ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನವದಂಪತಿ ನಯನತಾರಾ-ವಿಘ್ನೇಶ್ ಶಿವನ್: ವಿಡಿಯೋ - ತಿರುಪತಿ ತಿಮ್ಮಪ್ಪನ ದರ್ಶನ ನಡೆದ ನಯನತಾರಾ
🎬 Watch Now: Feature Video
ಆಂಧ್ರಪ್ರದೇಶ: ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಂದು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ತಮಿಳುನಾಡಿನ ಮಹಾಬಲೀಪುರಂನಲ್ಲಿ ನಿನ್ನೆ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಇವರು ಸಪ್ತಪದಿ ತುಳಿದಿದ್ದರು. ತಿರುಮಲ ಶ್ರೀಗಳ ದರ್ಶನ ಪಡೆದ ದಂಪತಿ ಮಧ್ಯಾಹ್ನ ದೇವಸ್ಥಾನದಲ್ಲಿ ನಡೆದ ಕಲ್ಯಾಣೋತ್ಸವ ಸೇವೆಯಲ್ಲಿ ಭಾಗಿಯಾದರು. ಬಳಿಕ ದೇಗುಲದಿಂದ ಹೊರಬರುತ್ತಿದ್ದಂತೆ ಅಪಾರ ಸಂಖ್ಯೆಯ ಜನರು ನವಜೋಡಿಯನ್ನು ನೋಡಲು ಮುಗಿಬಿದ್ದರು. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ.