ETV Bharat / bharat

ಅಮಿತ್ ಶಾ ನಕಲಿ ವಿಡಿಯೋ: ಶಾಸಕ ಜಿಗ್ನೇಶ್ ಪಿಎ, ಆಪ್​ ನಾಯಕ ಸೇರಿ ಇಬ್ಬರು ಸೆರೆ - Amit Shah Fake Video Case

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕಲಿ ವಿಡಿಯೋ ಶೇರ್ ಮಾಡಿದ ಆರೋಪದಡಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರ ಆಪ್ತ ಸಹಾಯಕ ಮತ್ತು ಆಮ್ ಆದ್ಮಿ ಪಕ್ಷದ ನಾಯಕನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

Gujarat: Cong MLA Mevani's Close Aide, AAP Leader Held For Sharing Fake Video Of Amit Shah
ಅಮಿತ್ ಶಾ ನಕಲಿ ವಿಡಿಯೋ ಶೇರ್ ಮಾಡಿದ ಆರೋಪ: ಶಾಸಕ ಜಿಗ್ನೇಶ್ ಎಪಿ, ಆಪ್​ ನಾಯಕ ಸೇರಿ ಇಬ್ಬರ ಬಂಧನ
author img

By ETV Bharat Karnataka Team

Published : Apr 30, 2024, 9:44 PM IST

ಅಹಮದಾಬಾದ್(ಗುಜರಾತ್​): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕಲಿ ವಿಡಿಯೋ ಶೇರ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರ ಆಪ್ತ ಸಹಾಯಕ ಮತ್ತು ಆಮ್ ಆದ್ಮಿ ಪಕ್ಷದ ಪದಾಧಿಕಾರಿಯೊಬ್ಬರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕುಗಳನ್ನು ಮೊಟಕುಗೊಳಿಸುವ ಬಗ್ಗೆ ಅಮಿತ್​ ಶಾ ಘೋಷಿಸಿದ್ದಾರೆ ಎನ್ನಲಾದ ನಕಲಿ ವಿಡಿಯೋ ಹರಿಬಿಡಲಾಗಿತ್ತು. ಈ ವಿಡಿಯೋ ಬಗ್ಗೆ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ದೂರು ನೀಡಿತ್ತು. ಇದರ ಆಧಾರದ ಮೇಲೆ ದೆಹಲಿ ಪೊಲೀಸರ ವಿಶೇಷ ಕೋಶವು ಭಾನುವಾರ ಎಫ್‌ಐಆರ್ ದಾಖಲಿಸಿತ್ತು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್​ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಅಹಮದಾಬಾದ್ ಸೈಬರ್ ಕ್ರೈಂ ಘಟಕವು ಇಬ್ಬರನ್ನು ಬಂಧಿಸಿದೆ. ಬನಸ್ಕಾಂತದ ಪಾಲನ್‌ಪುರ ನಿವಾಸಿ ಸತೀಶ್ ವಂಸೋಲಾ ಮತ್ತು ದಾಹೋಡ್ ಜಿಲ್ಲೆಯ ಲಿಮ್ಖೇಡಾ ಪಟ್ಟಣದ ರಾಕೇಶ್ ಬರಿಯಾ ಬಂಧಿತರೆಂದು ಗುರುತಿಸಲಾಗಿದೆ ಎಂದು ಪೊಲೀಸ್​ ಪ್ರಕಟಣೆ ಹೊರಡಿಸಲಾಗಿದೆ.

