ಹೈದರಾಬಾದ್: ವಿಡಿಯೋ ಗೇಮ್ಗಳ ಅತಿಯಾದ ಶಬ್ಧದಿಂದ ಕೇಳುವಿಕೆ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದು ಕಿವುಡತಕ್ಕೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಈ ಕುರಿತು ಮಾಹಿತಿ ಪ್ರಕಟವಾಗಿದ್ದು, ವಿಡಿಯೋ ಗೇಮ್ ಆಡುವವರಿಗೆ ಎಚ್ಚರಿಕೆಯನ್ನು ನೀಡಿದೆ.
ವಿಡಿಯೋ ಗೇಮ್ ಆಡುವಾಗ ಬಳಕೆ ಮಾಡುವ ಶಬ್ಧ ಅತಿ ಹೆಚ್ಚಿರುತ್ತದೆ. ಹೆಡ್ಫೋನ್, ಇಯರ್ ಬಡ್ಸ್ಗಳ ಮೂಲಕ ಕೇಳಿದಾಗ ಅದರ ತೀವ್ರತೆ ಮತ್ತಷ್ಟು ಹೆಚ್ಚಿರಲಿದೆ. ಈ ಸಂಗೀತದ ಸ್ಥಳಗಳು ಅಸುರಕ್ಷಿತ ಶಬ್ಧದ ಮಟ್ಟವನ್ನು ಹೊಂದಿದೆ. ಪ್ರತಿನಿತ್ಯ ವಿಡಿಯೋ ವಿಡಿಯೋ ಗೇಮ್ಗಳಿಗೆ ಒಡ್ಡಿಕೊಳ್ಳುವುದರಿಂದ ಅನುಮತಿಸಲಾದ ಮಟ್ಟಕ್ಕಿಂತಲೂ ಹೆಚ್ಚಿನ ಶಬ್ಧಕ್ಕೆ ಒಡ್ಡಿಕೊಳ್ಳಲಾಗುವುದು. ಇದು ಕೇಳುವಿಕೆ ಮೇಲೆ ಭಾರೀ ಪರಿಣಾಮ ಬೀರಲಿದೆ.
ಈ ಅಧ್ಯಯನವನ್ನು 9 ದೇಶದಲ್ಲಿ 560 ಸಾವಿರ ಜನರನ್ನು ಭಾಗಿದಾರರನ್ನಾಗಿಸಿ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ಸೌತ್ ಕರೊಲಿನಾ ಯುನಿವರ್ಸಿಟಿ ಕೂಡ ಭಾಗಿಯಾಗಿದೆ. 2022ರಲ್ಲಿ ಜಗತ್ತಿನಾದ್ಯಂತ 300 ಮಿಲಿಯನ್ ಜನರು ವಿಡಿಯೋ ಗೇಮ್ ಆಡಿದ್ದಾರೆ. ಇದರಲ್ಲಿ 20 ರಿಂದ 68 ಪ್ರತಿಶತ ಯುವ ವಯಸ್ಕರಾಗಿದ್ದಾರೆ. ವಾರದಲ್ಲಿ 40 ಗಂಟೆಗಳ ಕಾಲ 75 ಡೆಸಿಬಲ್ನ ಶಬ್ಧವನ್ನು ಕೇಳಿದಾಗ ಅದು ಶ್ರವಣ ಸಮಸ್ಯೆಗೆ ಕಾರಣವಾಗುತ್ತದೆ. 83 ಡೆಸಿಬಲ್ನ ಶಬ್ಧವನ್ನು ವಾರದಲ್ಲಿ ಆರೂವರೆ ಗಂಟೆಗಳ ಕಾಲ ಕೇಳುವುದರಿಂದ ಯಾವುದೇ ಅಪಾಯವಿಲ್ಲ ಎಂದು ಅಧ್ಯಯನ ತಿಳಿಸಿದೆ.
ಅಧ್ಯಯನದಲ್ಲಿ ಹೆಚ್ಚಿನ ಶಬ್ಧದ ಬಳಕೆಯು ಕಿವಿ ಕೇಳುವಿಕೆ ನಷ್ಟದೊಂದಿಗೆ ಸಂಬಂಧ ಹೊಂದಿದೆ. ಮತ್ತೊಂದು ದೊಡ್ಡ ಅಬ್ಸರ್ವೇಷನ್ ಅಧ್ಯಯನದಲ್ಲಿ ವಿಡಿಯೋ ಗೇಮಿಂಗ್ ಸ್ವಯಂ ಕೇಳುವಿಕೆ ನಷ್ಟದ ತೀವ್ರತೆಯೊಂದಿಗೆ ಸಂಬಂಧ ಹೊಂದಿದೆ. ಇದರಲ್ಲಿ ಒಂದು ಅಧ್ಯಯನವು ಅಮೆರಿದಲ್ಲಿ 10 ಮಿಲಿಯನ್ ಮಂದಿ ವಿಡಿಯೋ ಅಥವಾ ಕಂಪ್ಯೂಟರ್ ಗೇಮ್ಸ್ಗಳಿಂದ ದೊಡ್ಡ ಮತ್ತು ಅತಿದೊಡ್ಡ ಶಬ್ಧದ ಮಟ್ಟಕ್ಕೆ ತೆರೆದುಕೊಳ್ಳುವುದಾಗಿ ವರದಿ ಮಾಡಿದೆ.
ಆದಾಗ್ಯೂ ಈ ದತ್ತಾಂಶವು ವಿಶ್ಲೇಷಣೆಗೆ ಸೀಮಿತವಾಗಿದೆ. ಕೆಲವು ಗೇಮರ್ಗಳು ವಿಶೇಷವಾಗಿ ಪದೇ ಪದೇ ಗೇಮಿಂಗ್ ಆಡುವವರು ಸಾಮಾನ್ಯ ಮತ್ತು ಅದಕ್ಕಿಂತ ಹೆಚ್ಚಿನ ಶಬ್ಧದ ಮಟ್ಟಕ್ಕೆ ತೆರೆದುಕೊಳ್ಳುತ್ತಾರೆ. ಮಿತಿ ಮೀರಿದ ಶಬ್ಧಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅಸುರಕ್ಷುತ ಕೇಳುವಿಕೆ ಅಭ್ಯಾಸವು ಕೇಳುವಿಕೆ ನಷ್ಟದ ಅಪಾಯವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಪ್ರತಿಯೊಬ್ಬರ ಬೆರಳಚ್ಚು ವಿಶಿಷ್ಟವಾಗಿಲ್ಲ, ಹೋಲಿಕೆ ಇದೆ ಎಂಬುದನ್ನು ಬಹಿರಂಗಪಡಿಸಿದ AI