ETV Bharat / sukhibhava

ಹೈ ಬಿಪಿ ನಿಯಂತ್ರಿಸಿದರೆ ಭಾರತ 2040ರ ಹೊತ್ತಿಗೆ 46 ಲಕ್ಷ ಜನರ​ ಸಾವು ತಡೆಯಬಹುದಂತೆ! - 2040ರ ವೇಳೆಗೆ ಸಂಭವಿಸುವ

ಅಧಿಕ ರಕ್ತದೊತ್ತಡ ಇಂದು ಜಾಗತಿಕವಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

If hypertension is controlled India can prevent 4 6 million deaths by 2040

author img

By ETV Bharat Karnataka Team

Published : Sep 20, 2023, 1:24 PM IST

ನವದೆಹಲಿ: ಭಾರತದಲ್ಲಿ ಅಧಿಕ ರಕ್ತದೊತ್ತಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ 2040ರ ವೇಳೆಗೆ ಸಂಭವಿಸುವ 4.6 ಮಿಲಿಯನ್​ ಸಾವು ತಪ್ಪಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜಾಗತಿಕವಾಗಿ ಅಧಿಕ ರಕ್ತದೊತ್ತಡದಿಂದ ಆಗುತ್ತಿರುವ ಪರಿಣಾಮಗಳ ಕುರಿತು ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಟಿಸಿದೆ. ಮಂಗಳವಾರ ನಡೆದ ಸಾಮಾನ್ಯ ಸಭೆಯ 78ನೇ ಸೆಷನ್​ನಲ್ಲಿ ಈ ವರದಿ ಮಂಡಿಸಲಾಯಿತು.

ಭಾರತದಲ್ಲಿ ಹೈ ಬಿಪಿ, ಅಂಕಿಅಂಶಗಳು: ವರದಿಯಲ್ಲಿ, ಭಾರತದಲ್ಲಿ 30-79 ವರ್ಷದ ವಯಸ್ಸಿನ ಅಂದಾಜು 188.3 ಮಿಲಿಯನ್​ ಮಂದಿ ಅಧಿಕ ರಕ್ತದೊತ್ತಡದಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದೆ. ಅಧಿಕ ರಕ್ತದೊತ್ತಡವನ್ನು ಶೇ 50ರಷ್ಟು ನಿಯಂತ್ರಿಸಬೇಕಾದರೆ, ಅಧಿಕ ರಕ್ತದೊತ್ತಡ ಹೊಂದಿರುವ 67 ಮಿಲಿಯನ್​ ಮಂದಿಗೆ ಪರಿಣಾಮಕಾರಿ ಚಿಕಿತ್ಸೆ ಅಗತ್ಯ ಎಂದು ಸಲಹೆ ನೀಡಲಾಗಿದೆ.

ಭಾರತದಲ್ಲಿ ಅಧಿಕ ಬಿಪಿ ಹೊಂದಿರುವ ಮಂದಿ ಶೇ 37ರಷ್ಟಿದ್ದು, ಇದರಲ್ಲಿ ಶೇ 32ರಷ್ಟು ಪುರುಷರು, ಶೇ 42 ಮಂದಿ ಮಹಿಳೆಯರಿದ್ದಾರೆ. ಶೇ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆ ಶೇ 35ರಷ್ಟಿದ್ದರೆ, ಪುರುಷರ ಸಂಖ್ಯೆ ಶೇ 25ರಷ್ಟಿದೆ.

ಪ್ರಸ್ತುತ ಅಧಿಕ ರಕ್ತದೊತ್ತಡ ಹೊಂದಿರುವ ಶೇ 15ರಷ್ಟು ಮಂದಿ ಮಾತ್ರ ನಿಯಂತ್ರಣ ಹೊಂದಿದ್ದಾರೆ. ನಿಯಂತ್ರಣ ಹೊಂದಿಲ್ಲದ ಅಧಿಕ ಬಿಪಿ ಹೊಂದಿರುವ ಮಂದಿಯಲ್ಲಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಅವಧಿ ಮುನ್ನ ಸಾವು ಸಂಭವಿಸಬಹುದು. ವರದಿಯಲ್ಲಿ ದೇಶದಲ್ಲಿನ ಶೇ 52ರಷ್ಟು ಮಂದಿ ಸಾವಿಗೆ ಹೃದಯ ರಕ್ತದೊತ್ತಡದಿಂದ ಹೃದಯಾಘಾತ ಸಮಸ್ಯೆ ಕಾರಣವಾಗಿದೆ ಎಂದು ವರದಿ ತೋರಿಸಿದೆ

