ಜಬಲ್‌ಪುರ (ಮಧ್ಯಪ್ರದೇಶ) : ಜಬಲ್‌ಪುರದ ಜನ ಶತಾಬ್ದಿ ರೈಲಿನ ಎಸಿ ಕೋಚ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ಬುಧವಾರ ರೈಲು ಭೋಪಾಲ್‌ನಿಂದ ಜಬಲ್‌ಪುರಕ್ಕೆ ಬರುತ್ತಿತ್ತು. ನರಸಿಂಗಪುರದ ಬಳಿ ಬರುತ್ತಿದ್ದಾಗ, ಎಸಿ ಕೋಚ್‌ನಲ್ಲಿದ್ದ ದಿಢೀರನೇ ಹಾವು ಪ್ರತ್ಯಕ್ಷವಾಗಿದೆ. ಇದರಿಂದ ಪ್ರಯಾಣಿಕರು ಭೀತಿಗೊಂಡಿದ್ದಾರೆ. ಸ್ವಲ್ಪ ಹೊತ್ತು ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಸ್ಥಳಾಂತರಿಸಲಾಯಿತು.
ಈ ಬಗ್ಗೆ ಜಬಲ್‌ಪುರ ಪಶ್ಚಿಮ ಕೇಂದ್ರ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಷಿತ್ ಶ್ರೀವಾಸ್ತವ ಮಾತನಾಡಿ, ‘ಕಳೆದ ಕೆಲವು ದಿನಗಳಿಂದ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಯಾರ್ಡ್‌ನಲ್ಲಿ ರೈಲುಗಳು ನಿಂತಿದ್ದು, ಯಾರ್ಡ್‌ನ ಸುತ್ತಲಿನ ಪೊದೆಗಳಿಂದಾಗಿ ಹಾವು ಕಾಣಿಸಿಕೊಂಡಿರಬಹುದು. ಆದರೆ, ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಇದರ ಹಿಂದೆ ಯಾವುದೋ ಪಿತೂರಿ ಇರಬೇಕು ಎಂದು ಅವರು ಅನುಮಾನಿಸಿದ್ದಾರೆ.
ಬೇರೆ ಬೋಗಿಗೆ ಜನ ವರ್ಗ: ಬೋಗಿಯಲ್ಲಿ ಹಾವು ಕಾಣಿಸಿಕೊಂಡ ಕಾರಣ, ಪ್ರಯಾಣಿಕರು ಭೀತಿಗೆ ಒಳಗಾದರು. ಇದರಿಂದ ಜನರು ಅಲ್ಲಿಂದ ಓಡಲು ತೊಡಗಿದರು. ಇನ್ನು ಕೆಲವರು ಸರೀಸೃಪ ಕಂಡು ಅಚ್ಚರಿಗೆ ಒಳಗಾದರು. ಹಾವು ನೇತಾಡುತ್ತಿದ್ದನ್ನು ಪ್ರಯಾಣಿಕರಲ್ಲೊಬ್ಬ ವಿಡಿಯೋ ಮಾಡಿದ್ದಾರೆ.
ಸೆಪ್ಟೆಂಬರ್ 23 ರಂದು ರೈಲಿನಲ್ಲಿ ಹಾವು ಕಾಣಿಸಿದ್ದ ಘಟನೆ ನಡೆದಿತ್ತು. ಜಬಲ್‌ಪುರ ಮುಂಬೈ ಗರೀಬ್ ರಥದ ಎಸಿ ಕೋಚ್‌ನಲ್ಲಿ ಸುಮಾರು 5 ಅಡಿ ಉದ್ದದ ಹಾವು ನೇತಾಡುತ್ತಿರುವುದು ಕಂಡುಬಂದಿತ್ತು. ಮಾಹಿತಿ ಪಡೆದ ರೈಲ್ವೇ ಭದ್ರತಾ ಸಿಬ್ಬಂದಿ ಹಾಗೂ ರೈಲ್ವೇ ಪೊಲೀಸರು ಹಾವಿಗಾಗಿ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ನ.25 ರಿಂದ ಚಳಿಗಾಲ ಸಂಸತ್ ಅಧಿವೇಶನ: ವಕ್ಫ್ ತಿದ್ದುಪಡಿ ವಿಧೇಯಕ ಮಂಡನೆಗೆ ಕೇಂದ್ರ ಸಜ್ಜು