ಪಾಟ್ನಾ(ಬಿಹಾರ): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿ ಭಾನುವಾರ ಪಾಟ್ನಾ ಗಾಂಧಿ ಮೈದಾನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಇನ್ನು ಮೇಲ್ಜಾತಿ ಸಮುದಾಯದ ಜನರ ವಿರುದ್ಧ ಅಸಭ್ಯ ಟೀಕೆ ಮಾಡಿದ ಆರೋಪದ ಮೇಲೆ ತೇಜಸ್ವಿ ಯಾದವ್ ವಿರುದ್ಧವೂ ದೂರು ದಾಖಲಾಗಿದೆ. ಎರಡೂ ಪ್ರಕರಣಗಳ ದೂರು ಗಾಂಧಿ ಮೈದಾನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ಸೀತಾರಾಮ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ವಕ್ತಾರ ಕೃಷ್ಣ ಸಿಂಗ್ ಮಾತನಾಡಿ, ಆರ್‌ಜೆಡಿಯ ಜನ ವಿಶ್ವಾಸ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಸಭ್ಯ ಕಾಮೆಂಟ್‌ಗಳನ್ನು ಮಾಡಲಾಗಿದೆ. ನರೇಂದ್ರ ಮೋದಿ ಹಿಂದೂ ಅಲ್ಲ, ಮೋದಿಜೀ ಅವರು ತಮ್ಮ ತಾಯಿಯ ಮರಣದ ನಂತರ ತಲೆ ಬೋಳಿಸಿಕೊಂಡಿಲ್ಲ, ಗಡ್ಡ ಬೋಳಿಸಿಕೊಂಡಿಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿಕೆ ನೀಡಿದ್ದಾರೆ. ಇವು ಅಸಭ್ಯ ಹೇಳಿಕೆಗಳಾಗಿವೆ ಮತ್ತು ರಾಮಮಂದಿರ ನಿರ್ಮಾಣ ಕುರಿತು ಪ್ರತಿಕ್ರಿಯಿಸುವ ಮೂಲಕ ಲಾಲೂ ಯಾದವ್ ದೇಶದ 135 ಕೋಟಿ ಜನರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಹೇಳಿದ್ದೇನು?: ಜನ್ ವಿಶ್ವಾಸ್ ರ‍್ಯಾಲಿಯಲ್ಲಿ ಲಾಲೂ ಪ್ರಸಾದ್ ಯಾದವ್, ನರೇಂದ್ರ ಮೋದಿ ಅವರು ತಮ್ಮ ತಾಯಿಯ ನಿಧನದ ನಂತರ ತ್ರಯೋದಶಿ ಆಚರಣೆಗಳನ್ನು ಮಾಡದೇ ಹಿಂದೂ ಸಂಪ್ರದಾಯದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಲಾಲೂ ಹೇಳಿಕೆಗಳ ಎಫೆಕ್ಟ್- ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ತಂದೆ ಲಾಲೂ ಅವರು ಇಂಡಿಯಾ ಮಿತ್ರಪಕ್ಷಗಳ ಒಕ್ಕೂಟದಿಂದ ಇತ್ತೀಚಿಗೆ ನಡೆದ 'ಜನ ವಿಶ್ವಾಸ ಯಾತ್ರೆ'ಯಲ್ಲಿ ಪ್ರಧಾನಿ ಮೋದಿಯವರ ಮೇಲೆ ಅನುಚಿತವಾದ ಕಾಮೆಂಟ್‌ಗಳನ್ನು ಮಾಡಿದ್ದರು. ಇದರ ಪರಿಣಾಮ ಬಿಜೆಪಿ ನಾಯಕರ ಎಕ್ಸ್ (ಟ್ವಿಟ್ಟರ್) ಖಾತೆಗಳಲ್ಲಿ ‘ಮೋದಿ ಕಾ ಪರಿವಾರ್’ ಎಂಬ ಪದ ಸದ್ದು ಮಾಡುತ್ತಿದೆ.
ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ''ಪ್ರಧಾನಿ ಅವರಿಗೆ ಕುಟುಂಬವಿಲ್ಲ. ಅದಕ್ಕಾಗಿಯೇ ಅವರು ಪಿತ್ರಾರ್ಜಿತ ಮತ್ತು ಕುಟುಂಬದ ರಾಜಕಾರಣವನ್ನು ಟೀಕಿಸುತ್ತಿದ್ದಾರೆ’’ ಎಂದಿದ್ದರು. ಇದಕ್ಕೆ ಮಾಜಿ ಶಾಸಕರು ಎಂಬಂತೆ ಬಿಜೆಪಿ ನಾಯಕರು ಕೌಂಟರ್ ಕೊಟ್ಟಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವರು ತಮ್ಮ ಖಾತೆಗಳಿಗೆ 'ಮೋದಿ ಕಾ ಪರಿವಾರ್' ಅಂದ್ರೆ ‘ಮೋದಿ ಕುಟುಂಬ’ ಪದಗಳನ್ನು ಸೇರಿಸಿದ್ದಾರೆ. ನಾವೆಲ್ಲರೂ ಮೋದಿ ಕುಟುಂಬದವರು ಎಂದು ಪ್ರಧಾನಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇದನ್ನೂ ಓದಿ: ‘ರಾಮ-ರಾಜ್ಯ’ ಪರಿಕಲ್ಪನೆ: ₹ 76 ಸಾವಿರ ಕೋಟಿ ಬಜೆಟ್ ಮಂಡಿಸಿದ ದೆಹಲಿ ಸರ್ಕಾರ, ಮಹಿಳೆಯರಿಗೆ ಬಂಪರ್ ಕೊಡುಗೆ