ಬೇಸಿಗೆ ಬಂದಾಕ್ಷಣ ಕಬ್ಬಿನ ಜ್ಯೂಸ್‌ಗೆ ಬೇಡಿಕೆ ಹೆಚ್ಚು. ಇದು ಬಿರುಬಿಸಲಿಂದ ಉಂಟಾಗುವ ದೇಹದ ದಾಹ ನೀಗಿಸುತ್ತದೆ. ಆರೋಗ್ಯಕ್ಕೆ ಬೇಕಿರುವ ಅಗತ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ. ಇದನ್ನು ಹೊರತುಪಡಿಸಿದಂತೆ ಕಬ್ಬಿನಿಂದ ಹಲವು ಪ್ರಯೋಜನಗಳಿವೆ. ಇದೇ ಕಬ್ಬಿನ ರಸವನ್ನು ಸೌಂದರ್ಯ ವರ್ಧಕಗಳಾಗಿಯೂ ಉಪಯೋಗಿಸುವುದರ ಬಗ್ಗೆ ನಿಮಗೆ ಗೊತ್ತೇ?. ಈ ವಿಚಾರ ಕೇಳಿದಾಕ್ಷಣ ಅಚ್ಚರಿ ಯಾದರೂ ಇದರ ಲಾಭ ತಿಳಿದ ಮೇಲೆ ಒಪ್ಪಿಕೊಳ್ಳದೆ ಇರಲಾರಿರಿ.
ಕಬ್ಬಿನ ರಸವನ್ನು ಮುಖದ ಮೇಲೆ ಹಚ್ಚಿ, ಹತ್ತು- ಹದಿನೈದು ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮುಖದಲ್ಲಿನ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವನ್ನು ಇದು ತಡೆಯುತ್ತದೆ. ಇದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಲ್ಲಿನ ಅಲ್ಫಾ ಹೈಡ್ರಾಕ್ಸಿ ಆಮ್ಲ ಕಪ್ಪು ವರ್ತುಲ ಮತ್ತು ಬಿಳಿ ವರ್ತುಲವನ್ನು ನಿವಾರಣೆ ಮಾಡುವುದರೊಂದಿಗೆ ಮೊಡವೆಯ ಕಲೆಯನ್ನೂ ಹೋಗಲಾಡಿಸುತ್ತದೆ.
ಕಬ್ಬಿನ ರಸದಲ್ಲಿ ಗ್ಲಕೊಲಿಕ್ ಆಮ್ಲ ಹೆಚ್ಚಿದೆ. ಚರ್ಮ ಒಣ, ಶುಷ್ಕತೆ ಅನುಭವಿಸುತ್ತಿದೆ ಎಂದರೆ ಈ ರಸವನ್ನು ಹಚ್ಚಿಕೊಳ್ಳಿ. ಇದು ಡಲ್ ಎನಿಸುವ ತ್ವಚೆಗೆ ಅಗತ್ಯ ತೇವಾಂಶ ನೀಡಿ, ಆರೋಗ್ಯಯುತವನ್ನಾಗಿ ಮಾಡುತ್ತದೆ. ಇದರಲ್ಲಿ ಪ್ರೋಟಿನ್, ಮಿನರಲ್ಸ್, ಐರನ್, ಜಿಂಕ್, ಪೋಟಾಶಿಯಂ, ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಲೆವನೊಯ್ಡ್ ಕಡಿಮೆ ಮಾಡುತ್ತದೆ. ರಾಡಿಕಲ್ ಅನ್ನೂ ಕಡಿಮೆ ಮಾಡುತ್ತದೆ. ಇದರಲ್ಲಿನ ವಿಟಮಿನ್ ಸಿ ಮುಖದ ಸುಕ್ಕು ಮತ್ತು ಗೆರೆಗಳನ್ನು ನಿರ್ಮೂಲನೆ ಮಾಡುವುದು.
