ETV Bharat / bharat

ಮಹಾ ಚುನಾವಣೆ: ರಾತ್ರೋರಾತ್ರಿ 45 ಸದಸ್ಯರ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಏಕ್​ನಾಥ್​ ಶಿಂಧೆ!

Maharashtra Assembly election: ಮಹಾರಾಷ್ಟ್ರ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾತ್ರೋರಾತ್ರಿ ಏಕ್​ನಾಥ್ ಶಿಂಧೆ 45 ಸದಸ್ಯರ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

MAHARASHTRA ASSEMBLY ELECTION 2024  EKNATH SHINDE SHIV SENA  45 CANDIDATES FIRST LIST  MAHARASHTRA ELECTION
ಏಕ್​ನಾಥ್​ ಶಿಂಧೆ (ETV Bharat)
author img

By ETV Bharat Karnataka Team

Published : Oct 23, 2024, 7:35 AM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆ ಮಹಾಯುತಿ ಮತ್ತು ಮಹಾವಿಕಾಸ ಅಘಾಡಿ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಮತ್ತೊಂದೆಡೆ, ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯ ನಂತರ ಮಹಾಮೈತ್ರಿಕೂಟದ ಎರಡನೇ ಪ್ರಮುಖ ಘಟಕ ಪಕ್ಷವಾದ ಶಿವಸೇನೆ( ಶಿಂಧೆ) ತಡರಾತ್ರಿ ತನ್ನ 45 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಪ್ರಕಾರ ಸ್ವತಃ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೊಪ್ರಿ ಪಚ್ಚಪಕ್ಕಡಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಶಿವಸೇನೆ ಶಿಂಧೆ ಗುಂಪಿನ ಮೊದಲ ಪಟ್ಟಿ ಪ್ರಕಟ: ಶಿವಸೇನೆ ಶಿಂಧೆ ಗುಂಪಿನ ಮೊದಲ ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ರತ್ನಗಿರಿಯಿಂದ ಉದಯ್ ಸಮಂತ್ ಮತ್ತು ರಾಜಾಪುರ ವಿಧಾನಸಭಾ ಕ್ಷೇತ್ರದಿಂದ ಕಿರಣ್ ಸಾಮಂತ್ ನಾಮನಿರ್ದೇಶನಗೊಂಡಿದ್ದಾರೆ. ಇನ್ನು ಕೊಂಕಣದಲ್ಲಿ ಸಮಂತ್ ಸಹೋದರರು ಜಾಕ್ ಪಾಟ್ ಹೊಡೆದಿದ್ದಾರೆ. ರತ್ನಗಿರಿಯಿಂದ ಉದಯ್ ಸಮಂತ್ ಮತ್ತು ರಾಜಾಪುರ ವಿಧಾನಸಭಾ ಕ್ಷೇತ್ರದಿಂದ ಉದಯ್ ಸಮಂತ್ ಸಹೋದರ ಕಿರಣ್ ಸಾಮಂತ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಮಾಹಿಮ್ ವಿಧಾನಸಭಾ ಕ್ಷೇತ್ರದಿಂದ ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ವಿರುದ್ಧ ಸದಾ ಸರವಂಕರ್ ಸ್ಪರ್ಧಿಸಲಿದ್ದಾರೆ.

ರಾಮದಾಸ್ ಕದಂ ಅವರ ಪುತ್ರ ಯೋಗೀಶ್ ಕದಂ ದಾಪೋಲಿ ವಿಧಾನಸಭಾ ಕ್ಷೇತ್ರದಿಂದ ನಾಮನಿರ್ದೇಶನಗೊಂಡಿದ್ದಾರೆ. ಜೋಗೇಶ್ವರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರವೀಂದ್ರ ವೈಕರ್ ಅವರ ಪತ್ನಿ ಮನಿಷಾ ವೈಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಲ್ಲಿ ಮುಂಬೈನ ಒಟ್ಟು 36 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ವಿಧಾನಸಭಾ ಕ್ಷೇತ್ರಗಳಿಗೆ ಶಿಂಧೆ ಗುಂಪಿನ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಅಮಿತ್ ಠಾಕ್ರೆ ವಿರುದ್ಧ ಸದಾ ಸರವಣ್ಕರ್: ಮಹಿಮ್ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಠಾಕ್ರೆಗೆ ಮಹಾಯುತಿ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂಬ ರಾಜ್ ಠಾಕ್ರೆ ಬೇಡಿಕೆಯ ಬಗ್ಗೆ ಒಂದು ಕಡೆ ಚರ್ಚೆಗಳು ನಡೆದಿವೆ. ಆದರೆ ಏಕನಾಥ್ ಶಿಂಧೆ ಪ್ರಕಟಿಸಿದ ಪಟ್ಟಿಯಲ್ಲಿ ಮಾಹಿಮ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸದಾ ಸರವಣಕರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಹಾಗಾಗಿ ಇದೀಗ ಅಮಿತ್ ಠಾಕ್ರೆ ವಿರುದ್ಧ ಮಹಾವಿಕಾಸ್ ಅಘಾಡಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೂ ಅಮಿತ್ ಠಾಕ್ರೆ ಮತ್ತು ಸದಾ ಸರವಣಕರ್ ನಡುವಿನ ಹೋರಾಟ ಖಚಿತಗೊಂಡಿದೆ.

ಒಂದೇ ಹಂತದಲ್ಲಿ ಮತದಾನ: 288 ಸ್ಥಾನಗಳ ವಿಧಾನಸಭೆಗೆ ನವೆಂಬರ್​ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಅಕ್ಟೋಬರ್ 22 ರಂದು ಅಂದ್ರೆ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಅನ್ನು ಹೊರಡಿಸಲಾಗಿದೆ. ಅ.29 ನಾಮಿನೇಷನ್ ಸಲ್ಲಿಕೆಗೆ ಕೊನೆ ದಿನ. ನಾಮಪತ್ರ ಹಿಂಪಡೆಯಲು ನ.4 ಕೊನೆ ದಿನವಾಗಿದ್ದರೆ, ನ.23ರಂದು ಫಲಿತಾಂಶ ಪ್ರಕಟವಾಗಲಿದೆ.

ಓದಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಪುಣೆ ಬಳಿ ಕಾರಿನಲ್ಲಿ 5 ಕೋಟಿ ರೂ. ನಗದು ಜಪ್ತಿ ಮಾಡಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.