ETV Bharat / sukhibhava

ಕ್ಯಾನ್ಸರ್​ನಿಂದಾಗುವ ಸಾವಿನ ಅಪಾಯ ಕಡಿಮೆ ಮಾಡುತ್ತೆ ವಿಟಮಿನ್​ ಡಿ

author img

By

Published : May 24, 2023, 12:12 PM IST

ವಿಟಮಿನ್​ ಡಿ ಕೇವಲ ಮೂಳೆಗಳ ಆರೋಗ್ಯಕ್ಕೆ ಮಾತ್ರ ಎಂಬುದು ಸಾಮಾನ್ಯ ತಪ್ಪು ಕಲ್ಪನೆಯಾಗಿದೆ. ಇದು ಸಂಪೂರ್ಣ ಆರೋಗ್ಯಕ್ಕೆ ಅತ್ಯವಶ್ಯಕವಾಗಿದೆ.

Vitamin D reduces the risk of cancer death

ಬೆಂಗಳೂರು: ವಿಟಮಿನ್​ ಡಿ ಮೂಳೆಗಳ ಆರೋಗ್ಯಕ್ಕೆ ಮಾತ್ರವಲ್ಲ. ಇದು ದೇಹದಲ್ಲಿನ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಮತ್ತು ಇತರ ಹಲವಾರು ಚಟುವಟಿಕೆಗಳಿಗೆ ಅಗತ್ಯವಾಗಿದೆ. ಈ ವಿಟಮಿನ್​ ಡಿ ಯನ್ನು ನೈಸರ್ಗಿಕವಾಗಿ ಪ್ರತಿದಿನ ಅಗತ್ಯ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಯಾನ್ಸರ್‌ ಸಂಬಂಧಿತ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ಸಂಬಂಧ ಜರ್ಮನ್ ಕ್ಯಾನ್ಸರ್​​​ ರಿಸರ್ಚ್​ ಕೇಂದ್ರ ಅಧ್ಯಯನ ನಡೆಸಿದೆ. ಪ್ರತಿನಿತ್ಯ ವಿಟಮಿನ್​ ಡಿ ಸೇವನೆ ಮಾಡುವುದರಿಂದ ಕ್ಯಾನ್ಸರ್​ನಿಂದ ಸಾವನ್ನಪ್ಪುವ ಅಪಾಯವನ್ನು ಶೇ 12ರಷ್ಟು ಕಡಿಮೆ ಮಾಡಬಹುದು. ಅದರಲ್ಲೂ ವಿಶೇಷವಾಗಿ 70 ವರ್ಷಗಳ ಮೇಲ್ಪಟ್ಟವರಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಅಧ್ಯಯನ ಫಲಿತಾಂಶ: ಕ್ಯಾನ್ಸರ್​ನಿಂದ ಸಂಭವಿಸುವ​ ಸಾವಿನ ಮೇಲೆ ವಿಟಮಿನ್​ ಡಿ ಪರಿಣಾಮ ಕುರಿತು ಡಾ ಬೆನ್ ಶಾಟ್ಕರ್ ತಂಡ ಅಧ್ಯಯನ ನಡೆಸಿದ್ದು, ಜರ್ನಲ್​ ಏಜಿಂಗ್​ ರಿಸರ್ಜ್​ ರಿವ್ಯೂನಲ್ಲಿ ಪ್ರಕಟವಾಗಿದೆ. ವಿಟಮಿನ್​ ಡಿ ಮತ್ತು ಕ್ಯಾನ್ಸರ್​ ನಡುವಿನ ಸಂಬಂಧಗಳ ಕುರಿತು ಈ ಮೊದಲೇ ಅಧ್ಯಯನಗಳನ್ನು ನಡೆಸಲಾಗಿದೆ. ಆದರೆ, ಇವು ಸರಿಯಾದ ಮತ್ತು ಸ್ಪಷ್ಟವಾದ ಫಲಿತಾಂಶ ನೀಡಿಲ್ಲ. ಆದಾಗ್ಯೂ, ಕೆಲವು ಅಧ್ಯಯನಗಳು ವಿಟಮಿನ್​ ಡಿ ಪೂರಕಗಳು ಕ್ಯಾನ್ಸರ್​ ಸಾವಿನ ಪ್ರಮಾಣದಲ್ಲಿ ಉತ್ತಮ ಫಲಿತಾಂಶ ನೀಡುತ್ತವೆ ಎಂಬುದನ್ನು ತಿಳಿಸಿದೆ. ಹಿಂದಿನ ಅಧ್ಯಯನಗಳ ಆಧಾರದ ಮೇಲೆ ಡಾ ಶಾಟ್ಕರ್​ ಮತ್ತು ತಂಡ ವಿಟಮಿನ್​ ಡಿ3 ಪ್ರಯೋಜನಗಳ ಕುರಿತು ಗಮನ ಕೇಂದ್ರಿಕರಿಸಿದೆ.

