ಲಂಡನ್: ವಿಜ್ಞಾನಿಗಳ ತಂಡವೊಂದು 35 ಹೊಸ ತಳಿಯ ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಿದ್ದು, ಇದರಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಮಾನವರಲ್ಲಿ ಸೋಂಕಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.
ಸ್ವಿಟ್ಜರ್ಲೆಂಡ್ನ ಬಾಸೆಲ್ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಹಾಸ್ಪಿಟಲ್ ಬಾಸೆಲ್, 2014ರಿಂದ ರೋಗಿಗಳಲ್ಲಿರುವ ಅಪರಿಚಿತ ಕೀಟಾಣುಗಳ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿದ್ದಾರೆ. ವಿವಿಧ ರೀತಿಯ ರೋಗದ ಪರಿಸ್ಥಿತಿಗಳನ್ನು ಹೊಂದಿರುವ ರೋಗಿಗಳ ರಕ್ತ ಮತ್ತು ಅಂಗಾಂಶ ಮಾದರಿಯಲ್ಲಿ ಅಪರಿಚಿತ 61 ಬ್ಯಾಕ್ಟೀರಿಯಾ ರೋಗಾಣುಗಳನ್ನು ತಂಡ ವಿಶ್ಲೇಷನೆ ಮಾಡಿದೆ.
ಸಾಂಪ್ರದಾಯಿಕ ಪ್ರಯೋಗಾಲಯ ವಿಧಾನದ ಮೂಲಕ ಮಾಸ್ ಸ್ಪೆಕ್ಟ್ರೋಸ್ಕೋಪಿ ಅಥವಾ ಬ್ಯಾಕ್ಟೀರಿಯಾದ ಜೀನೋಮ್‌ನ ಸಣ್ಣ ಭಾಗವನ್ನು ಅನುಕ್ರಮಗೊಳಿಸಿ, ಪ್ರತ್ಯೇಕತೆಗಳಿಗೆ ಫಲಿತಾಂಶಗಳನ್ನು ನೀಡಲು ವಿಫಲವಾಗಿವೆ. ಈ ಹಿನ್ನೆಲೆ ಸಂಶೋಧಕರು ಕೆಲವು ವರ್ಷಗಳಿಂದ ಮಾತ್ರ ಲಭ್ಯವಿರುವ ವಿಧಾನವನ್ನು ಬಳಸಿಕೊಂಡು ಬ್ಯಾಕ್ಟೀರಿಯಾದ ಸಂಪೂರ್ಣ ಆನುವಂಶಿಕ ವಸ್ತುಗಳನ್ನು ಅನುಕ್ರಮಗೊಳಿಸಿದ್ದಾರೆ. ಬಳಿಕ ಆನ್ಲೈನ್ ಸಾಧನ ಬಳಕೆ ಮಾಡಿಕೊಂಡು ಅವರು ಅಪರಿಚಿತ ತಳಿಯೊಂದಿಗೆ ಪತ್ತೆ ಮಾಡಿದ ಜೆನೋಮ್ ಸೀಕ್ವೆನ್ಸ್ ಅನ್ನು ಹೋಲಿಕೆ ಮಾಡಿದ್ದಾರೆ.
61 ಬ್ಯಾಕ್ಟೀರಿಯಾಗಳ ವಿಶ್ಲೇಷಣೆಯಲ್ಲಿ 35 ಈ ಹಿಂದೆಯೇ ಅಪರಿಚಿತವಾಗಿದೆ. ಉಳಿತ 26 ತಳಿಗಳನ್ನು ಪತ್ತೆ ಮಾಡುವುದು ಕಷ್ಟವಾಗಿದೆ ಎಂದು ವರ್ಗೀಕರಿಸಿದ್ದಾರೆ. ಅವುಗಳ ಜೀನೋಮ್ ಅನುಕ್ರಮಗಳನ್ನು ಇತ್ತೀಚೆಗೆ ಡೇಟಾಬೇಸ್‌ಗಳಿಗೆ ಸೇರಿಸಲಾಗಿದೆ ಅಥವಾ ರೋಗಕಾರಕಗಳ ಸರಿಯಾದ ಟ್ಯಾಕ್ಸಾನಮಿಕ್ ವಿವರಣೆಯನ್ನು ಬಹಳ ಕಡಿಮೆ ಸಮಯದ ಹಿಂದೆ ರಚಿಸಲಾಗಿದೆ.
