ಮನೆಗೆ ನುಗ್ಗಿ ಮಂಚದ ಮೇಲೆ ಬೆಚ್ಚಗೆ ಮಲಗಿದ್ದ ಹಾವು.. ಬೆಚ್ಚಿಬಿದ್ದ ಕುಟುಂಬ - ETV Bharath Kannada news
🎬 Watch Now: Feature Video
ತುಮಕೂರು: ಬೆಡ್ ಮೇಲೆ ಮಲಗಿದ್ದ ಇಂಡಿಯನ್ ರ್‍ಯಾಟ್ ಸ್ನೇಕ್ ಕಂಡು ಮನೆಯವರು ಬೆಚ್ಚಿಬಿದ್ದ ಘಟನೆ ನಗರದ ಹನುಮಂತಪುರದಲ್ಲಿ ನಡೆದಿದೆ. ನಟರಾಜ್ ಎಂಬುವರ ಮನೆಯ ಮಂಚದ ಮೇಲೆ ಆರು ಅಡಿ ಉದ್ದದ ಇಂಡಿಯನ್ ರ್‍ಯಾಟ್ ಸ್ನೇಕ್ (ಕೆರೆ ಹಾವು) ಮಲಗಿತ್ತು. ಇದನ್ನು ಕಂಡು ಗಾಬರಿಗೊಂಡ ನಟರಾಜ್ ತಕ್ಷಣ ವರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣೆ ಸಂಸ್ಥೆಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಅವರು ಅದನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.
Last Updated : Feb 3, 2023, 8:37 PM IST