ETV Bharat / sukhibhava

ಪೋಷಕಾಂಶಗಳ ಆಗರ ಸಬ್ಬಕ್ಕಿ; ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನ - ಸಬ್ಬಕ್ಕಿ

ಪೋಷಕಾಂಶದ ಗುಣ ಹೊಂದಿರುವ ಈ ಸಬ್ಬಕ್ಕಿ ನಮ್ಮ ದೇಹಕ್ಕೆ ಯಾವ ರೀತಿ ಪ್ರಯೋಜನ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

sago-very-helpful-for-maintain-good-health

author img

By ETV Bharat Karnataka Team

Published : Nov 23, 2023, 3:18 PM IST

ಹೈದರಾಬಾದ್​: ಸಬ್ಬಕ್ಕಿ ಎಂಬುದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬಹುತೇಕ ದೇಶಗಳ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅತ್ಯಂತ ಸಮೃದ್ಧ ಪೋಷಕಾಂಶ ಗುಣಹೊಂದಿರುವ ಈ ಪದಾರ್ಥವನ್ನು ಭಾರತದಲ್ಲಿ ಹೆಚ್ಚಾಗಿ ಸಿಹಿ ತಿನಿಸಿನಲ್ಲಿ ಕಾಣಬಹುದಾಗಿದೆ. ಪಾಯಸ, ವಡಾ, ಹಪ್ಪಳ ಸೇರಿದಂತೆ ಹಲವು ವಿಧದ ಆಹಾರವನ್ನು ಇದರಿಂದ ತಯಾರಿಸುತ್ತಾರೆ. ಇದು ದೇಹಕ್ಕೆ ಸಾಕಷ್ಟು ಶಕ್ತಿ ನೀಡುವ ಹಿನ್ನೆಲೆ ಉಪವಾಸದ ವ್ರತದ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುವುದು. ಪೋಷಕಾಂಶ ಗುಣ ಹೊಂದಿರುವ ಈ ಸಬ್ಬಕ್ಕಿ ನಮ್ಮ ದೇಹಕ್ಕೆ ಯಾವ ರೀತಿ ಪ್ರಯೋಜನ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಪ್ರೋಟಿನ್​ ಆಗರ: ಸಸ್ಯಹಾರಿಗಳು ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್​ ಪಡೆಯುವಲ್ಲಿ ಕೆಲವೊಮ್ಮೆ ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಬ್ಬಕ್ಕಿ ಪ್ರಯೋಜನ ನೀಡಲಿದೆ. ಪ್ರತಿನಿತ್ಯದ ಡಯಟ್​ನಲ್ಲಿ ಇದನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್​ ಜೊತೆಗೆ ಶಕ್ತಿ ಸಿಗುತ್ತದೆ. ಅಲ್ಲದೇ ಇದು ಸ್ನಾಯುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆ: ಸಬ್ಬಕ್ಕಿಯಲ್ಲಿ ಕಾರ್ಬೋಹೈಡ್ರೇಟ್​ ಹೆಚ್ಚಿದ್ದು, ಇದು ದಿನವಿಡಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಉಪವಾಸ ಸಮಯದಲ್ಲಿ ಇದು ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸಿ ದೇಹ ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೇ ಇದು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ನೀಡಿ, ಮಲಬದ್ಧತೆ ನಿವಾರಣೆಗೆ ಸಹಕಾರಿಯಾಗಿದೆ.

ವಿಟಮಿನ್​ಗಳು: ಸಬ್ಬಕ್ಕಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್​ ಕೆ ಲಭ್ಯವಿದೆ. ಇದು ಮೂಳೆಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇದರಲ್ಲಿನ ಕ್ಸಾಲ್ಸಿಯಂ ರಕ್ತದ ಪರಿಚಲನೆಗೆ ಸಹಾಯ ಮಾಡುತ್ತದೆ. ಇದರಲ್ಲಿನ ಫೈಬರ್​ ಮತ್ತು ಬಿಟಮಿನ್​ ಬಿ ಹೃದಯದ ಆರೋಗ್ಯ ಕಾಪಾಡುತ್ತದೆ.

ತೂಕ ನಿರ್ವಹಣೆ: ಅನೇಕ ಮಂದಿ ತೂಕ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಅಂಹವರು ಪ್ರತಿನಿತ್ಯ ಸಬ್ಬಕ್ಕಿ ಆಹಾರ ಸೇವನೆ ಮಾಡುವುದರಿಂದ ತೂಕವನ್ನು ಆರೋಗ್ಯಯುತವಾಗಿ ಹೆಚ್ಚಿಸಿಕೊಳ್ಳಬಹುದು.

ಭ್ರೂಣಕ್ಕೆ ಸಹಾಯ: ಇದರಲ್ಲಿರುವ ಫೋಲಿಕ್​ ಆಸಿಡ್​ ಮತ್ತು ವಿಟಮಿನ್​ ಬಿ ಭ್ರೂಣದಲ್ಲಿ ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿ ಕಾಡುವ ರಕ್ತ ಹೀನತೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿನ ಅಮೈನೋ ಆಸಿಡ್​ಗಳು ನರಗಳ ವ್ಯವಸ್ಥೆಗಳ ನಿರ್ವಹಣೆಗೆ ಅವಶ್ಯವಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಕೂದಲಿನ ಸಮಸ್ಯೆಗೆ ನೆಲ್ಲಿಕಾಯಿಯಲ್ಲಿದೆ ಪರಿಹಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.