ಮುಂಬೈ (ಮಹಾರಾಷ್ಟ್ರ): ಮುಂಬೈನಿಂದ ಮಾರಿಷಸ್‌ಗೆ ತೆರಳಬೇಕಿದ್ದ MK 749 ಸಂಖ್ಯೆಯ ಏರ್ ಮಾರಿಷಸ್ ವಿಮಾನದ ಹವಾ ನಿಯಂತ್ರಣಗಳು (AC) ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಿದ ಘಟನೆ ವರದಿಯಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದ ಸುಮಾರು ಐದು ಗಂಟೆಗಳ ಕಾಲ ತೊಂದರೆ ಅನುಭವಿಸಿದ್ದೇವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. 78 ವರ್ಷದ ಓರ್ವ ವೃದ್ಧ ಸೇರಿದಂತೆ ಮಕ್ಕಳು, ಮಹಿಳೆಯರು ಉಸಿರಾಡಲು ಗಾಳಿ ಇಲ್ಲದೇ ಸಂಕಷ್ಟಕ್ಕೊಳಗಾದರು ಎಂದು ಕೆಲವರು ಹೇಳಿಕೊಂಡಿದ್ದಾರೆ.
-
Several infants and a 78-year-old passenger on Mumbai to Mauritius flight MK749 of Air Mauritius developed breathing problems as ACs onboard the flight were not working. The flight was to depart at 4:30 am today. Passengers boarded at 3.45 am onwards but the aircraft developed an… pic.twitter.com/urXcyApGBE
— ANI (@ANI) February 24, 2024
''ವಿಮಾನವು ಬೆಳಗ್ಗೆ 4:30ಕ್ಕೆ ಮುಂಬೈನಿಂದ ಸರಿಯಾದ ಸಮಯಕ್ಕೆ ಮಾರಿಷಸ್‌ಗೆ ಹೊರಡಬೇಕಾಗಿತ್ತು. ಬೆಳಗ್ಗೆ 3:45ರ ಸುಮಾರಿಗೆ ಪ್ರಯಾಣಿಕರೆಲ್ಲರೂ ವಿಮಾನ ಏರಿ ಕುಳಿತಿದ್ದರು. ಡೋರ್ ಸೇರಿದಂತೆ ಎಲ್ಲವೂ ಲಾಕ್ ಮಾಡಲಾಗಿತ್ತು. ಇನ್ನೇನು ಟೇಕ್ ಆಫ್ ಆಗಬೇಕಿತ್ತು. ಅಷ್ಟರಲ್ಲೇ ಇದ್ದಕ್ಕಿದ್ದಂತೆ ವಿಮಾನದ ಎಂಜಿನ್ ಹಾಗೂ ಹವಾನಿಯಂತ್ರಣಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಪರಿಣಾಮ ತ್ರಿಶಂಕು ಸ್ಥಿತಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಉಸಿರಾಡಲು ಗಾಳಿ ಇಲ್ಲದೇ ಇತ್ತ ವಿಮಾನದಿಂದ ಇಳಿಯಲೂ ಆಗದೇ ಐದು ಗಂಟೆಗಳ ಕಾಲ ಸಮಸ್ಯೆ ಎದುರಿಸುವಂತಾಯಿತು'' ಎಂದು ಪ್ರಯಾಣಿಕರೊಬ್ಬರು ತಾವು ಎದುರಿಸಿದ ಸಮಸ್ಯೆ ಹೇಳಿಕೊಂಡಿದ್ದಾರೆ.
ಎಸಿಗಳು ಕಾರ್ಯನಿರ್ವಹಿಸದ ಕಾರಣ 78 ವರ್ಷದ ಬಾನುದುತ್ ಬೂಲೌಕಿ ಎಂಬ ಪ್ರಯಾಣಿಕರಲ್ಲಿ ತೀವ್ರತರಹದ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಇದನ್ನು ಕಂಡು ಸಿಬ್ಬಂದಿ, ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಮತ್ತು ಏರ್ ಮಾರಿಷಸ್ ಸಂಪರ್ಕಿಸುವ ಎಲ್ಲ ಪ್ರಯತ್ನ ಮಾಡಿದರು. ಆದರೆ, ಫಲ ನೀಡಲಿಲ್ಲ ಎಂದು ವರದಿಯಾಗಿದೆ.
ವಿಮಾನವನ್ನು ರದ್ದುಗೊಳಿಸಲಾಗಿದ್ದು ಇತರ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಘಟನೆಯ ಕುರಿತು ಏರ್‌ಲೈನ್‌ನಿಂದ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಮತ್ತೊಬ್ಬರು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾಭ್ಯಾಸದಲ್ಲಿ ಕಳಪೆ ಸಾಧನೆಯಿಂದ ಪೋಷಕರ ಭಯ: ನಾನೊಬ್ಬ ಟೆರರಿಸ್ಟ್ ಎಂದ ವಿದ್ಯಾರ್ಥಿ, ಏರ್ಪೋರ್ಟ್ನಲ್ಲಿ ಆತಂಕ