ETV Bharat / bharat

ಐಷಾರಾಮಿ ಕಳ್ಳ; 200 ಪ್ಲೈಟ್​​​​​​​​​​​ಗಳಲ್ಲಿ ಸಂಚಾರ, ವಿಮಾನ ಪ್ರಯಾಣಿಕರೇ ಟಾರ್ಗೆಟ್​, ಕೋಟಿಗಟ್ಟಲೇ ದರೋಡೆ - Airline Thief

author img

By ETV Bharat Karnataka Team

Published : May 15, 2024, 4:34 PM IST

A Thief Flew 200 Flights To Steal Jewelry: ಈ ಕಳ್ಳನ ದಾರಿಯೇ ಬೇರೆ.. ಏಕೆಂದರೆ ಆತ ಕೇವಲ ವಿಮಾನಯಾನ ಪ್ರಯಾಣಿಕರನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲ ಕಳ್ಳತನಕ್ಕಾಗಿ 110 ದಿನಗಳ ಕಾಲ ದೇಶಾದ್ಯಂತ ಸುಮಾರು 200 ವಿಮಾನಗಳಲ್ಲಿ ಪ್ರಯಾಣಿಸಿದ್ದಾನೆ. ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಹ್ಯಾಂಡ್​ಬ್ಯಾಗ್​ನಿಂದ ಭಾರಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ತನಿಖೆ ಆರಂಭಿಸಿದ ದೆಹಲಿ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆತ ಹೇಳಿದ ಮಾತು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

DELHI MAN STEAL JEWELRY  DELHI MAN STEAL MONEY  POLICE ARRESTED MAN
ಐಷಾರಾಮಿ ಕಳ್ಳ (ಕೃಪೆ : ETV Bharat (ಸಾಂದರ್ಭಿಕ ಚಿತ್ರ))

ನವದೆಹಲಿ: ಒಬ್ಬ ವ್ಯಕ್ತಿ 110 ದಿನಗಳ ಕಾಲ ದೇಶಾದ್ಯಂತ ಸುಮಾರು 200 ವಿಮಾನಗಳಲ್ಲಿ ಪ್ರಯಾಣಿಸಿದ್ದಾನೆ ಎಂದರೆ ಆತ ಉದ್ಯಮಿ ಆಗಿರಬೇಕು ಅಥವಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸಿನಿಮಾ ಸೆಲೆಬ್ರಿಟಿ ಆಗಿರಬಹುದು. ಆದರೆ ಹಾಗಂತ ನೀವೇನಾದರೂ ತಿಳಿದಿದ್ದರೆ ಅದು ಅಕ್ಷರಶಃ ಸುಳ್ಳು.. ದೇಶದ ನಗರಗಳನ್ನು ಸುತ್ತುವುದರಲ್ಲಿ ನಿರತನಾದವನು ಬೇರೆ ಯಾರೂ ಅಲ್ಲ ಆತನೊಬ್ಬ ಮಹಾನ್​ ಕಳ್ಳ. ಈ ವಿಚಾರ ಕೇಳಿ ಶಾಕ್​ ಆಯ್ತಾ.. ಹೌದು ಇದನ್ನು ಕೇಳಿದವರೆಲ್ಲರಿಗೂ ಶಾಕ್​ ಆಗಿಯೇ ಇರತ್ತೆ ಬಿಡಿ. ದೆಹಲಿಯ ಆ ಪೆಡ್ಲರ್ ಕೇವಲ ವಿಮಾನ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ಪೊಲೀಸರು ಕಂಡು ಕೊಂಡಿದ್ದಾರೆ.

Delhi Man Steal Jewelry : ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಹ್ಯಾಂಡ್​ಬ್ಯಾಗ್​ನಿಂದ ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣದ ತನಿಖೆ ಆರಂಭಿಸಿದ ದೆಹಲಿಯ ಪಹರ್‌ಗಂಜ್ ಪೊಲೀಸರು ಇತ್ತೀಚೆಗೆ ಆರೋಪಿಯನ್ನು ಬಂಧಿಸಿದ್ದರು. ತನಿಖೆ ವೇಳೆ ಆತ ಹೇಳಿದ ಮಾತು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದೆಹಲಿಯ ಪಹರ್‌ಗಂಜ್ ಮೂಲದ ರಾಜೇಶ್ ಕಪೂರ್, ಹಣ ವಿನಿಮಯ ವ್ಯವಹಾರದ ಜೊತೆಗೆ ಮೊಬೈಲ್ ಫೋನ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದ. ಅಲ್ಲಿಂದ ಬರುತ್ತಿದ್ದ ಆದಾಯ ಸಾಲದೇ ಆತ ಕಳ್ಳನಾದ. ಮೊದಲಿಗೆ ರೈಲಿನಲ್ಲಿ ಕದಿಯುವ ಮೂಲಕ ಪೊಲೀಸರಿಗೆ ಸಿಕ್ಕಿಬಿದ್ದ ಆತ ಜೈಲಿನಿಂದ ಹೊರಬಂದು ಮಾರ್ಗವನ್ನೇ ಬದಲಿಸಿದ.

