ETV Bharat / sukhibhava

Sukhibhava: ಹೃದಯದ ಆರೋಗ್ಯ ಕಾಪಾಡುವ ಬೆಂಡೆಕಾಯಿ; ತಪ್ಪದೇ ನಿಮ್ಮ ಆಹಾರದಲ್ಲಿ ಸೇರಿಸಿ.. - ಈಟಿವಿ ಭಾರತ್​ ಕನ್ನಡ

ಬೆಂಡೆಕಾಯಿ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಇದು ಹೃದಯದ ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖವಾಗಿದೆ

ladies-finger-is-a-rich-source-of-vitamin-and-health-benefits

author img

By ETV Bharat Karnataka Team

Published : Oct 17, 2023, 1:12 PM IST

ಬೆಂಗಳೂರು: ಬೆಂಡೆಕಾಯಿ ಎಂದರೆ ಕೆಲವರು ಮುಖ ಕಿವುಚುತ್ತಾರೆ. ಲೊಳೆಯಂತಹ ಈ ತರಕಾರಿಯನ್ನು ದೂರ ಸರಿಯುವ ಮುನ್ನ ಹೃದಯದ ಆರೋಗ್ಯವನ್ನು ನಿರ್ವಹಣೆ ಮಾಡಬೇಕು ಎಂಬ ಇಚ್ಛೆ ನಿಮಗಿದ್ದರೆ, ನಿಮ್ಮ ಆಹಾರದಲ್ಲಿ ಬೆಂಡೆಕಾಯಿ ಸೇವಿಸಿ ಎನ್ನುತ್ತಿದ್ದಾರೆ ತಜ್ಞರು. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಬೆಂಡೆಕಾಯಿ ಕಡಿಮೆ ಕೊಲೆಸ್ಟ್ರಾಲ್​ ನಿರ್ವಹಣೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಇದೇ ರೀತಿ ಪರಿಣಾಮ ಬೆಂಡೆಕಾಯಿ ಮನುಷ್ಯರ ಮೇಲೆ ಬೀರುತ್ತದೆ ಎಂದು ಹೇಳಲು ಸಾಧ್ಯವಾಗದಿದ್ದರೂ ಕೆಲವು ಪರಿಣಾಮವನ್ನು ಇದು ಹೊಂದಿದೆ. ಆರಂಭಿಕ ಈ ಫಲಿತಾಂಶವೂ ಭರವಸೆದಾಯಕವಾಗಿದೆ ಎಂದು ತೋರಿಸಿದೆ

ಪೋಷಕಾಂಶಗಳ ಸಮೃದ್ಧತೆ: ಬೆಂಡೆಕಾಯಿಯಲ್ಲಿ ಪೊಲಿಫೆನೊಲ್ಸ್​​ ಸಮೃದ್ಧವಾಗಿದೆ. ಅವರು ಆ್ಯಂಟಿ ಆಕ್ಸಿಡೆಂಟ್​ ಅಂಶಗಳಿದ್ದು, ರ್ಯಾಡಿಕಲ್​ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ರಕ್ತದೊತ್ತಡ, ಕೊಲೆಸ್ಟ್ರಾಲ್​ ಮತ್ತು ಊರಿಯೂತ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಬೆಂಡೆಕಾಯಿ ರಕ್ತದ ಗ್ಲೂಕೋಸ್​ ಮಟ್ಟವನ್ನು ಸ್ಥಿರವಾಗಿ ಇಡಲು ಸಹಾಯ ಮಾಡುತ್ತದೆ. ಇದು ಗ್ಲುಕೋಸ್​​ ರಕ್ತದೊಳಗೆ ಸೇರುವುದನ್ನು ತಪ್ಪಿಸುತ್ತದೆ. ಬೆಂಡೆಕಾಯಿಯಲ್ಲಿರುವ ಈ ಗುಣವೂ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೆ ಸಹಾಯ ಮಾಡಿ, ಹೃದಯ ರೋಗವನ್ನು ತಡೆಯುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಬೆಂಡೆಯಲ್ಲಿದೆ ಹಲವು ಅಂಶ: ಬೆಂಡೆಕಾಯಿಯು ಬೇಸಿಗೆ ಋತುಮಾನದ ಬೆಳೆಯಾಗಿದ್ದು, ಇದರಲ್ಲಿ ಮಿನರಲ್ಸ್​, ವಿಟಮಿನ್ಸ್​​, ಆ್ಯಂಟಿ - ಆಕ್ಸಿಡೆಂಟ್​ ಮತ್ತು ಫೈಬರ್​ ಇದೆ. ವಿಟಮಿನ್​ ಸಿ, ವಿಟಮಿನ್​ ಎ, ವಿಟಮಿನ್​ ಕೆ, ಕ್ಯಾಲ್ಸಿಯಂ, ಫೈಬರ್​, ಪೋಟಾಶಿಯಂ, ಫೋಲಿಕ್​ ಆಸಿಡ್​ ಅಂಶ ಇರುತ್ತದೆ. ಇದು ಸ್ಥೂಲಕಾಯ ನಿರ್ವಹಣೆಗೆ ಸಹಾಯ ಮಾಡುವ ಜೊತೆಗೆ ಮಧುಮೇಹ ಮತ್ತು ಹೃದಯ ಸಂಬಂಧಿ ರೋ ನಿರ್ವಹಣೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ದೇಹದ ವಿಷಪೂರಿತ ಅಂಶವನ್ನು ದೂರ ಮಾಡುತ್ತದೆ.

ಇದರಲ್ಲಿನ ಫೈಬರ್​ ಅಂಶವು ಮಲಬದ್ದತೆ ನಿವಾರಣೆಗೆ ಸಹಾಯ ಮಾಡುತ್ತದೆ. ಜೀರ್ಣ ಕ್ರಿಯೆಗೆ ಸುಧಾರಿಸುವಲ್ಲಿ ಇದು ಪ್ರಮುಖವಾಗದೆ. ಅಲ್ಲದೇ ಬೆಂಡೆಕಾಯಿಯಲ್ಲಿರುವ ಆ್ಯಂಟಿ - ಆಕ್ಸಿಡೆಂಟ್​​ ಒತ್ತಡವನ್ನು ಕಡಿಮೆ ಮಾಡಿ, ಚರ್ಮದ ಮೇಲೆ ಹಾಕುವ ಹಾನಿ ತಡೆಯುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆನ್ನು ನಿಧಾನಗೊಳಿಸುತ್ತದೆ.

ಬೆಂಡೆಕಾಯಿ ಅನೇಕ ಪೋಷಕಾಂಶಗಳಿಂದ ಕೂಡಿದ್ದು, ಹಲವು ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಈ ಹಿನ್ನೆಲೆ ನಿಮ್ಮ ಆಹಾರ ಪದ್ಧತಿಯಲ್ಲಿ ಈ ಬೆಂಡೆಕಾಯಿ ಬಳಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ನಿಮಗೆ ಶಕ್ತಿ ಒದಗಿಸುವ ಸುಲಭ ಬೆಳಗಿನ ಆಹಾರಗಳಿವು.. ಹಾಗಾದರೆ ನಿಮ್ಮ ಮೆನುವಿನಲ್ಲಿ ಇವುಗಳಿವೆಯಾ ಚಕ್​ ಮಾಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.