ETV Bharat / sukhibhava

ಇಂದು ವಿಶ್ವ ಕಿಡ್ನಿ ದಿನ: ಮೂತ್ರಪಿಂಡದ ಸಮಸ್ಯೆ ನಿರ್ಲಕ್ಷ್ಯ ಜೀವನಕ್ಕೆ ಆಗಲಿದೆ ದುಬಾರಿ

ದೇಹದ ವಿಷಕಾರಿ ಅಂಶವನ್ನು ತೆಗೆದು ಹಾಕಲು, ರಕ್ತದೊತ್ತಡವನ್ನು ಸಾಮಾನ್ಯ ಮಾಡಲು, ಆಮ್ಲದ ಮಟ್ಟವನ್ನು ನಿಯಂತ್ರಿಯಸಲು ಇದು ಸಹಕಾರಿ

Today is World Kidney Day: do not Neglect  kidney problems

author img

By

Published : Mar 9, 2023, 3:44 PM IST

ಹೈದರಾಬಾದ್​: ಕೆಟ್ಟ ಅಂಶಗಳನ್ನು ಸೋಸುವ ಜರಡಿಯಂತೆ ಕಿಡ್ನಿ ದೇಹದಲ್ಲಿ ಕಾರ್ಯ ನಿರ್ವಹಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಸೋಸುವಿಕೆಯಲ್ಲಿ ಕಿಡ್ನಿ ಪಾತ್ರ ಪ್ರಧಾನ. ಈ ಸೋಸುವಿಕೆಯ ಜರಡಿಯಲ್ಲಿ ಸಮಸ್ಯೆ ಉಂಟಾದರೆ, ದೇಹದಲ್ಲಿ ವಿಷಕಾರಿ ಅಂಶಗಳು ಶೇಖರಣೆಯಾಗುತ್ತದೆ. ಇದರಿಂದ ಅಂಗಾಂಗ ಹಾನಿ ಸೇರಿದಂತೆ, ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕಿಡ್ನಿಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್​ ಎರಡನೇ ವಾರದ ಗುರುವಾರದಂದು ಅಂತಾರಾಷ್ಟ್ರೀಯ ಕಿಡ್ನಿ ದಿನವಾಗಿ ಆಚರಿಸಲಾಗುತ್ತದೆ.

ಈ ಮೂಲಕ ಕಿಡ್ನಿ ಸಮಸ್ಯೆ, ಅದಕ್ಕೆ ಕಾರಣ ಮತ್ತು ಅದನ್ನು ತಡೆಗಟ್ಟುವ ಕ್ರಮ ಜೊತೆಗೆ ಇನ್ನಿತರ ಸಮಸ್ಯೆಗಳ ಕುರಿತು ಸಾಮಾನ್ಯ ಜನರು ಅರಿಯಬೇಕಿದೆ. ಇನ್ನು ಈ ಬಾರಿ ಮಾರ್ಚ್​ 9ರ ವಿಶ್ವ ಕಿಡ್ನಿದಿನದ ಘೋಷವಾಕ್ಯ: ಎಲ್ಲರಿಗೂ ಕಿಡ್ನಿ ಆರೋಗ್ಯ - ಅನಿರೀಕ್ಷಿತತೆಗಾಗಿ ತಯಾರಿ, ದುರ್ಬಲರನ್ನು ಬೆಂಬಲಿಸುವುದು (Kidney Health for All - Preparing for the Unexpected, Supporting the Vulnerable) ಆಗಿದೆ.

ಆರೋಗ್ಯಯುತ ಕಿಡ್ನಿಯನ್ನು ಪ್ರತಿಯೊಬ್ಬರು ಹೊಂದ ಬೇಕು ಎಂಬ ಉದ್ದೇಶದಿಂದ ಸಾಮಾನ್ಯ ಜನರಿಗಾಗಿ ಈ ಅಂತಾರಾಷ್ಟ್ರೀಯ ಕಿಡ್ನಿ ದಿನದಂದು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು. ಸಾರ್ವಜನಿಕರಿಗೆ ಈ ಸಂಬಂಧ ಮಾಹಿತಿ, ಸೆಮಿನಾರ್​ ಮತ್ತು ಮ್ಯಾರಾಥಾನ್​ಗಳನ್ನು ಏರ್ಪಡಿಸುವ ಮೂಲಜ ಕಿಡ್ನಿ ಆರೋಗ್ಯದ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಲಾಗುವುದು.

