ETV Bharat / bharat

ಕೆರೆ ಬಳಿ ಬಾಂಬ್​ ಸ್ಪೋಟ: ಬಾಲಕ ಸಾವು, ಇಬ್ಬರು ಮಕ್ಕಳಿಗೆ ಗಾಯ - Bomb Blast

author img

By ETV Bharat Karnataka Team

Published : May 6, 2024, 2:28 PM IST

ಪಶ್ಚಿಮ ಬಂಗಾಳದ ಪಾಂಡುವಾದಲ್ಲಿ ಬಾಂಬ್ ಸ್ಫೋಟಿಸಿ ಓರ್ವ ಬಾಲಕ ಸಾವನ್ನಪ್ಪಿದ್ದಾನೆ.

ಕೆರೆ ಬಳಿ ಬಾಂಬ್​ ಸ್ಪೋಟ
ಕೆರೆ ಬಳಿ ಬಾಂಬ್​ ಸ್ಪೋಟ (Etv Bharat)

ಹೂಗ್ಲಿ(ಪಶ್ಚಿಮ ಬಂಗಾಳ): ರಾಜ್ಯದ ಪಾಂಡುವಾದ ತಿನ್ನಾ ಎಂಬಲ್ಲಿ ಬಾಂಬ್ ಸ್ಫೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಬಾಲಕರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.

ನಡೆದಿದ್ದೇನು?: ಪಾಂಡುವಾದ ತಿನ್ನಾ ನೇತಾಜಿಪಲ್ಲಿ ಕಾಲೊನಿಯ ಕೆರೆ ದಡದಲ್ಲಿ ಮೂವರು ಮಕ್ಕಳು ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಸಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಬಾಂಬ್ ಸ್ಫೋಟಗೊಂಡು ಮಕ್ಕಳು ಬೇರೆ ಬೇರೆ ಕಡೆ ಬಿದ್ದಿರುವುದನ್ನು ಗಮನಿಸಿದ್ದಾರೆ.

ತಕ್ಷಣ ಗಾಯಗೊಂಡ ಮೂವರನ್ನು ಮೊದಲು ಪಾಂಡುವಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಓರ್ವ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚುಂಚೂರ ಇಮಾಂಬರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಪ್ರದೇಶದಲ್ಲಿ ಬಾಂಬ್ ಇಟ್ಟವರು ಯಾರು ಎಂದು ಹೂಗ್ಲಿ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಸರ್ಕಾರ್ ಮಾತನಾಡಿ, "ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದೆ. ಸ್ಫೋಟಕಗಳನ್ನು ಶೋಧಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಹೆಚ್ಚಳ - bomb threat to airport

ETV Bharat Logo

Copyright © 2024 Ushodaya Enterprises Pvt. Ltd., All Rights Reserved.