ಸತೀಶ್ ವಂಸೋಲಾ ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರ ಆಪ್ತ ಸಹಾಯಕರಾಗಿ (ಪಿಎ) ಕಾರ್ಯನಿರ್ವಹಿಸುತ್ತಿದ್ದಾರೆ. ಬರಿಯಾ ಕಳೆದ ನಾಲ್ಕು ವರ್ಷಗಳಿಂದ ದಾಹೋದ್ ಆಪ್​ ಜಿಲ್ಲಾಧ್ಯಕ್ಷರಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಲಿತ ಸಮುದಾಯಕ್ಕೆ ಸೇರಿದ ವಂಸೋಲಾ ಬನಸ್ಕಾಂತ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 505(2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೀಸಲು ಜಾತಿಗಳು ಮತ್ತು ಮೀಸಲಾತಿಯಿಲ್ಲದ ಜಾತಿಗಳ ನಡುವೆ ದ್ವೇಷವನ್ನು ಉಂಟುಮಾಡುವ ಉದ್ದೇಶದಿಂದ ಇಬ್ಬರೂ ಅಮಿತ್ ಶಾ ಅವರ ಭಾಷಣದ ಎಡಿಟ್ ಮಾಡಿದ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಮಿತ್ ಶಾ ಅವರ ಈ ಎಡಿಟ್ ಮಾಡಿದ ವಿಡಿಯೋವನ್ನು ಇಬ್ಬರೂ ತಮ್ಮ ಫೇಸ್‌ಬುಕ್ ಪುಟಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇವರು ತಮ್ಮ ವಾಟ್ಸ್‌ಆ್ಯಪ್‌ನಲ್ಲಿ ಸ್ವೀಕರಿಸಿದ್ದಾರೆ. ಇದನ್ನು ಎಡಿಟ್ ಮಾಡಿದ ವ್ಯಕ್ತಿಯ ಪತ್ತೆಗೆ ತನಿಖೆ ಇನ್ನೂ ನಡೆಯುತ್ತಿದೆ ಎಂದು ಸೈಬರ್ ಕ್ರೈಂ ವಿಭಾಗದ ಪೊಲೀಸ್ ಉಪ ಆಯುಕ್ತ ಲವಿನಾ ಸಿನ್ಹಾ ಹೇಳಿದ್ದಾರೆ.

ವಂಸೋಲಾ ಬಂಧನದ ಬಗ್ಗೆ ಶಾಸಕ ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನಸ್ಕಾಂತ ಮತ್ತು ಪಟಾನ್ ಲೋಕಸಭಾ ಕ್ಷೇತ್ರಗಳ ದಲಿತರು ಮತದಾನದ ಸಮಯದಲ್ಲಿ ಬಂಧನದ ಘಟನೆಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಸತೀಶ್ ನನ್ನ ಪಿಎ ಮಾತ್ರವಲ್ಲ. ಆತ ನನ್ನ ಸಹೋದರನಿದ್ದಂತೆ. ಬಿಜೆಪಿಯ ಐಟಿ ಸೆಲ್ ಬಹಳ ಹಿಂದಿನಿಂದಲೂ ನಕಲಿ ವಿಡಿಯೋಗಳನ್ನು ಹಬ್ಬಿಸುತ್ತಿದೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಬದಲು ಆ ವಿಡಿಯೋವನ್ನು ತಪ್ಪಾಗಿ ಪೋಸ್ಟ್ ಮಾಡಿದ ವಂಸೋಲಾ ಅವರಂತಹ ಸಾಮಾನ್ಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್‌ ಕಾರ್ಯಾಧ್ಯಕ್ಷರೂ ಆದ ಮೇವಾನಿ ಕಿಡಿಕಾರಿದ್ದಾರೆ.

ಬಿಜೆಪಿ ಸೋಮವಾರ ಕಾಂಗ್ರೆಸ್​ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಚುನಾವಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಅಮಿತ್ ಶಾ ಅವರ ಡೀಪ್ ಫೇಕ್ ಮತ್ತು ಮಾರ್ಫ್ಡ್ ವಿಡಿಯೋವನ್ನು ಪ್ರಸಾರ ಮಾಡಿದ್ದು, ಇದರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿದೆ. ತೆಲಂಗಾಣದಲ್ಲಿ ಧಾರ್ಮಿಕ ನೆಲೆಯಲ್ಲಿ ಮುಸ್ಲಿಮರ ಕೋಟಾವನ್ನು ರದ್ದುಗೊಳಿಸುವುದಾಗಿ ಅಮಿತ್​ ಶಾ ಹೇಳಿರುವಂತೆ ಎಲ್ಲ ಮೀಸಲಾತಿಗಳನ್ನು ರದ್ದುಪಡಿಸುವುದನ್ನು ಪ್ರತಿಪಾದಿಸುತ್ತಿದ್ದಾರೆಂದು ಎಂಬಂತೆ ನಕಲಿ ವಿಡಿಯೋ ಸೃಷ್ಟಿಸಲಾಗಿದೆ.

ಇದನ್ನೂ ಓದಿ: 'ಮೊಹಬ್ಬತ್ ಕಿ ದುಕಾನ್'ನಲ್ಲಿ ನಕಲಿ ವಿಡಿಯೋಗಳ ಮಾರಾಟ: ಕಾಂಗ್ರೆಸ್‌ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.