2006ರಲ್ಲಿ ಇಂಟರ್​ನ್ಯಾಷನಲ್​ ಸೊಸೈಟಿ ಆಫ್​ ನೆಫ್ರೋಲಾಜಿ ಮತ್ತು ಇಂಟರ್​ನ್ಯಾಷನಲ್​ ಫೆಡರೇಷನ್​ ಆಫ್​ ಕಿಡ್ನಿ ಫೌಂಡೇಶನ್​ ಜಂಟಿಯಾಗಿ ಈ ಅಂತಾರಾಷ್ಟ್ರೀಯ ಕಿಡ್ನಿ ದಿನವನ್ನು ಸ್ಥಾಪಿಸಿದವು. ಕಿಡ್ನಿ ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ತಿಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿತ್ತು. ಆರಂಭದಲ್ಲಿ 2006ರಲ್ಲಿ 66 ದೇಶಗಳು ಒಟ್ಟಿಗೆ ಈ ಕಿಡ್ನಿ ದಿನವನ್ನು ಆಚರಿಸಿದವು. ಇದಾದ ಎರಡು ವರ್ಷಗಳ ಬಳಿಕ ಇದು ಸ್ಥಾಪನೆಯಾಯಿತು. ಇದೀಗ 66 ಇದ್ದ ರಾಷ್ಟ್ರಗಳ ಸಂಖ್ಯೆ 88ಕ್ಕೆ ಬಂದಿದೆ. ಪ್ರಸ್ತುತ, ಜಗತ್ತಿನಾದ್ಯಂತ ಇದೀಗ ಅನೇಕ ದೇಶಗಳು ಈ ದಿನವನ್ನು ಆಚರಿಸುತ್ತಾ ಈ ಸಂಬಂಧ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿವೆ.

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಒಂದು. ದೇಹದ ವಿಷಕಾರಿ ಅಂಶವನ್ನು ತೆಗೆದು ಹಾಕಲು, ರಕ್ತದೊತ್ತಡವನ್ನು ಸಾಮಾನ್ಯ ಮಾಡಲು, ಆಮ್ಲದ ಮಟ್ಟವನ್ನು ನಿಯಂತ್ರಿಯಸಲು ಇದು ಸಹಕಾರಿ. ಆದರೆ, ಕೆಲವು ಸಮಸ್ಯೆಗಳಿಂದಾಗಿ ಈ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದಾಗಿ ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ಸೋಸುವ ಸಾಮರ್ಥ್ಯ ಕಳೆದುಕೊಂಡು ದೇಹದಲ್ಲಿ ಇದು ಶೇಖರಣೆಗೊಳ್ಳುತ್ತದೆ. ಇದೇ ಕಾರಣ, ಆರೋಗ್ಯದ ಅಪಾಯ ಹೆಚ್ಚಿ, ಕಿಡ್ನಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ನಿರ್ಲಕ್ಷ್ಯ ಬೇಡ: ಪ್ರತಿ ವರ್ಷ ಈ ರೀತಿ ಗಂಭೀರ ಕಿಡ್ನಿ ಸಮಸ್ಯೆ ಅನ್ನು ಅನೇಕ ಮಂದಿ ಜಗತ್ತಿನಲ್ಲಿ ಎದುರಿಸುತ್ತಿದ್ದಾರೆ. ಜೊತೆಗೆ ಈ ಸಂಬಂದ ಸೂಕ್ತ ಚಿಕಿತ್ಸೆ ಸಿಗದೇ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ತಜ್ಞರ ಪ್ರಕಾರ, ಕಳೆದ ಕೆಲವು ವರ್ಷಗಳ ಹಿಂದೆ ಕಿಡ್ನಿ ಸಮಸ್ಯೆಗಳು ಅದರಲ್ಲೂ ವಿಶೇಷವಾಗಿ ಕಿಡ್ನಿ ಕಲ್ಲು, ಕಿಡ್ನಿ ವೈಫಲ್ಯ ಪ್ರಕರಣದಲ್ಲಿ ಭಾರಿ ಏರಿಕೆ ಕಂಡಿತು. ಕಿಡ್ನಿ ಸಮಸ್ಯೆಯ ಪ್ರಮುಖ ಲಕ್ಷಣಗಳು ಎಂದರೆ, ಮೂತ್ರದ ಸೋಂಕು, ದೇಹದಲ್ಲಿ ಯೂರಿಕ್​ ಆ್ಯಸಿಡ್​ ಹೆಚ್ಚುವುದು. ಬಹಳ ಬೇಗ ಮೂತ್ರಕ್ಕೆ ಹೋಗಬೇಕು ಎನ್ನಿಸುವುದು ಹೀಗೆ. ಮಂಡಿ, ಪಾದ, ಬೆರಳು ಅಥವಾ ಕಣ್ಣುಗಳಲ್ಲಿ ಕೂಡ ಕಂಡು ಬಂದರೆ, ಅಥವಾ ತಿನ್ನಲು ಇಚ್ಚಿಸದೇ ಇರುವುದು, ಸ್ನಾಯುಗಳಲ್ಲಿನ ನೋವು ಕಿಡ್ನಿ ಸಮಸ್ಯೆಗೆ ಕಾರಣವಾದ ಲಕ್ಷಣಗಳಾಗಿದೆ.