ತ್ವಚೆ ಮಾತ್ರವಲ್ಲ, ಕೂದಲಿನ ಅಂದಕ್ಕೂ ಇದು ಸಹಾಯಕ. ಕಬ್ಬಿನ ರಸವನ್ನು ಕೂದಲ ಬುಡಕ್ಕೆ ಶ್ಯಾಂಪೂವಾಗಿ ಬಳಸಿ, ಮೃದುವಾಗಿ ಮಸಾಜ್ ಮಾಡಿ ಒಂದೆರಡು ನಿಮಿಷದ ಬಳಿಕ ತಣ್ಣೀರಿನಲ್ಲಿ ಕೂದಲು ತೊಳೆಯಿತು. ಇದರಲ್ಲಿನ ವಿಟಮಿನ್, ಮಿನರಲ್ಸ್ ಮತ್ತು ಅಮಿನೊ ಆಮ್ಲಗಳು ಕೂದಲಿಗೆ ಪೋಷಕಾಂಶ ನೀಡಿ, ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಕಂಡಿಷನರ್‌ನಂತೆ ಬಳಕೆ ಯಾಗುವ ಹಿನ್ನೆಲೆಯಲ್ಲಿ ಕೂದಲಿಗೆ ತೇವಾಂಶ ನೀಡಿ, ಹೊಳೆಯುವಂತೆ ಮಾಡುತ್ತೆ. ಪಿಹೆಚ್ ಮಟ್ಟ ನಿಯಂತ್ರಣಕ್ಕೆ ಸಹಾಯ ಮಾಡುವುದರೊಂದಿಗೆ ತಲೆ ಹೊಟ್ಟಿನ ಸಮಸ್ಯೆ ದೂರ ಮಾಡುತ್ತದೆ.
ವಯಸ್ಸಾಗುವಿಕೆಗೆ ತಡೆ: ವಯಸ್ಸಾಗುವಿಕೆಯನ್ನು ನಡೆಯುವಲ್ಲಿ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ. ತ್ವಚೆಯನ್ನು ಮೃದುಗೊಳಿಸುವ ಜೊತೆಗೆ ಆಂತರಿಕವಾಗಿ ಹೊಳೆಯುವಂತೆ ಮಾಡುತ್ತದೆ. ಗ್ಲೈಕೊಲಿಕ್ ಆಮ್ಲಗಳು ತ್ವಚೆಯನ್ನು ಹೊಳೆಯಿಸುತ್ತದೆ.
ಕಬ್ಬಿನ ರಸದಲ್ಲಿ ನೈಸರ್ಗಿಕ ಸುಕ್ರೋಸ್ ಇದ್ದು, ಇದು ಶಕ್ತಿಯ ಮೂಲ. ಇದು ನಷ್ಟವಾದ ಸಕ್ಕರೆ ಮಟ್ಟವನ್ನು ಮರು ಪಡೆಯಲು ಗ್ಲೂಕೋಸ್ ಬಿಡುಗಡೆ ಮಾಡುತ್ತದೆ. ದೇಹವನ್ನು ಹೈಡ್ರೇಟ್ ಮಾಡಿ, ಆಲಸ್ಯವನ್ನೂ ಹೊಡೆದೊಡಿಸಬಲ್ಲದು. ಜಾಂಡಿಸ್ ವಿರುದ್ಧ ಹೋರಾಡಲು ಕೂಡ ಇದು ಮುಖ್ಯ. ಆಯುರ್ವೇದದ ಅನುಸಾರ ಯಕೃತ್ಗೆ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಂಡೆಟ್ ಯಕೃತ್ ಸೋಂಕಿನ ವಿರುದ್ಧ ಹೋರಾಡುತ್ತದೆ.
ಇದನ್ನೂ ಓದಿ: ಸನ್ಸ್ಕ್ರೀನ್ ಬಳಕೆಯ ಅಗತ್ಯವೇನು?