ಸಿಡ್ನಿ: ದೇಹವನ್ನು ತಂಪು ಮಾಡುವ ಪೌಷ್ಟಿಕ ಗುಣವನ್ನು ಕಾಮ ಕಸ್ತೂರಿ ಬೀಜ (ಚಿಯಾ ಸೀಡ್) ಹೊಂದಿದೆ. ಅನೇಕರು ಇದನ್ನು ತಿನ್ನುವ ವಿಧಾನದಲ್ಲಿ ಹಲವು ಪ್ರಯೋಗ ಮಾಡುತ್ತಾರೆ. ಇದೀಗ ವಿಜ್ಞಾನಿಗಳು ಇದನ್ನು ತಿನ್ನುವ ಕುರಿತು ಹೊಸ ವಿಧಾನ ಪತ್ತೆ ಮಾಡಿದರೆ. ಇದನ್ನು ರುಬ್ಬಿ ತಿನ್ನುವುದರಿಂದ ಇದರ ಫೈಬರ್ ಪ್ರಯೋಜನ ಸಿಗುತ್ತದೆ ಎಂದಿದ್ದಾರೆ.
ಕಾಮ ಕಸ್ತೂರಿ ಬೀಜ ಫೈಬರ್ ಮತ್ತು ಒಮೆಗಾ -3 ಗಳ ಅಂಶಗಳನ್ನು ಹೊಂದಿದೆ. ಇದು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಾಮ ಕಸ್ತೂರಿ ಬೀಜಗಳ ನಿಯಮಿತ ಸೇವನೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಕಾಮ ಕಸ್ತೂರಿ ಬೀಜವನ್ನು ಸಾಮಾನ್ಯವಾಗಿ ಸೂಪರ್ ಫುಡ್ ಎಂದು ಕರೆಯುತ್ತಾರೆ. ಇದರಲ್ಲಿ ಹೆಚ್ಚಿನ ಮಟ್ಟದ ಒಮೆಗಾ-3 ಆಮ್ಲ ಇದ್ದು, ಇದನ್ನು ಹಾಗೇ ಕೂಡ ತಿನ್ನಬಹುದು. ಇಲ್ಲ ನೀರು, ಹಣ್ಣಿನ ರಸದೊಂದಿಗೆ ಬೆರಸಿ ತಿನ್ನಬಹುದು. ಈ ಕಾಮ ಕಸ್ತೂರಿ ಬೀಜ ಇತ್ತೀಚಿನ ಕೆಲವರು ವರ್ಷಗಳಿಂದ ಹೆಚ್ಚಿನ ಜನಪ್ರಿಯತೆ ಪಡೆದಿದ್ದು, ಹಲವರ ಡಯಟ್ನಲ್ಲಿ ಸೇರಿದೆ. ಆದರೆ, ಈ ಬೀಜಗಳು ಸಾವಿರಾರು ವರ್ಷಗಳಿಂದಲೂ ಇದೆ. ಮಧ್ಯ ಅಮೆರಿಕದ ಮೂಲವನ್ನು ಇದು ಹೊಂದಿದೆ.
ಕಾಮ ಕಸ್ತೂರಿ ಬೀಜಗಳು ಸೂಪರ್ ಫುಡ್ ಆಗಿದ್ದು, ಇದರ ಬಳಕೆಯಿಂದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು ಎಂದು ಆಸ್ಟ್ರೇಲಿಯಾದ ಅಡಿಲೇಡ್ ಯುನಿವರ್ಸಿಟಿ ತಂಡ ತಿಳಿಸಿದೆ. ಈ ಬೀಜಗಳು ಆರೋಗ್ಯಕರ ಕೊಬ್ಬು, ಉತ್ಕರ್ಷಣ ನಿರೋಧಕ ಮತ್ತು ಫಭರ್ ಅನ್ನು ಹೊಂದಿದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪ್ರೋ ರಾಚೆಲ್ ಬರ್ಟನ್ ತಿಳಿಸಿದ್ದಾರೆ.
ಈ ಬೀಜಗಳನ್ನು ಹಾಗೇ ಸೇವಿಸುವುದಕ್ಕಿಂತ ಅವುಗಳನ್ನು ರುಬ್ಬಿ ಪುಡಿ ಮಾಡುವುದರಿಂದ ಹೆಚ್ಚಿನ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಈ ಕುರಿತು ಹಂದಿಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಇದರಲ್ಲಿ ಹಂದಿಗಳಿಗೆ ವಿವಿಧ ರೀತಿಯಲ್ಲಿ ಚಿಯಾ ಬೀಜಗಳನ್ನು ನೀಡಲಾಗಿದೆ. ಈ ವೇಳೆ ಕರುಳಿನ ಸೂಕ್ಷ್ಮಾಣು ಜೀವಿಗಳ ಮೇಲೆ ಇದು ಪ್ರಭಾವ ಬೀರಿದೆ.
ಕಾಮ ಕಸ್ತೂರಿ ಬೀಜಗಳು ಮೆಟಾಬಾಲೈಟ್ಗಳನ್ನು ಉತ್ಪಾದಿಸುತ್ತದೆ. ಇದರಿಂದ ಕರುಳಿನ ಕೋಶಕ್ಕೆ ಅನುಕೂಲವಾಗಲಿದೆ. ಕಾಮ ಕಸ್ತೂರಿ ಬೀಜಗಳನ್ನು ಪುಡಿ ಮಾಡಿ ತಿಂದಾಗ ಫೈಬರ್ ಪೋಷಕಾಂಶಗಳು ದೇಹ ಸೇರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವಮ್ಮು ಜರ್ನಲ್ ಫುಡ್ ಅಂಡ್ ಫಂಕ್ಷನ್ನಲ್ಲಿ ಪ್ರಕಟಿಸಲಾಗಿದೆ.
ಕರಳಿನ ಸೂಕ್ಷ್ಮ ಜೀವಿಗಳ ಮೇಲೆ ಪ್ರಭಾವ ಬೀರುವಲ್ಲಿ ಕಾಮ ಕಸ್ತೂರಿ ಬೀಜ ಪ್ರಮುಖವಾಗಿದೆ. ಆದಾಗ್ಯೂ ಈ ಸಂಬಂಧ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: ಸಸ್ಯಹಾರಿಗಳಲ್ಲಿ ಕಾಡುವ ವಿಟಮಿನ್ ಬಿ 12 ಕೊರತೆಗೆ ಇಲ್ಲಿದೆ ಪರಿಹಾರ!