ಎಸ್.ಕೆ.ಭಗವಾನ್ ಅಂತಿಮ ದರ್ಶನ ಪಡೆದ ಶಿವರಾಜ್ ಕುಮಾರ್, ಸುಧಾರಾಣಿ - shiva rajkumar takes the darshan of sk bhagwan
🎬 Watch Now: Feature Video
ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎಸ್.ಕೆ.ಭಗವಾನ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಬಾಂಡ್ ಶೈಲಿಯ ಸಿನಿಮಾಗಳು, ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿದ ಖ್ಯಾತಿಯ ಭಗವಾನ್, ಕಳೆದ ಹಲವು ತಿಂಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಭಗವಾನ್ ಅವರ ಮೃತದೇಹದ ಅಂತಿಮ ದರ್ಶನವನ್ನು ನಟ ಶಿವರಾಜ್ ಕುಮಾರ್, ನಟಿ ಸುಧಾರಾಣಿ ಸೇರಿದಂತೆ ಚಿತ್ರರಂಗದ ಅನೇಕ ನಟ ನಟಿಯರು ಪಡೆದು ಸಂತಾಪ ಸೂಚಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಸುಧಾರಾಣಿ, "ಎಸ್.ಕೆ.ಭಗವಾನ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಕೈ ಕೆಳಗೆ ಕೆಲಸ ಮಾಡಿ ತುಂಬಾ ವಿಷಯಗಳನ್ನು ಕಲಿತುಕೊಂಡೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದರು. ಬಳಿಕ ಮಾತನಾಡಿದ ಶಿವರಾಜ್ ಕುಮಾರ್, "ಭಗವಾನ್ ಸರ್ ಅವರನ್ನು ಕಳೆದುಕೊಂಡ ನೋವಿದೆ, ಅವರು ನಮ್ಮನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದಾರೆ. ನಮಗೆ ಇನ್ನೊಬ್ಬ ತಂದೆ ಎಂದರೂ ತಪ್ಪಾಗುವುದಿಲ್ಲ" ಎಂದರು.
ಇದನ್ನೂ ಓದಿ: ಡಾ. ರಾಜ್ಕುಮಾರ್ಗೆ ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ ಭಗವಾನ್ ಇನ್ನಿಲ್ಲ