ETV Bharat / sukhibhava

ಇ-ಸಿಗರೇಟ್​-ವ್ಯಾಪಿಂಗ್ ಅನ್ನು ಭಾರತ ಅನುಮತಿಸಬೇಕೇ?.. ಹೀಗೊಂದು ಚರ್ಚೆ

ದೇಶದಲ್ಲಿ ತಂಬಾಕು ನಿಯಂತ್ರಣದ ಭವಿಷ್ಯದ ಮಾರ್ಗಸೂಚಿಯನ್ನು ಚರ್ಚಿಸಲು ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಇ-ಸಿಗರೇಟ್​-ವ್ಯಾಪಿಂಗ್ ಬಗ್ಗೆ ಆರೋಗ್ಯ ತಜ್ಞರು ಮತ್ತು ನೀತಿ ನಿರೂಪಕರು ಇದರ ಸಾಧಕ-ಬಾಧಕ ಕುರಿತು ಚರ್ಚೆ ನಡೆಸಿದ್ದಾರೆ.

e-cigarettes and vaping
ಇ-ಸಿಗರೇಟ್​-ವ್ಯಾಪಿಂಗ್
author img

By

Published : Jun 1, 2022, 3:07 PM IST

ನವದೆಹಲಿ: ಸಿಗರೇಟ್​ ಆರೋಗ್ಯಕ್ಕೆ ಹಾನಿಕಾರಕ, ಅದು ನಮ್ಮನ್ನು ಧೂಮಪಾನಕ್ಕೆ ದಾಸರನ್ನಾಗಿ ಮಾಡುತ್ತದೆ. ಆ ಚಟದಿಂದ ಹೊರಬರಲು ನಮ್ಮ ಇಂದಿನ ಅತ್ಯಾಧುನಿಕ ಜಗತ್ತು ಇಲೆಕ್ಟ್ರಾನಿಕ್​ ಸಿಗರೇಟ್​ ಎಂಬ ತಂತ್ರಜ್ಞಾನವೊಂದನ್ನು ಕಂಡುಹಿಡಿದಿದೆ. ಅದೇ ಇ-ಸಿಗರೇಟ್​-ವ್ಯಾಪಿಂಗ್. ಸದ್ಯ ಇ-ಸಿಗರೇಟ್​-ವ್ಯಾಪಿಂಗ್ ಯುವಕರ ಫ್ಯಾಷನ್​ ಆಗಿ ಮಾರ್ಪಾಡಾಗಿದೆ. ವ್ಯಾಪಿಂಗ್, ಸಾಮಾನ್ಯ ಸಿಗರೇಟ್ ಸೇದುವುದಕ್ಕಿಂತ ಕಡಿಮೆ ಹಾನಿಕಾರಕವೇ? ಧೂಮಪಾನವನ್ನು ತೊರೆಯಲು ಇ-ಸಿಗರೇಟ್‌ಗಳು ಸಹಾಯಕವಾಗಬಹುದೇ?. ದೇಶದಲ್ಲಿ ತಂಬಾಕು ನಿಯಂತ್ರಣದ ಭವಿಷ್ಯದ ಮಾರ್ಗಸೂಚಿಯನ್ನು ಚರ್ಚಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆರೋಗ್ಯ ತಜ್ಞರು ಮತ್ತು ನೀತಿ ನಿರೂಪಕರು ವಿಂಗಡಿಸಿದ ಕೆಲವು ಪ್ರಶ್ನೆಗಳು ಇಲ್ಲಿವೆ..

ಇ-ಸಿಗರೇಟ್​​​​ ನಿಷೇಧ ಕಾಯ್ದೆ: ಸೆಪ್ಟೆಂಬರ್ 2019ರಲ್ಲಿ ಕೇಂದ್ರ ಸರ್ಕಾರವು 2019ರ ಇಲೆಕ್ಟ್ರಾನಿಕ್ ಸಿಗರೇಟ್ (ಉತ್ಪಾದನೆ, ಆಮದು, ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತು. ಅದು ಜೆಯುಯುಎಲ್​​ (JUUL) ನಂತಹ ಎಲೆಕ್ಟ್ರಾನಿಕ್ ಸಿಗರೇಟ್‌ಗಳಿಗೆ ನಿಷೇಧ ಹೇರಿದೆ. ಆದರೆ ಈ ನಿಕೋಟಿನ್ ಉತ್ಪನ್ನಗಳ ಹಿಂದಿನ ವಿಜ್ಞಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಧೂಮಪಾನದಿಂದ ದೂರವಿರಲು ಕಡಿಮೆ ಹಾನಿಕಾರಕ ವಿಧಾನಗಳನ್ನು ಅನುಮತಿಸುವ ಅವಶ್ಯಕತೆಯಿದೆ ಎಂದು ಆರೋಗ್ಯ ತಜ್ಞರು ಮತ್ತು ನೀತಿ ನಿರೂಪಕರ ತಂಡದಲ್ಲಿ ಒಬ್ಬರಾದ, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅಭಿಪ್ರಾಯಪಟ್ಟಿದ್ದಾರೆ. ಆದರೂ 2019ರಲ್ಲಿ ಕೆಟ್ಟ ಚಟುವಟಿಕೆಗಳಿಗೆ ಕಾರಣವಾಗುವುದರಿಂದ ಇ-ಸಿಗರೇಟ್​ಗೆ ಸಂಪೂರ್ಣ ನಿಷೇಧ ಹೇರದಂತೆ ಸೂಚಿಸಿದ್ದೇನೆ ಎಂದರು.