ಹೌದು, ಆತ ತನ್ನ ಮಾರ್ಗ ಬದಲಾಯಿಸಿ ಐಷಾರಾಮಿ ಕಳ್ಳನಾದ. ಕೇವಲ ವಿಮಾನ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡಲು ಪ್ರಾರಂಭಿಸಿದ. ಸಾಮಗ್ರಿಗಳನ್ನು ಸರಿಪಡಿಸುವ ನಾಟಕವಾಡಿ.. ಅಥವಾ ಪ್ರಯಾಣಿಕರ ವಾಷ್​ರೂಂಗೆ ಹೋದಾಗ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ. 2023ರಲ್ಲಿ ಈತ ಕೇವಲ ಕಳ್ಳತನಕ್ಕಾಗಿ 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣಿಸಿದ್ದಾನೆ ಎಂಬುದನ್ನ ಪೊಲೀಸರು ತಾಂತ್ರಿಕ ವಿವರಗಳ ಆಧಾರದ ಮೂಲಕ ಪತ್ತೆ ಹಚ್ಚಿ ಬೆಚ್ಚಿ ಬಿದ್ದಿದ್ದಾರೆ.

ಆ ಎರಡು ಪ್ರಕರಣದಿಂದ ಸಿಕ್ಕಿಬಿದ್ದ ಕಳ್ಳ: ಏಪ್ರಿಲ್ 11ರಂದು ಹೈದರಾಬಾದ್​ನಿಂದ ದೆಹಲಿಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್​ನಲ್ಲಿದ್ದ 7 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ. ಅಲ್ಲದೇ ಫೆಬ್ರವರಿ 2 ರಂದು ಅಮೃತಸರದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನ ಬ್ಯಾಗ್​ನಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಈತ ಕಳ್ಳತನ ಮಾಡಿದ್ದ. ಈ ಬಗ್ಗೆ ಸಂತ್ರಸ್ತರು ದೆಹಲಿಯಲ್ಲಿ ದೂರು ದಾಖಲಿಸಿದ್ದರು. ಈ ಕ್ರಮದಲ್ಲಿ ದೆಹಲಿ, ಹೈದರಾಬಾದ್, ಅಮೃತಸರ ಮತ್ತಿತರ ವಿಮಾನ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ಈ ಅನುಕ್ರಮದಲ್ಲಿ ವ್ಯಕ್ತಿಯೊಬ್ಬ ಮೂರು ಕಡೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಬಳಿಕ ತಂತ್ರಜ್ಞಾನ ಮೂಲಕ ಆರೋಪಿಯನ್ನು ದೆಹಲಿಯ ಪಹರ್‌ಗಂಜ್‌ನಲ್ಲಿ ಬಂಧಿಸಲಾಯಿತು.

ಹೈದರಾಬಾದಿಗೆ ಸೇರಿದ ಕೋಟ್ಯಂತರ ರೂ.ದರೋಡೆ: ಹೈದರಾಬಾದ್​ನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರ ಸೊತ್ತು ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಒಂದರಲ್ಲಿ ಸುಮಾರು 52 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೊಂದೆಡೆ ಶಂಶಾಬಾದ್​ನಿಂದ ದೆಹಲಿಗೆ ತೆರಳುತ್ತಿದ್ದ ಪ್ರಯಾಣಿಕರಿಂದ ಸುಮಾರು 50 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ. ಈ ಕುರಿತಂತೆ ಆರ್‌ಜಿಐಎ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ ಈ ಹಣವನ್ನು ಇಲ್ಲೇ ಖರ್ಚು ಮಾಡಿದ್ದಾನೆ ಎಂದು ಆರ್‌ಜಿಐಎ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪಿಯು ದೆಹಲಿಯಲ್ಲಿ ಹಣ ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಆರ್‌ಜಿಐಎ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ದೆಹಲಿಯ ಪಹಲ್‌ಗಂಜ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿಗೆ ರಿಕ್ಕಿ ಡಿಲಕ್ಸ್ ಎಂಬ ಅತಿಥಿ ಗೃಹವಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಓದಿ: ಕುಮಾರಸ್ವಾಮಿ ತಿಮಿಂಗಿಲ ಯಾರೆಂದು ಹೇಳಿದ್ರೆ ಪ್ರಕರಣ ಮುಗಿಯುತ್ತದೆ: ಡಾ.ಜಿ.ಪರಮೇಶ್ವರ್ - G Parameshwar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.