ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿದೆ. ಆ ಮಾತು ನೂರಕ್ಕೆ ನೂರರಷ್ಟು ಸತ್ಯ. ಇಂದು ವಿಶ್ವ ಆರೋಗ್ಯ ದಿನ. ಪರಿಸರ ಕಾರಣಗಳಿಂದಾಗಿ ಉಂಟಾಗುವ ಅನಾರೋಗ್ಯದಿಂದ ಪ್ರತಿ ವರ್ಷ ಸುಮಾರು 1 ಕೋಟಿ 30 ಲಕ್ಷ ಮಂದಿ ಜೀವಗಳು ಬಲಿಯಾಗುತ್ತಿವೆ. ಈ 'ಪರಿಸರ ಕಾರಣಗಳನ್ನು' ಸಾಧ್ಯವಾದರೆ ತಪ್ಪಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕರಾದ ಡಾ.ಪೂನಂ ಖೇತ್ರಪಾಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಹವಾಮಾನ ಬದಲಾವಣೆಯು ಕೋಟ್ಯಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಸ್ವಸ್ಥತೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಹೆಚ್ಚಾಗುತ್ತದೆ. ನಾವಿರುವ ಭೂಮಿಯನ್ನು ಆರೋಗ್ಯವಾಗಿಡಲು ಮತ್ತು ನಾವು ಆರೋಗ್ಯವಾಗಿರಲು ಈಗಿನಿಂದಲೇ ನಾವು ಕಾರ್ಯನಿರ್ವಹಿಸಬೇಕೆಂದು ಡಾ. ಪೂನಂ ಸಲಹೆ ನೀಡಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಳದ ಆತಂಕ; ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ಪ್ರಕಾರ ಹವಾಮಾನ ಬದಲಾವಣೆಯು 2030 ಮತ್ತು 2050ರ ನಡುವೆ ಒಂದು ವರ್ಷಕ್ಕೆ ಎರಡೂವರೆ ಲಕ್ಷ ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಆಗ್ನೇಯ ಏಷ್ಯಾ ಪ್ರದೇಶವು ಇನ್ನೂರು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಹವಾಮಾನ ಬದಲಾವಣೆಯಿಂದಾಗಿ ಅತಿ ಹೆಚ್ಚು ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 2022ನೇ ವರ್ಷದ ಆರೋಗ್ಯ ದಿನದ ಘೋಷವಾಕ್ಯ 'ನಮ್ಮ ಗ್ರಹ, ನಮ್ಮ ಆರೋಗ್ಯ' ಎಂಬುದಾಗಿದ್ದು, ಜನರ ಆರೋಗ್ಯವನ್ನು ರಕ್ಷಿಸಲು ಸರ್ಕಾರಗಳ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಡ ಹೇರಿದೆ.
ಕೃಷಿಯ ಮೇಲೂ ಪರಿಣಾಮ; ಹವಾಮಾನ ಬದಲಾವಣೆಯಿಂದ ಉಂಟಾಗುವ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹಗಳು, ಕಾಳ್ಗಿಚ್ಚಿನಂತಹ ಅವಘಡಗಳು ಜನರ ಆರೋಗ್ಯ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ. ಭಾರಿ ನೋವುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಸಾವುಗಳು ಮತ್ತು ಸ್ಥಳಾಂತರಕ್ಕೆ ಕಾರಣವಾಗಿವೆ ಎಂದು ಅದು ಗಮನಿಸಿದೆ. ಏರುತ್ತಿರುವ ಜಾಗತಿಕ ಉಷ್ಣಾಂಶದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು ಸಹ ಹೆಚ್ಚುತ್ತಿವೆ. ತೀವ್ರವಾದ ಶಾಖದಿಂದ ಸಾವು ಕೂಡಾ ಸಂಭವಿಸುತ್ತಿದೆ. ಹವಾಮಾನ ಬದಲಾವಣೆ ಕೃಷಿಯ ಮೇಲೆಯೂ ಪರಿಣಾಮ ಬೀರಿದ್ದು, ಅಪೌಷ್ಟಿಕತೆಗೂ ಕಾರಣವಾಗುತ್ತಿದೆ.
ವಾಯುಮಾಲಿನ್ಯವೂ ಹೆಚ್ಚಾಗುತ್ತಿದೆ. ಗಾಳಿಯನ್ನು ಮಲಿನಗೊಳಿಸುವ ಮಾಲಿನ್ಯಕಾರಕಗಳು ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಜಾಗತಿಕವಾಗಿ ಶೇಕಡಾ 90ರಷ್ಟು ಕಲುಷಿತ ಗಾಳಿಯನ್ನು ಉಸಿರಾಡುತ್ತಾರೆ. ಕಲುಷಿತ ಗಾಳಿಯಿಂದಾಗಿ ಆಗ್ನೇಯ ಏಷ್ಯಾ ಪ್ರದೇಶದಲ್ಲಿ 2.4 ಮಿಲಿಯನ್ ಮಂದಿ ಸೇರಿದಂತೆ ಪ್ರತಿ ವರ್ಷ ಜಾಗತಿಕವಾಗಿ 7 ಮಿಲಿಯನ್ ಸಾವುಗಳು ಸಂಭವಿಸುತ್ತವೆ ಎಂದು ವಿಶ್ವಸಂಸ್ಥೆ ಹೇಳಿಕೆ ನೀಡಿದೆ. ಪರಿವರ್ತನೀಯ, ಶಾಶ್ವತವಾದ ಬದಲಾವಣೆಗೆ ಚಾಲನೆ ನೀಡಲು ಈಗ ನಮಗೆ ಅವಕಾಶವಿದೆ ಎಂದು ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: 20 ರಿಂದ 39 ವರ್ಷ ವಯಸ್ಸಿನವರಲ್ಲಿ ಪ್ರಿಡಯಾಬಿಟಿಕ್ಸ್ ಶೇ.11ರಷ್ಟು ಏರಿಕೆ : ಮೆಡಾಲ್ ಹೆಲ್ತ್‌ಕೇರ್ ವರದಿ
ದೀರ್ಘಾವಧಿ ಹೂಡಿಕೆಗಳು, ಆರೋಗ್ಯ ಬಜೆಟ್‌ಗಳು, ಸಾಮಾಜಿಕ ರಕ್ಷಣೆ ಮತ್ತು ಕಾನೂನು ಒಳಗೊಂಡಂತೆ ಈಗ ಮತ್ತು ಭವಿಷ್ಯದ ಪೀಳಿಗೆಗೆ ಸಮಾನವಾದ ಆರೋಗ್ಯಕ್ಕೆ ಆದ್ಯತೆ ನೀಡಲು ವಿಶ್ವ ಆರೋಗ್ಯ ಸಂಸ್ಥೆಯು ದೇಶಗಳಿಗೆ ಕರೆ ನೀಡುತ್ತಿದೆ. ನಾವು ಈಗ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಕ್ರಮಗಳು ಮಾನವನ ಆರೋಗ್ಯ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳುವ ಪರಿಸರ ವ್ಯವಸ್ಥೆಗಳಿಗೆ ಹಾನಿಯನ್ನು ಹೆಚ್ಚಿಸಬಹುದು ಹೆಚ್ಚಿಸಬಹುದು ಎಂದು ಪೂನಂ ಅವರು ಹೇಳಿದ್ದಾರೆ.