ETV Bharat / bharat

ಪುಣೆ ಇವಿಎಂ ಕಳ್ಳತನ ಪ್ರಕರಣ: ಮೂವರು ಹಿರಿಯ ಅಧಿಕಾರಿಗಳು ಸಸ್ಪೆಂಡ್​! - EVM Theft Case

ವಿದ್ಯುನ್ಮಾನ ಮತಯಂತ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

Pune EVM Theft Case
ಇವಿಎಂ ಕಳ್ಳತನ ಪ್ರಕರಣ
author img

By ETV Bharat Karnataka Team

Published : Feb 8, 2024, 2:24 PM IST

ಪುಣೆ: ಸಸ್ವಾದ್ ತಹಶೀಲ್ದಾರ್ ಕಚೇರಿಯಿಂದ ಇವಿಎಂ ಯಂತ್ರ ಕಳವಾಗಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿತ್ತು. ಈ ವಿದ್ಯುನ್ಮಾನ ಮತಯಂತ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ ಪುರಂದರ ತಹಸೀಲ್ದಾರ್ ವಿಕ್ರಮ್​​ ರಜ್​​ಪೂತ್, ಸಬ್​​​ ಡಿವಿಶನಲ್​ ಆಫೀಸರ್​ / ಉಪವಿಭಾಗಾಧಿಕಾರಿ ವರ್ಷ ಲಾಂಗಾಗೆ ಮತ್ತು ಡಿವೈಎಸ್ಪಿ ತಾನಾಜಿ ಬೆರ್ದೆ ಅವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ.

Pune EVM Theft Case
ಇವಿಎಂ ಕಳ್ಳತನ ಪ್ರಕರಣ

ಸಸ್ವಾದ್ ತಹಶೀಲ್ದಾರ್ ಕಚೇರಿಯಲ್ಲಿ ಇವಿಎಂ ಯಂತ್ರ ಕಳವಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೀಗ ಈ ಕಳ್ಳತನ ಪ್ರಕರಣದಲ್ಲಿ ತಹಶೀಲ್ದಾರ್ ವಿಕ್ರಮ್ ರಜಪೂತ್, ಉಪವಿಭಾಗಾಧಿಕಾರಿ ವರ್ಷ, ಪೊಲೀಸ್ ಅಧಿಕಾರಿ ತಾನಾಜಿ ಬೆರ್ದೆ ಅವರನ್ನು ಅಮಾನತುಗೊಳಿಸಲಾಗಿದೆ.

ಏನಿದು ಘಟನೆ?: ಪುರಂದರ ತಾಲೂಕಿನ ಸಾಸ್ವಾಡದಲ್ಲಿ ಸೋಮವಾರ ಇವಿಎಂ ಯಂತ್ರ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಈ ಕಳವು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಘಟನೆ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮತ ಯಂತ್ರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿಯನ್ನು ಬಂಧಿಸಲು ಬಲೆ ಬೀಸಲಾಗಿದೆ. ಈ ಅಪರಾಧದಲ್ಲಿ ಬಂಧಿತರಾಗಿರುವವರನ್ನು ಹೊರತುಪಡಿಸಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕಳ್ಳತನದ ಹಿಂದಿನ ಉದ್ದೇಶವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಸ್ವಾದ್ ತಹಶೀಲ್​ ಕಚೇರಿಯಲ್ಲಿ 40 ಇವಿಎಂಗಳನ್ನು ಇರಿಸಲಾಗಿತ್ತು. ತಹಶೀಲ್​ ಕಚೇರಿಯ ಸ್ಟ್ರಾಂಗ್ ರೂಮ್‌ನಲ್ಲಿ ಫೆಬ್ರವರಿ 3 ರಂದು ರಾತ್ರಿ ಕಳ್ಳತನ ನಡೆದಿರುವುದು ಪುಣೆ ಗ್ರಾಮಾಂತರ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಕಳ್ಳತನ ನಡೆದಿರುವುದು ಬೆಳಕಿಗೆ ಬಂದ ನಂತರ ಪೊಲೀಸರು ಆವರಣದಲ್ಲಿ ಅಳವಡಿಸಿದ್ದ ಭದ್ರತಾ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಪಡೆದುಕೊಂಡು ತನಿಖೆ ಕೈಗೊಂಡಿದ್ದರು.

ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಿದ್ದೇವೆ ಮತ್ತು ಅವರಿಂದ ಕದ್ದ ಇವಿಎಂ ಅನ್ನು ವಶಪಡಿಸಿಕೊಂಡಿದ್ದೇವೆ. ಕಳ್ಳತನದ ಹಿಂದಿನ ಉದ್ದೇಶವನ್ನು ನಾವು ತನಿಖೆ ಮಾಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಪುರನ್ ಪೋಲಿ ಸೇವಿಸಿ 35 ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.