ETV Bharat / sukhibhava

ನೆರೆಹೊರೆಯ ಸದ್ದು ಕಿರಿಕಿರಿ ಮೂಡಿಸಲು ಕಾರಣವೇನು: ಅಧ್ಯಯನ ಏನು ಹೇಳುತ್ತೆ? - ಸದ್ದುಗಳು ಬಹಳಷ್ಟು ಕಿರಿಕಿರಿ

ಅನಗತ್ಯವಾದ ಶಬ್ದಗಳು ಹೃದಯ ರಕ್ತನಾಳದ ಸಮಸ್ಯೆ ಮತ್ತು ನಿದ್ರೆಗೆ ಭಂಗ ತರುತ್ತವೆ.

ನೆರೆಹೊರೆಯ ಸದ್ದು ಕಿರಿಕಿರಿ ಮೂಡಿಸಲು ಕಾರಣವೇನು: ಅಧ್ಯಯನ ಏನನ್ನುತ್ತೆ?
Why noise from a neighbor is annoying: What's the study?
author img

By

Published : Dec 7, 2022, 2:04 PM IST

ಟೊರಾಂಟೋ( ಕೆನಡ): ನಮ್ಮ ಅಕ್ಕ- ಪಕ್ಕದ ಮನೆಯಲ್ಲಿ ಆಗುವ ಸದ್ದುಗಳು ಬಹಳಷ್ಟು ಕಿರಿಕಿರಿ ಮೂಡಿಸುತ್ತವೆ. ಅದರಲ್ಲೂ ಫ್ಲಾಟ್​ಗಳು ಆಥವಾ ಬಹು ಅಂತಸ್ತಿನ ನಿವಾಸಿಗಳಿಗೆ ಈ ಸದ್ದಿನಿಂದ ಆಗುವ ತೊಂದರೆ ಹೆಚ್ಚು. ಇದು ಶಬ್ಧದ ಪರಿಣಾಮ ಎನ್ನಲಾಗುವುದು.

ಶಬ್ಧದ ಪರಿಣಾಮದಿಂದ ಉಂಟಾಗುವ ಕಿರಿಕಿರಿ ಕುರಿತು ನಡೆಸಿರುವ ಸಂಶೋಧನೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಅನೇಕ ಸರಣಿ ವಿನ್ಯಾಸದ ಪ್ರಯೋಗ ನಡೆಸಲಾಗಿದ್ದು, ಅಕ್ಕ- ಪಕ್ಕದ ಶಬ್ದದಿಂದಾಗುವ ಕಿರಿಕಿರಿ ಅನುಭವಿಸಲಾಗಿದೆ. ಅನಗತ್ಯವಾದ ಶಬ್ದಗಳು ಹೃದಯ ರಕ್ತನಾಳದ ಸಮಸ್ಯ ಮತ್ತು ನಿದ್ರೆಗೆ ಭಂಗ ತರುತ್ತವೆ. 2020ಕ್ಕಿಂತ ಮುಂಚೆ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಹೆಚ್ಚುವುದಕ್ಕೆ ಮೊದಲು ನಗರದಲ್ಲಿ ಜನ ಸಂಖ್ಯೆ ಪ್ರಮಾಣ ಹೆಚ್ಚಿದ್ದು, ಆಗ ಈ ವಿಷಯ ಹೆಚ್ಚು ವಾಸ್ತವಿಕವಾಗಿದೆ ಎಂಬುದಾಗಿ ಸಂಶೋಧಕ ಮುಲ್ಲರ್​ ಟರ್ಪೆ​ ತಿಳಿಸಿದ್ದಾರೆ.

