ETV Bharat / bharat

ತಮಿಳುನಾಡು: ಮಹಾ ಶಿವರಾತ್ರಿ ಪ್ರಯುಕ್ತ ಜೋಡೆತ್ತಿನ ಗಾಡಿ ಸ್ಪರ್ಧೆ

ತೂತುಕುಡಿಯಲ್ಲಿ ಸಾಂಪ್ರದಾಯಿಕ ಸಾಂಸ್ಕೃತಿಕ ಹಿನ್ನೆಲೆಯ ಜನಪ್ರಿಯ ಕ್ರೀಡೆ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆ ನಡೆಸಲಾಯಿತು.

author img

By ETV Bharat Karnataka Team

Published : Feb 24, 2024, 1:54 PM IST

ಜೋಡೆತ್ತಿನ ಗಾಡಿ ಸ್ಪರ್ಧೆ
ಜೋಡೆತ್ತಿನ ಗಾಡಿ ಸ್ಪರ್ಧೆ

ತೂತುಕುಡಿ (ತಮಿಳುನಾಡು): ಮಹಾ ಶಿವರಾತ್ರಿ ಪ್ರಯುಕ್ತ ಶನಿವಾರ ಬೆಳಗ್ಗೆ ಇಲ್ಲಿನ ಕಯತಾರು ಪ್ರದೇಶದಲ್ಲಿ ಗ್ರಾಮೀಣ ಕ್ರೀಡೆ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆ ನಡೆಸಲಾಯಿತು. ಇದರಲ್ಲಿ ಹಲವು ಎತ್ತಿನ ಗಾಡಿಗಳು ಭಾಗವಹಿಸಿದ್ದವು. ಇದನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಕೇಕೆ ಮತ್ತು ಚಪ್ಪಾಳೆ ಮೂಲಕ ಜನರು, ಎತ್ತುಗಳ ಮಿಂಚಿನ ಓಟವನ್ನು ಕಣ್ತುಂಬಿಕೊಂಡರು. ಇನ್ನು ಕೆಲವರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎತ್ತು ಹಾಗೂ ಮಾಲೀಕರಿಗೆ ಹುರಿದುಂಬಿಸಿ ಪ್ರೋತ್ಸಾಹ ತುಂಬುವ ಕೆಲಸ ಮಾಡಿದರು. ಎತ್ತುಗಳು ತಾ ಮುಂದು ನೀ ಮುಂದು ಎಂಬಂತೆ ಓಡುತ್ತಿದ್ದ ದೃಶ್ಯ ನೋಡುಗರ ಮೈ ರೋಮಾಂಚನ ತರಿಸಿತು. ಪ್ರತಿ ವರ್ಷ ಪೊಂಗಲ್ ಹಬ್ಬ, ಸ್ವಾತಂತ್ರ್ಯ ಹೋರಾಟದ ಹುತಾತ್ಮರು ಹಾಗೂ ರಾಜಕೀಯ ಮುಖಂಡರ ಜನ್ಮದಿನದಂದು ನಡೆಯುವ ಎತ್ತಿನಗಾಡಿ, ಕುದುರೆ ಗಾಡಿ ಓಟ ತಮಿಳುನಾಡಿನಾದ್ಯಂತ ವಿಶೇಷ. ಅದರಂತೆ ತೂತುಕುಡಿ ಜಿಲ್ಲೆಯ ಕಯತಾರುದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಇಂದು ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಮೊದಲ ಸ್ಥಾನ, ದ್ವಿತೀಯ ಸ್ಥಾನ, ತೃತೀಯ ಸ್ಥಾನ ಪಡೆದ ಎತ್ತುಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಕಂಬಳ, ಜಲ್ಲಿಕಟ್ಟು, ಎತ್ತಿನ ಬಂಡಿ ಓಟಕ್ಕೆ ಸುಪ್ರಿಂ ಕೋರ್ಟ್‌ ಸಾಂವಿಧಾನಿಕ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.