ಹಾನಿಯನ್ನು ಕಡಿಮೆ ಮಾಡಲು, ಜನರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸಲು ಮತ್ತು ಚಿಕಿತ್ಸಾಲಯಗಳಂತಹ ಪ್ರಯತ್ನಗಳನ್ನು ಹೆಚ್ಚಿಸಲು ತಂಬಾಕು ನಿಯಂತ್ರಣದ ನಿಯಮಗಳಲ್ಲಿ ಬದಲಾವಣೆ ಕಡ್ಡಾಯವಾಗಿದೆ. ಅವು ಜನರನ್ನು ಈ ವ್ಯಸನಗಳಿಂದ ದೂರವಿಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ರು.

ಸಂಪೂರ್ಣ ನಿಷೇಧಕ್ಕೆ ಐಸಿಎಂಆರ್ ತಜ್ಞರ ಸಮಿತಿ ಶಿಫಾರಸು: ಇ-ಸಿಗರೇಟ್‌ಗಳ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ (ICMR) ತಜ್ಞರ ಗುಂಪಿನ ಅಧ್ಯಕ್ಷರಾದ ಪ್ರಖ್ಯಾತ ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಕೆ ಶ್ರೀನಾಥ್ ರೆಡ್ಡಿ ಅವರು ಮೇ 2019ರಲ್ಲಿ ದೇಶದಲ್ಲಿ ಇ-ಸಿಗರೇಟ್‌ಗಳನ್ನು ಅನುಮತಿಸುವುದರ ವಿರುದ್ಧ ಯಶಸ್ವಿಯಾಗಿ ಪ್ರತಿಪಾದಿಸಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಲವು ಆರೋಗ್ಯ ತಜ್ಞರು ಯಾವುದೇ ಅಧ್ಯಯನಗಳು (ಇ-ಸಿಗರೇಟ್‌ಗಳ ಬಳಕೆ) ಧೂಮಪಾನ ಅಭ್ಯಾಸ ಕಡಿಮೆ ಮಾಡಿಕೊಳ್ಳಲು ಕಾರಣವಾಗಿವೆ ಎಂದು ಸೂಚಿಸಿಲ್ಲ ಎಂದು ವಾದಿಸಿದರು. ನವದೆಹಲಿಯ ಪಿಎಸ್‌ಆರ್‌ಐ ಆಸ್ಪತ್ರೆಯ ಪಲ್ಮನಾಲಜಿ ವಿಭಾಗದ ಮುಖ್ಯಸ್ಥ ಡಾ ಗೋಪಿ ಚಂದ್ ಖಿಲ್ನಾನಿ, ಧೂಮಪಾನಕ್ಕೆ ಪರ್ಯಾಯವಾಗಿ ವ್ಯಾಪಿಂಗ್ ಅನ್ನು ಆಶ್ರಯಿಸಿದ ಜನರು ಧೂಮಪಾನವನ್ನು ತ್ಯಜಿಸಲಿಲ್ಲ. ಅವರು ಧೂಮಪಾನದ ಜೊತೆಗೆ ವ್ಯಾಪಿಂಗ್ ಸಹ ಮಾಡಿದರು ಎಂದು ಹೇಳಿದರು. ಅಂತಿಮವಾಗಿ ಆ ವ್ಯಾಪಿಂಗ್ ಸಾರ್ವಜನಿಕ ಆರೋಗ್ಯ ವೃದ್ಧಿಗೆ ಕಾರಣವಾಗುವುದಿಲ್ಲ ಎಂದು ಸಮಿತಿಯು ಭಾವಿಸಿದೆ ಅಂತ ತಿಳಿಸಿದರು.

ಭಾರತೀಯ ಸಂವಿಧಾನದ 47ನೇ ವಿಧಿ ಪ್ರಕಾರ, ಸಾರ್ವಜನಿಕರ ಜೀವನ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯವಾಗಿದೆ. ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ವಸ್ತು, ಔಷಧಿ ನಿಷೇಧಿಸಲು ರಾಜ್ಯ ಪ್ರಯತ್ನಿಸಬೇಕು ಎಂದು ಇದೆ ಎಂದು ದೆಹಲಿ ಮೂಲದ ವಕೀಲ ಲಲಿತ್ ಭಾಸಿನ್ ಅವರು ಹೇಳಿದರು.

ದೆಹಲಿ ಬಾರ್ ಕೌನ್ಸಿಲ್‌ನ ಅಧ್ಯಕ್ಷ ಮುರಾರಿ ತಿವಾರಿ, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ದೇಶದಲ್ಲಿ ತಂಬಾಕು ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿದರು. ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧವು ಸಮಸ್ಯೆಯ ಮೂಲವನ್ನು ಒಡೆಯುತ್ತದೆ ಎಂದು ಅವರು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.