ಪ್ರಮಾಣಿತ ಪ್ರಯೋಗಗಳ ಮಾಪನ ಮತ್ತು ಶಬ್ದದ ಪ್ರಭಾದ ಮೂಲಗಳ ಮೇಲಿನ ಕಿರಿಕಿರಿ ನಡುವಿನ ಸಂಬಂಧವನ್ನು ತಿಳಿಯಲು ಅಂತಾರಾಷ್ಟ್ರೀಯ ಸಂಶೋಧನಾ ತಂಡ ಮುಂದಾಯಿತು ಈ ವೇಳೆ, ಅವರಿಗೆ ಲೀವಿಂಗ್​ ರೂಂ ಒಂದನ್ನು ನೀಡಲಾಯಿತು. ಈ ವೇಳೆ, ವಸ್ತುಗಳನ್ನು ಬೀಳಿಸುವುದು, ಜನರು ನಡೆದಾಡುವ ಶಬ್ಧವನ್ನು ವಿವಿಧ ಹಿನ್ನೆಲೆ​ ತಂತ್ರ ಮತ್ತು ವರ್ಚುಯಲ್​ ರಿಯಾಲಿಟಿ ಮೂಲಕ ದಾಖಲಿಸಲಾಯಿತು.

ಇದಕ್ಕೆ ಪೂರಕವಾಗಿ ಲ್ಯಾಟರೋಟರಿ ಪ್ರಯೋಗಾಲಯದಲ್ಲಿ ಆನ್​ಲೈನ್​ ಸಮೀಕ್ಷೆ ಮೂಲಕ ಮಾದರಿಯನ್ನು ವಿಸ್ತರಿಸಲಾಯಿತು. ಈ ಸಮೀಕ್ಷೆ ನ. 21. 2022ರಿಂದ ಮಾರ್ಚ್​ 31, 2023ರವರೆಗೆ ನಡೆಯಲಿದೆ. ಈ ವೇಳೆ, ಸಾಮಾನ್ಯವಾದ ನಿರಂತರ ಶಬ್ಧಗಳಾದ ಸಂಗೀತ ಅಥವಾ ಭಾಷಣಗಳಿಗಿಂತ ಕಡಿಮೆ ಅವಧಿಯ ವಿಶೇಷ ಶಬ್ಧಗಳು ಹೆಚ್ಚು ಕಿರಿಕಿರಿ ನೀಡುತ್ತಿದ್ದವು ಎಂಬುದು ತಿಳಿದು ಬಂದಿದೆ. ಬರಿಗಾಲಿನಲ್ಲಿ ನಡೆಯುವ ಶಬ್ದಗಳನ್ನು ಬಿಲ್ಡಿಂಗ್​ ಕೋಡ್​​ನ ಪ್ರಸ್ತುತ ಪ್ರಮಾಣಿತ ಕಾರ್ಯಕ್ಷಮತೆ​ ಮೆಟ್ರಿಕ್ಸ್​ನಲ್ಲಿ ಸೆರೆಹಿಡಿಯಲಾಗಿಲ್ಲ. ಅಸ್ತಿತ್ವದಲ್ಲಿರುವ ಮೆಟ್ರಿಕ್ಸ್​ಗಳೊಂದಿಗೆ ಸಂಯೋಜಿಸುವುದು ಸಂಶೋಧನಾ ತಂಡವನ್ನು ಎದುರಿಸುತ್ತಿರುವ ಸವಾಲು ಆಗಿದೆ.

ಈ ಕೆಲಸವನ್ನು ಮುಂದುವರೆಸುತ್ತಾ, ಆರ್ಕಿಟೆಕ್ಟ್​​ ಮತ್ತು ಬಿಲ್ಡಿಂಗ್​ ಕೋಡ್​ ಅಭಿವೃದ್ಧಿ ಪಡುಸುವವರು ವಾಸಯೋಗ್ಯವಾದ ಪರಿಸರವನ್ನು ನಿರ್ಮಿಸುವ ಆಶೆಯನ್ನು ತಂಡ ಹೊಂದಿದೆ.

ಇದನ್ನೂ ಓದಿ: ಅತೀಂದ್ರಿಯ ಚಿಕಿತ್ಸೆಗೆ ಅಲೋವೆರಾ ಜೆಲ್ ಉತ್ತಮ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.