ವಂಶವಾಹಿತಿ, ಡಯಾಬೀಟಿಸ್​, ಹೈ ಬಿಪಿಯ ಮತ್ತು ಅತಿ ಹೆಚ್ಚು ನೋವು ನಿವಾರಕಗಳನ್ನು ನುಂಗುವುದರಿಂದಲೂ ಕಿಡ್ನಿ ಸಮಸ್ಯೆ ಕಾಡುತ್ತದೆ. ಕೆಟ್ಟದಾಗುವ ಮೊದಲೇ ಆರಂಭದಲ್ಲೇ ಈ ಸಮಸ್ಯೆ ಪತ್ತೆ ಹಚ್ಚಬೇಕಿದೆ. ಈ ಕಿಡ್ನಿ ಸಮಸ್ಯೆ ಲಕ್ಷಣಗಳು ಸಾಮಾನ್ಯವಾಗಿ ಪತ್ತೆಯಾಗುವುದಿಲ್ಲ. ಜೊತೆಗೆ ಇದರ ಪತ್ತೆ ಕೂಡ ಜನರು ಮಾಡುವುದಿಲ್ಲ. ಬಹುತೇಕರು ಸಮಸ್ಯೆ ಗಂಭೀರವಾದ ಬಳಿಕವೇ ವೈದ್ಯರ ಸಂಪರ್ಕಕ್ಕೆ ಮುಂದಾಗುತ್ತಾರೆ.

ಕಿಡ್ನಿ ಸಮಸ್ಯೆ ನಿವಾರಣೆಗೆ ಏನೇನು ಮಾಡಬೇಕು: - ಕಿಡ್ನಿ ಆರೋಗ್ಯವನ್ನು ಕಾಪಾಡಲು ಕೆಲವು ಆರೋಗ್ಯಕರ ಮುನ್ನೆಚ್ಚರಿಕೆ ಪಾಲಿಸುವುದು ಅವಶ್ಯವಾಗಿದೆ.

- ಪ್ರತಿ ನಿತ್ಯ ಅಗತ್ಯವಾದಷ್ಟು ನೀರನ್ನು ಕುಡಿಯಬೇಕು.

- ವೈದ್ಯಕೀಯ ಸಲಹೆ ಇಲ್ಲದೇ ಪ್ರೋಟಿನ್​ ಪೂರಕ ಆಹಾರವನ್ನು ಪಡೆಯಬೇಡಿ

- ಹೆಚ್ಚು ನೋವು ನಿವಾರಕ ಪಡೆಯಬೇಡಿ.

- ಧೂಮಪಾನದಿಂದ ದೂರವಿರಿ, ಧೂಮಪಾನದಿಂದ ಕಿಡ್ನಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ

- ಮೂತ್ರ ಸಮಸ್ಯೆ ಕಂಡು ಬಂದರೇ ತಕ್ಷಣಕ್ಕೆ ವೈದ್ಯರ ಸಲಹೆ ಪಡೆಯಬೇಕು, ಹೀಗೆ ಮಾಡುವುದರಿಂದ ಮುಂದಾಗುವ ಪರಿಣಾಮಗಳಿಂದ ಬಚಾವ್​ ಆಗಬಹುದು.

- ಕಾಲಕಾಲಕ್ಕೆ ಕಿಡ್ನಿ ಆರೋಗ್ಯವನ್ನು ಪರೀಕ್ಷಿಸಿ.

ಇದನ್ನೂ ಓದಿ: ಪಿಸಿಒಡಿ, ಪಿಸಿಒಸಿ ಸಮಸ್ಯೆಗೆ ರಾಮಬಾಣವಂತೆ ಈ ಜ್ಯೂಸ್​ಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.