ETV Bharat / bharat

ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ - ಪ್ರತಿಷ್ಠಾಪನೆಯಾದ ರಾಮ

Ayodhya Ram Mandir Pran Pratishtha Ceremony: ರಾಮಭಕ್ತರು ನೂರಾರು ವರ್ಷಗಳಿಂದ ಕಾಯುತ್ತಿದ್ದ ಅದ್ಭುತ ಕ್ಷಣಗಳು ಅಯೋಧ್ಯೆಯಲ್ಲಿ ತೆರೆದುಕೊಂಡಿವೆ. ಕೊನೆಗೆ ಜಗದಾಭಿರಾಮ ತನ್ನ ಜನ್ಮಭೂಮಿಯಲ್ಲಿಯೇ ಪ್ರತಿಷ್ಠಾಪನೆಗೊಂಡಿದ್ದಾನೆ.

pran pratishtha ceremony  ayodhya ram mandir  pm modi  ಜನರ ಕನಸು ಸಾಕಾರ  ಪ್ರತಿಷ್ಠಾಪನೆಯಾದ ರಾಮ  ಅದ್ಭುತ ಕ್ಷಣಗಳು
ಕೋಟ್ಯಾಂತರ ಜನರ ಕನಸು ಸಾಕಾರ, ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ರಾಮ
author img

By ETV Bharat Karnataka Team

Published : Jan 22, 2024, 2:10 PM IST

Updated : Jan 22, 2024, 10:58 PM IST

ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ

ಅಯೋಧ್ಯೆ, ಉತ್ತರಪ್ರದೇಶ: ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣವೊಂದು ಅನಾವರಣಗೊಂಡಿದೆ. ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ವೈಭವದಿಂದ ಜರುಗಿತು. ದೆಹಲಿಯಿಂದ ಅಯೋಧ್ಯೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಶ್ರೀರಾಮ ಮಂದಿರ ತಲುಪಿದರು. ರಾಮನಿಗೆ ವಿಶೇಷವಾದ ವಸ್ತ್ರಗಳನ್ನು ತಂದು ಪಂಡಿತರಿಗೆ ಅರ್ಪಿಸಿದರು.

ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವೇದ ಮಂತ್ರ, ಮಂಗಳವಾದ್ಯಗಳೊಂದಿಗೆ ಕಾರ್ಯಕ್ರಮ ನಡೆಯಿತು. ಪ್ರಧಾನಿ ಮೋದಿಯವರ ಪಕ್ಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೂಜೆಯಲ್ಲಿ ಪಾಲ್ಗೊಂಡರು.

ಬಳಿಕ ಗರ್ಭಗುಡಿಯಲ್ಲಿರುವ ರಾಮಲಲ್ಲಾ ಪ್ರತಿಮೆಗೆ ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ನೆರವೇರಿಸಿದರು. ವೇದಘೋಷಗಳ ನಡುವೆ ಪೂಜಾದಿಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.20ರಿಂದ 1ರ ನಡುವಿನ ಅಭಿಜಿತ್ ಲಗ್ನದಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭ ಜರುಗಿತು. ವಿದ್ವಾಂಸರ ಸಮ್ಮುಖದಲ್ಲಿ 51 ಇಂಚು ಎತ್ತರದ ರಾಮಲಲ್ಲಾ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಪ್ರಧಾನಿ ಮೋದಿ ರಾಮನಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪ್ರಧಾನಿ ಶ್ರೀರಾಮನಿಗೆ ಆರತಿ ಬೆಳಗಿದರು. ಧನಸ್ಸು ಮತ್ತು ಬಾಣಗಳನ್ನು ಧರಿಸಿ ಚಿನ್ನಾಭರಣಗಳಿಂದ ಅಲಂಕೃತಗೊಂಡಿದ್ದ ಬಾಲರಾಮನನ್ನು ಕಂಡು ಭಕ್ತರು ಪುಳಕಿತರಾದರು.

ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಮುಗಿಯುವವರೆಗೂ 25 ರಾಜ್ಯಗಳ ವಾದ್ಯಗಾರರು ಮಂಗಳವಾದ್ಯಗಳನ್ನು ಬಾರಿಸಿದರು. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮೋದಿ ಮುಖ್ಯ ಯಜಮಾನರಾಗಿದ್ದರು. ಇನ್ನು ದೇಶದ ವಿವಿಧ ರಾಜ್ಯಗಳ 14 ಜೋಡಿಗಳು ಯಜಮಾನರಾಗಿ ಕಾರ್ಯನಿರ್ವಹಿಸಿದರು. ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ದೇವಾಲಯದ ಆವರಣದ ಹೊರಗೆ ಹಾಕಲಾಗಿದ್ದ ಕುರ್ಚಿಗಳಲ್ಲಿ ಕುಳಿತಿದ್ದ ದೇಶ-ವಿದೇಶಿ ಅತಿಥಿಗಳು ಎಲ್‌ಇಡಿ ಪರದೆಯಲ್ಲಿ ಈ ಮಹತ್ವದ ಕ್ಷಣವನ್ನು ವೀಕ್ಷಿಸಿದರು. ಜಗತ್ತಿನಾದ್ಯಂತ ಲಕ್ಷಾಂತರ ಜನರು ಟಿವಿಯಲ್ಲಿ ಲೈವ್ ವೀಕ್ಷಿಸಿದರು ಮತ್ತು ಜಯ ಜಯ ಎಂದು ಘೋಷಣೆ ಕೂಗಿದರು.

51 ಇಂಚಿನ ಬಲರಾಮನ ವಿಗ್ರಹ: ಅಯೋಧ್ಯೆ ರಾಮನ ಪ್ರತಿಮೆಯ ವಿಶೇಷತೆಗಳು: ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಬಾಲರಾಮನ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ. 51 ಇಂಚು ಎತ್ತರದ ಬಾಲರಾಮನ ಪ್ರತಿಮೆಯನ್ನು ದೈವತ್ವವನ್ನು ಪ್ರಚೋದಿಸಲು ಭಕ್ತರನ್ನು ಸೆಳೆಯಲು ವಿನ್ಯಾಸಗೊಳಿಸಲಾಗಿದೆ. ಬಾಲರಾಮನ ವಿಗ್ರಹದ ಎರಡೂ ಬದಿಯಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಯ ಅವತಾರಗಳನ್ನು ಸುಂದರವಾಗಿ ಕೆತ್ತಲಾಗಿದೆ. ಬಾಲರಾಮನ ವಿಗ್ರಹದ ಮೇಲ್ಭಾಗದಲ್ಲಿ ಓಂ, ಗಣೇಶ, ಚಕ್ರ, ಶಂಖಂ, ಗದಾ ಮತ್ತು ಸ್ವಸ್ತಿಕ್ ಚಿಹ್ನೆಗಳಿವೆ. ಬಾಲರಾಮನ ಕಣ್ಣುಗಳು ಕಮಲಾ ನಯನರ ಕಣ್ಣಿಗೆ ಕಾಣುವಂತೆ ಮಾಡಲಾಗಿತ್ತು. ಬಾಲರಾಮನ ವಿಗ್ರಹದ ಕೆಳಭಾಗವನ್ನು ತಿರುಚಲಾಗಿದ್ದು, ಒಂದು ಬದಿಯಲ್ಲಿ ಹನುಮ ಮತ್ತು ಇನ್ನೊಂದು ಬದಿಯಲ್ಲಿ ಗರುಡನಿದ್ದಾನೆ.

ವಿದ್ಯುತ್ ದೀಪಗಳಿಂದ ರಾಮಮಂದಿರ ಅಲಂಕಾರ: ರಾಮಮಂದಿರವನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಸರ್ವಾಂಗವನ್ನು ಸುಂದರವಾಗಿ ಹೂವಿನಿಂದ ಅಲಂಕರಿಸಲಾಗಿದೆ. ಇಡೀ ಅಯೋಧ್ಯೆ ನಗರವನ್ನು ಆಧ್ಯಾತ್ಮಿಕ ಸೌಂದರ್ಯದಿಂದ ಅಲಂಕರಿಸಲಾಯಿತು. ಮೇಲಿನ ಸೇತುವೆಗಳ ಬೀದಿ ದೀಪಗಳನ್ನು ಶ್ರೀರಾಮನ ಚಿತ್ರಗಳಿಂದ ಅಲಂಕರಿಸಲಾಗಿದೆ. ಬಿಲ್ಲುಗಳ ಕಟೌಟ್‌ಗಳನ್ನು ಜೋಡಿಸಲಾಗಿತ್ತು. ಸಾಂಪ್ರದಾಯಿಕ ರಾಮನಂದಿ ತಿಲಕ ವಿನ್ಯಾಸದಿಂದ ದೀಪಗಳನ್ನು ಅಲಂಕರಿಸಲಾಗಿತ್ತು.

ಓದಿ: ಅಯೋಧ್ಯೆ ದೇಗುಲಗಳಲ್ಲಿ ಅರ್ಪಿಸುವ ಹೂವುಗಳ ಸಂಪೂರ್ಣ ಮರುಬಳಕೆ; ಅಗರಬತ್ತಿ ತಯಾರಿಕೆ

Last Updated : Jan 22, 2024, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.