ಈ ಅಧ್ಯಯನದಲ್ಲಿ, ಸಂಶೋಧಕರು 12 ಅಧ್ಯಯನಗಳ ದತ್ತಾಂಶ ಮತ್ತು 1,05,000 ಜನರ ಫಲಿತಾಂಶ ಸೇರಿದಂತೆ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನದ ಭಾಗಿದಾರರು ನೇರವಾಗಿ ವಿಟಮಿನ್​ ಡಿ ಪಡೆದ ದತ್ತಾಂಶವನ್ನು ಒಳಗೊಂಡಿದೆ. ಪ್ರತಿನಿತ್ಯ ವಿಟಮಿನ್​ ಡಿ ಸೇವಿಸಿದವರಲ್ಲಿ, ಇದು ಕ್ಯಾನ್ಸರ್​ ಸಾವಿನ ಮೇಲೆ ಗಮನಾರ್ಹ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಅಧ್ಯಯನ ತಿಳಿಸಿದೆ.

ಪ್ರತಿನಿತ್ಯ ವಿಟಮಿನ್​ ಡಿ3 ಅನ್ನು ನಿಯಮಿತವಾಗಿ ಸೇವನೆ ಮಾಡದವರಿಗಿಂತ, ನಿತ್ಯ ಸೇವನೆ ಮಾಡಿದವರಲ್ಲಿ ಕ್ಯಾನ್ಸರ್​ ಮರಣದ ಅಪಾಯ ಶೇ 12ರಷ್ಟು ಇಳಿಕೆ ಆಗಿರುವುದು ಕಂಡು ಬಂದಿದೆ. ಈ ಅಧ್ಯಯನಕ್ಕೆ 70 ವರ್ಷದ ಮತ್ತು ಅದಕ್ಕಿಂತ ಹೆಚ್ಚಿನವರನ್ನು ಭಾಗಿಯಾಗಿಸಲಾಗಿದೆ. ವಯಸ್ಸಾದಂತೆ ಕ್ಯಾನ್ಸರ್​ ಅಪಾಯ ಹೆಚ್ಚುವುದನ್ನು ಈ ಅಧ್ಯಯನ ತಿಳಿಸಿದೆ. ಆದರೆ, ವ್ಯಕ್ತಿ 50 ವರ್ಷವಾದ ಬಳಿಕ ಪ್ರತಿನಿತ್ಯ ವಿಟಮಿನ್​ ಡಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ ಎಂದು ತಿಳಿಸಿದೆ. ವೈದ್ಯರ ಪ್ರಕಾರ, ವಿಟಮಿನ್​ ಡಿ ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಅಗತ್ಯವಾಗಿದ್ದು, ಹಲವು ಪ್ರಯೋಜನ ಹೊಂದಿದೆ.

ವಿಟಮಿನ್​ ಡಿ ಪ್ರಯೋಜನಗಳು..

  • ಇದು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ
  • ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
  • ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ
  • ಸ್ನಾಯು ಬೆಳವಣಿಗೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯಕರ ನರ ಮಂಡಲ ವ್ಯವಸ್ಥೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ: ದೀರ್ಘಕಾಲದ ಆಯಾಸ, ನೋವು ನಿವಾರಣೆಗೆ ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.