅಭಿಯಾನವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್
ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (IANS)
author img

By ETV Bharat Karnataka Team

Published : Aug 25, 2024, 6:19 PM IST

ನವದೆಹಲಿ: ಜನ್ ಸುರಾಜ್ ಅಭಿಯಾನವು 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ರಾಜಕೀಯ ತಂತ್ರಜ್ಞ ಮತ್ತು ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಭಾನುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಇದರಲ್ಲಿ ಕನಿಷ್ಠ 40 ಸ್ಥಾನಗಳಿಗೆ ಮಹಿಳೆಯರನ್ನು ಕಣಕ್ಕಿಳಿಸಲಾಗುವುದು ಎಂದು ಅವರು ತಿಳಿಸಿದರು.

ತಮ್ಮ ಪಕ್ಷದ ಯೋಜನೆಗಳನ್ನು ವಿವರಿಸಿದ ಪ್ರಶಾಂತ್ ಕಿಶೋರ್, "2025 ರಲ್ಲಿ, ಜನ್ ಸುರಾಜ್ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಕನಿಷ್ಠ 40 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. 2030 ರ ವೇಳೆಗೆ ನಾವು ನಮ್ಮ ಪಕ್ಷದಿಂದ 70 ರಿಂದ 80 ಮಹಿಳಾ ನಾಯಕರನ್ನು ತಯಾರು ಮಾಡುವ ಪ್ರತಿಜ್ಞೆ ಮಾಡಿದ್ದೇವೆ." ಎಂದು ಹೇಳಿದರು.

ಬಿಹಾರದ ಗಯಾ ಜಿಲ್ಲೆಯ ಬೇಲಾ ಗಂಜ್ ಮತ್ತು ಇಮಾಮ್ ಗಂಜ್ ಕ್ಷೇತ್ರಗಳಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಜನ್ ಸುರಾಜ್ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪ್ರಶಾಂತ್ ಕಿಶೋರ್ ಕಳೆದ ವಾರ ಘೋಷಿಸಿದ್ದರು.

"ಅಕ್ಟೋಬರ್ 2 ರ ನಂತರ ಉಪಚುನಾವಣೆ ನಡೆದರೆ ಜನ್ ಸುರಾಜ್ ಅಧಿಕೃತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆದರೆ ಒಂದೊಮ್ಮೆ ಅಕ್ಟೋಬರ್ 2 ರ ಮೊದಲು ಉಪಚುನಾವಣೆಗಳು ನಡೆದರೆ, ನಾವು ಜನ್ ಸುರಾಜ್​ನಿಂದ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಿದ್ದೇವೆ" ಎಂದು ಪ್ರಶಾಂತ್ ಕಿಶೋರ್ ಗಯಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಮಹಿಳಾ ಮತದಾರರನ್ನು ಪಕ್ಷದತ್ತ ಸೆಳೆಯಲು ಮತ್ತು ಪಕ್ಷದಲ್ಲಿ ಮಹಿಳಾ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ ಜನ್ ಸುರಾಜ್ ಭಾನುವಾರ ರಾಜ್ಯ ಮಟ್ಟದ ಮಹಿಳಾ ಕಾರ್ಯಾಗಾರವನ್ನು ಆಯೋಜಿಸಿತ್ತು.

"ಇದು ಕೇವಲ ಮಹಿಳಾ ಘಟಕದ ಸಭೆಯಲ್ಲ; ಇದು ಮಹಿಳೆಯರಲ್ಲಿ ನಿಜವಾದ ನಾಯಕತ್ವವನ್ನು ಬೆಳೆಸುವ ಪ್ರಯತ್ನವಾಗಿದೆ. ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ. ಇದು ಅವರ ಸಂಪೂರ್ಣ ಭಾಗವಹಿಸುವಿಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಅವಶ್ಯಕವಾಗಿದೆ. ಅದಕ್ಕಾಗಿಯೇ ಜನ್ ಸುರಾಜ್ 40 ಮಹಿಳೆಯರನ್ನು ವಿಧಾನಸಭೆಗೆ ಕಳುಹಿಸಲು ಬದ್ಧವಾಗಿದೆ" ಎಂದು ಪ್ರಶಾಂತ್ ಕಿಶೋರ್ ಒತ್ತಿ ಹೇಳಿದರು.

ಸಾಂಪ್ರದಾಯಿಕ ರಾಜಕೀಯ ನಿಷ್ಠೆಗಿಂತ ತಮ್ಮ ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡುವಂತೆ ಮತದಾರರಿಗೆ ಮನವಿ ಮಾಡಿದ ರಾಜಕೀಯ ತಂತ್ರಜ್ಞ ಪ್ರಶಾಂತ್, "ಮುಂದಿನ ಬಾರಿ ನೀವು ನಿಮ್ಮ ಮತ ಚಲಾಯಿಸುವಾಗ ಅದನ್ನು ರಾಜಕೀಯ ನಾಯಕರ ಮಕ್ಕಳಿಗಾಗಿ ಚಲಾಯಿಸಬೇಡಿ. ಬದಲಾಗಿ ಅದನ್ನು ನಿಮ್ಮ ಸ್ವಂತ ಮಕ್ಕಳ ಭವಿಷ್ಯಕ್ಕಾಗಿ ಚಲಾಯಿಸಿ ಎಂದು ನಾನು ಪ್ರತಿಯೊಬ್ಬರನ್ನು ಒತ್ತಾಯಿಸುತ್ತಿದ್ದೇನೆ. ನೀವು ನಿಜವಾದ ಜನತೆಯಿಂದ ಆಡಳಿತ ನಡೆಯಬೇಕೆಂದು ಬಯಸಿದರೆ ಜಾತಿಯನ್ನು ಲೆಕ್ಕಿಸದೆ ನಿಮ್ಮ ನಂಬಿಕೆಗೆ ದ್ರೋಹ ಬಗೆಯದವರಿಗೆ ಮತ ಚಲಾಯಿಸಿ" ಎಂದು ಹೇಳಿದರು.

ಇದನ್ನೂ ಓದಿ : 2026 ರ ವೇಳೆಗೆ ನಕ್ಸಲ್​ವಾದಕ್ಕೆ ತಿಲಾಂಜಲಿ, ಕಾಶ್ಮೀರದಲ್ಲಿ ಏಕಾಂಗಿ ಹೋರಾಟ: ಅಮಿತ್​ ಶಾ - Amit Shah on extremism

ETV Bharat Logo

Copyright © 2024 Ushodaya Enterprises Pvt. Ltd., All Rights Reserved.