ರೋಗಿಗಳ ದತ್ತಾಂಶವನ್ನು ವಿಶ್ಲೇಷಿಸಿದಾಗ 35 ಹೊಸ ತಳಿಗಳಲ್ಲಿ ಏಳು ಪ್ರಾಯೋಗಿಕವಾಗಿ ಪ್ರಸ್ತುತವಾಗಿವೆ. ಅವು ಮಾನವರಲ್ಲಿ ಬ್ಯಾಕ್ಟೀರಿಯಾದ ಸೋಂಕನ್ನು ಉಂಟುಮಾಡಬಹುದು. ಹೊಸದಾಗಿ ಪತ್ತೆ ಮಾಡಲಾದ ಬ್ಯಾಕ್ಟೀರಿಯಾದ ಜಾತಿಗಳು ಮತ್ತು ಅವುಗಳ ವೈದ್ಯಕೀಯ ಪ್ರಸ್ತುತತೆಯ ನಡುವಿನ ನೇರ ಸಂಪರ್ಕಗಳು ಹಿಂದೆ ಅಪರೂಪವಾಗಿ ಪ್ರಕಟವಾಗಿವೆ ಎಂದು ವಿಶ್ವವಿದ್ಯಾಲಯದ ಡಾ ಡೇನಿಯಲ್ ಗೋಲ್ಡನ್ಬರ್ಗರ್ ತಿಳಿಸಿದ್ದಾರೆ.
ಹೊಸದಾಗಿ ಪತ್ತೆಯಾದ ಬ್ಯಾಕ್ಟೀರಿಯಾ ತಳಿಗಳು ಕೊರಿನೆಬ್ಯಾಕ್ಟೀರಿಯಂ ಮತ್ತು ಸ್ಚಾಲಿಯಾ ಸೇರಿದೆ. ಈ ಎರಡು ತಳಿಗಳು ಜಾತಿಗಳು ನೈಸರ್ಗಿಕ ಮಾನವ ಚರ್ಮದ ಸೂಕ್ಷ್ಮಜೀವಿ ಮತ್ತು ಲೋಳೆಪೊರೆಯಲ್ಲಿ ಕಂಡುಬರುತ್ತವೆ. ಇದೇ ಕಾರಣಕ್ಕೆ ಅವುಗಳನ್ನು ಕಡಿಮೆ ಅಂದಾಜು ಮಾಡಲಾಗುತ್ತದೆ. ಈ ಸಂಬಂದ ಸಂಶೋಧನೆಗಳು ವಿರಳವಾಗಿದೆ. ಅವು ರಕ್ತನಾಳಕ್ಕೆ ಸೇರಿ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ಟ್ಯೂಮರ್ ಆಗುವ ಸಾಧ್ಯತೆಯೂ ಇದೆ.
ರೋಗದ ಕಾರಣವನ್ನು ತಿಳಿದಿದ್ದರೆ ಬ್ಯಾಕ್ಟೀರಿಯಾದ ಸೋಂಕನ್ನು ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಬಹುತೇಕ ಪ್ರಕರಣದಲ್ಲಿ ವೈದ್ಯಕೀಯ ಪ್ರಯೋಗಾಲಯದಲ್ಲಿ ರೋಗಕಾರಕಗಳನ್ನು ಪತ್ತೆ ಮಾಡಲಾಗುತ್ತದೆ. ಕೆಲವು ವೇಳೆ ಗುಣಮಟ್ಟದ ಮಾದರಿಗಳು ಸರಿ ಹೊಂದುವುದಿಲ್ಲ. (ಐಎಎನ್ಎಸ್)
ಇದನ್ನೂ ಓದಿ: ಮನುಷ್ಯರಿಗೂ ಹರಡಬಹುದು ಝೋಂಬಿ ಡೀರ್ ರೋಗ; ಇದರ ಪತ್ತೆ ಅಸಾಧ್ಯ ಎಂದು ವಿಜ್ಞಾನಿಗಳು