ETV Bharat / sukhibhava

ಶೀಘ್ರದಲ್ಲೇ ಮಾರುಕಟ್ಟೆಗೆ ಮಾತ್ರೆ ರೂಪದಲ್ಲಿ ಇನ್ಸುಲಿನ್​..! - ಉತ್ತೇಜಿಸುವ ಅಣುವನ್ನು ಗುರುತಿಸಿದ್ದಾರೆ

ಈ ಹೊಸ ಸಂಶೋಧನೆಯಲ್ಲಿ, ವಿಜ್ಞಾನಿಗಳು ರಕ್ತದಲ್ಲಿನ ಗ್ಲೂಕೋಸ್ ಅನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ತೇಜಿಸುವ ಅಣುವನ್ನು ಗುರುತಿಸಿದ್ದಾರೆ.

ಶೀಘ್ರದಲ್ಲಿ ಮಾತ್ರೆ ರೂಪದಲ್ಲಿ ಇನ್ಸುಲಿನ್​..!
insulin-in-pill-form-soon
author img

By

Published : Dec 15, 2022, 12:29 PM IST

ಮೆಲ್ಬೋರ್ನ್( ಆಸ್ಟ್ರೇಲಿಯಾ)​: ಇನ್ಸುಲಿನ್​ ಅನ್ನು ಮಾತ್ರೆ ರೂಪದಲ್ಲಿ ತಯಾರಿಸುವ ವಿಜ್ಞಾನಿಗಳ ನೂರಾರು ವರ್ಷದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಟೈಪ್​-1 ಡಯಾಬೀಟಿಸ್​ ರೋಗಿಗಳಿಗೆ ಇನ್ಸುಲಿನ್​ ಇಂಜೆಕ್ಷನ್​ ಬದಲು ಮಾತ್ರೆಗಳನ್ನು ನೀಡುವ ಹೊಸ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಪ್ರಮುಖ ಹಾರ್ಮೋನ್​ ಆಗಿ ಇನ್ಸುಲಿನ್​ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಅನುಕರಿಸುವ ಪರ್ಯಾಯ ಅಣುವನ್ನು ಡಾ. ನಿಕೋಲಸ್ ಕಿರ್ಕ್ ಮತ್ತು ಪ್ರೊಫೆಸರ್ ಮೈಕ್ ಲಾರೆನ್ಸ್, ಮೆಲ್ಬೋರ್ನ್‌ನಲ್ಲಿರುವ ವಾಲ್ಟರ್ ಮತ್ತು ಎಲಿಜಾ ಹಾಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್‌ನ ಸಂಶೋಧಕರು ಕಂಡುಹಿಡಿದಿದ್ದಾರೆ.

ಈ ಹೊಸ ಸಂಶೋಧನೆಯಲ್ಲಿ, ವಿಜ್ಞಾನಿಗಳು ರಕ್ತದಲ್ಲಿನ ಗ್ಲೂಕೋಸ್ ಅನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ತೇಜಿಸುವ ಅಣುವನ್ನು ಗುರುತಿಸಿದ್ದಾರೆ. ವಿಜ್ಞಾನಿಗಳು ಇನ್ಸುಲಿನ್​ ಮಾತ್ರೆ ರೂಪವನ್ನು ತರಲು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಕಾರಣ ಇನ್ಸುಲಿನ್​ ಅನಿಯಂತ್ರಿತ. ಜೀರ್ಣವಾದ ಬಳಿಕ ಇದು ದೇಹದಲ್ಲಿ ಸುಲಭವಾಗಿ ನಾಶವಾಗುತ್ತದೆ.

ಇದೆ ಕಾರಣದಿಂದ ಇನ್ಸುಲಿನ್​ ಮಾತ್ರೆ ಅಭಿವೃದ್ಧಿ ಪಡಿಸುವುದು ನೂರಾರು ವರ್ಷಗಳಿಂದ ಕನಸಾಗಿ ಉಳಿದಿದ್ದು, ಇದರಲ್ಲಿ ಹೆಚ್ಚಿನ ಯಶಸ್ಸು ಕಂಡಿಲ್ಲ. ಕ್ರಯೊ-ಎಲೆಕ್ಟ್ರಾನ್​ ಮೈಕ್ರೊಸ್ಕೊಪಿ ಮೂಲಕ ಇನ್ಸುಲಿನ್​ ಉತ್ತೇಜಿಸುವ ಪೆಪ್ಟೈಡ್​ ಅನ್ನು ಪತ್ತೆ ಮಾಡಲಾಗಲಿದೆ. ಇದನ್ನು ಮೆಡಿಸಿನ್​ ಆಗಿ ಬದಲಾಯಿಸಲು ಸಮಯ ಬೇಕಿದೆ. ಈ ಸಂಬಂಧ ಮತ್ತಷ್ಟು ಅಧ್ಯಯನ ಆಗಬೇಕಿದೆ ಎಂದಿದ್ದಾರೆ ಡಾ. ಕಿರ್ಕ್​

ಇದನ್ನೂ ಓದಿ: ಸಮಾಧಾನಪಡಿಸಲು ಮಕ್ಕಳ ಕೈಗೆ ಮೊಬೈಲ್ ಕೊಡುವುದು ಅಪಾಯಕಾರಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.