ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ತಿರುಚಿದ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಹೈದರಾಬಾದ್ ಹಾಲಿ ಸಂಸದ ಓವೈಸಿ ಅವರ ಹಿಂದೂಗಳ ದೇವರಾದ ಶ್ರೀರಾಮನ ಭಾವಚಿತ್ರವನ್ನು ಹಿಡಿದುಕೊಂಡಿರುವಂತೆ ಬಿಂಬಿಸಲಾಗಿದೆ. ಆದರೆ, ಇದರ ಅಸಲಿತನ ಬೇರೆಯದೇ ಇದೆ ಎಂಬುದು ಫ್ಯಾಕ್ಟ್ ಚೆಕ್ನಲ್ಲಿ ಬಯಲಾಗಿದೆ.
ಅಸಾದುದ್ದೀನ್ ಓವೈಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಹಿಡಿದುಕೊಂಡಿದ್ದರು. ಆದರೆ, ಅದನ್ನು ಶ್ರೀರಾಮನ ಭಾವಚಿತ್ರ ಎಂಬಂತೆ ತಿರುಚಿಲಾಗಿದೆ. ನಿಜವಾಗಿಯೂ ಓವೈಸಿ ಹಿಡಿದುಕೊಂಡಿರುವುದು ಅಂಬೇಡ್ಕರ್ ಫೋಟೋ ಎಂಬುವುದಾಗಿ 'ಬೂಮ್' ಎಂಬ ಫ್ಯಾಕ್ಟ್‌ಚೆಕಿಂಗ್ ವೆಬ್‌ಸೈಟ್ ಕಂಡು ಹಿಡಿದಿದೆ.
ಹಾಲಿ ಸಂಸದಾರ ಓವೈಸಿ ಹೈದರಾಬಾದ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಮೇ 13, 2024ರಂದು ನಾಲ್ಕನೇ ಹಂತದ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರಕ್ಕೆ ಮತದಾನವಾಗಿದೆ. ಇತ್ತೀಚಿಗೆ ಓವೈಸಿ ಶ್ರೀರಾಮನ ಭಾವಚಿತ್ರ ಹಿಡಿದಿರುವಂತೆ ತೋರಿಸುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು, ಹಂಚಿಕೊಳ್ಳಲಾಗುತ್ತಿದೆ.
ಫೋಟೋದ ಬಗ್ಗೆ 'ಬೂಮ್' ವೆಬ್‌ಸೈಟ್ ಫ್ಯಾಕ್ಟ್‌ಚೆಕ್ ಮಾಡಿದೆ. ಅಸಾದುದ್ದೀನ್ ಓವೈಸಿ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 2018ರ ಏಪ್ರಿಲ್ 7ರಂದು ಮೂಲ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಕಂಡು ಹಿಡಿದಿದೆ. ಮೂಲ ಚಿತ್ರದಲ್ಲಿ ಒವೈಸಿ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದಿದ್ದಾರೆ. ಈ ವೇಳೆ ಹಲವು ಜನರು ಸಹ ಓವೈಸಿ ಜೊತೆಗಿದ್ದಾರೆ.
ಅಂಬೇಡ್ಕರ್ ಭಾವಚಿತ್ರದ ಹಿಡಿದು ಪೋಟೋ ಪೋಸ್ಟ್ ಮಾಡುವಾಗ ಓವೈಸಿ, ''ಮೋಚಿ ಕಾಲೋನಿಯ ದಲಿತ ಮುಖಂಡರು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರನ್ನು ಹೈದರಾಬಾದ್ನ ದರುಸ್ಸಲಾಮ್‌ನಲ್ಲಿರುವ ಎಐಎಂಐಎಂ ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾದರು ಮತ್ತು ತಮ್ಮ ಪ್ರದೇಶದಲ್ಲಿ (ಬಹದ್ದೂರಪುರ ಕ್ಷೇತ್ರದ ರಾಮನಾಸಪುರ) ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದರು" ಎಂದು ಬರೆದುಕೊಂಡಿದ್ದರು. ಹೀಗಾಗಿ 2018ರಲ್ಲಿ ಓವೈಸಿ ಪೋಸ್ಟ್ ಮಾಡಿದ ಫೋಟೋ ಮತ್ತು ಈಗ ರಾಮನ ಫೋಟೋದ ನಡುವಿನ ಹೋಲಿಕೆಯನ್ನು ಗಮನಿಸಿದಾಗ ಇದೊಂದು ಫೇಕ್ ಎಂದು ಗೊತ್ತಾಗಿದೆ.
Note: This story was first published in Boom as part of Shakti Collective and has been republished by ETV Bharat.
ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಹತ್ಯೆಯ ಫ್ಯಾಕ್ಟ್ ಚೆಕ್: ವೈರಲ್ ವಿಡಿಯೋದ ಅಸಲಿಯತ್ತು ಹೀಗಿದೆ