72 ವರ್ಷದ ವೃದ್ಧನ ಮೇಲೆ ಪುತ್ರ, ಸೊಸೆ, ಮಗಳಿಂದ ಅಮಾನವೀಯ ಹಲ್ಲೆ: ವಿಡಿಯೋ - ರಾಜಸ್ಥಾನ ಅಪರಾಧ ಸುದ್ದಿ
🎬 Watch Now: Feature Video
ವೃದ್ಧ ತಂದೆಗೆ ಆಸರೆಯಾಗಬೇಕಿದ್ದ ಮಗ ಕೋಪದಲ್ಲಿ ದೊಣ್ಣೆಯಿಂದ ಹೊಡೆದು ಭೀಕರವಾಗಿ ಥಳಿಸಿದ್ದಾನೆ. ಈ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ಬೆಳಕಿಗೆ ಬಂದಿದೆ. ಗಾಯಗೊಂಡ 72 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾವುದೋ ಕಾರಣಕ್ಕಾಗಿ ಸೊಸೆ ಮತ್ತು ಮೊಮ್ಮಗಳು ವೃದ್ಧನ ಜೊತೆ ಜಗಳವಾಡಿದ್ದಾರೆ. ಈ ಸಂಗತಿ ತಿಳಿದ ಹಿರಿಯ ಪುತ್ರ ಬಂದವನೇ ವೃದ್ಧನನ್ನು ದೊಡ್ಡ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೆತ್ತ ತಂದೆಯೆಂಬ ಗೌರವವಿಲ್ಲದೇ ಹೊಡೆಯುತ್ತಿರುವುದನ್ನು ಅಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated : Feb 3, 2023, 8:30 PM IST