ಜಾಗತಿಕ ಸಮಸ್ಯೆ: ಜಾಗತಿಕವಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಪ್ರಪಂಚಾದ್ಯಂತ ಕಾಡುತ್ತಿದೆ. ಐದರಲ್ಲಿ ನಾಲ್ಕು ಮಂದಿ ಈ ಸಮಸ್ಯೆ ಹೊಂದಿದ್ದು, ಅವರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆದರೆ, ದೇಶಗಳು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದರೆ, 2023ರ ರಿಂದ 20509ರೊಳಗೆ ಸಂಭವಿಸುವ 76 ಮಿಲಿಯನ್​ ಸಾವು ತಡೆಯಬಹುದು ಎಂದು ವರದಿ ಹೇಳುತ್ತದೆ.

ಅಧಿಕ ರಕ್ತದೊತ್ತಡವನ್ನು ಸರಳವಾಗಿ, ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಐದರಲ್ಲಿ ಒಂದು ಮಂದಿ ಮಾತ್ರ ಇದನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೊಸ್​​ ಅಡನೋಮ್​ ಗೇಬ್ರೆಸಿಸ್​ ತಿಳಿಸಿದ್ದಾರೆ.

ಕಾರಣ ಗೊತ್ತಿರಲಿ!: ಅಧಿಕ ರಕ್ತದೊತ್ತಡ ಹೊಂದಲು ಪ್ರಮುಖ ಕಾರಣ ವಯಸ್ಸಾಗುವಿಕೆ ಮತ್ತು ಆನುವಂಶಿಕತೆ. ಆರೋಗ್ಯಯುತ ಆಹಾರ ಸೇವನೆಯ ಕೊರತೆ, ದೈಹಿಕ ಚಟುವಟಿಕೆ ಕೊರತೆ, ಅಧಿಕ ಆಲ್ಕೋಹಾಲ್​ ಸೇವನೆ ಇದರ ಅಪಾಯ ಹೆಚ್ಚಿಸುತ್ತದೆ.

ಜೀವನಶೈಲಿಯ ಬದಲಾವಣೆ: ಆರೋಗ್ಯಯುತ ಆಹಾರ ಸೇವನೆ, ತಂಬಾಕು ತ್ಯಜಿಸುವುದು, ಹೆಚ್ಚು ಕ್ರಿಯಾಶೀಲವಾಗಿರುವಂತಹ ಜೀವನಶೈಲಿ ಬದಲಾವಣೆಯಿಂದ ನಿರ್ವಹಣೆ ಮಾಡಬಹುದು. ಕೆಲವು ಮಂದಿ ಇದರ ಪರಿಣಾಮಕಾರಿ ನಿಯಂತ್ರಣಕ್ಕೆ ಮತ್ತು ಇದರ ಸಮಸ್ಯೆಗಳ ತಡೆಗೆ ಔಷಧಗಳನ್ನು ಸೇವಿಸುತ್ತಾರೆ.

ಸಮಸ್ಯೆ ಪತ್ತೆಯಾದ ಆರಂಭದಲ್ಲೇ ಇದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಆರೋಗ್ಯ ಕಾಳಜಿಯೊಂದಿಗೆ ಸುಧಾರಿಸಬಹುದು. ಅನೇಕ ದೇಶಗಳು ಇದನ್ನು ಪ್ರಮುಖ ಕಾಳಜಿ ವಿಷಯವಾಗಿ ಪರಿಗಣಿಸಿ, ಆರೋಗ್ಯ ಪ್ರಯೋಜನ ಪ್ಯಾಕೇಜ್​​ ಅನ್ನು ಪ್ರಾಥಮಿಕ ಆರೋಗ್ಯ ಮಟ್ಟದಲ್ಲಿ ನೀಡುವ ಮೂಲಕ ನಿರ್ವಹಿಸಬೇಕು ಎಂದು ವರದಿ ತಿಳಿಸಿದೆ.

ಅಧಿಕ ರಕ್ತದೊತ್ತಡ ನಿಯಂತ್ರಣ ಕಾರ್ಯಕ್ರಮವನ್ನು ನಿರ್ಲಕ್ಷ್ಯಿಸಲಾಗಿದ್ದು, ಇದನ್ನು ಹೆಚ್ಚಿನ ಪರಿಗಣನೆಗೆ ತೆಗೆದುಕೊಂಡಿಲ್ಲ. ಜೊತೆಗೆ ಇದಕ್ಕೆ ನಿಧಿಯನ್ನೂ ನಿಗದಿಸಲಿಲ್ಲ. ಪ್ರತಿಯೊಂದು ದೇಶವೂ ಕೂಡ ಜಾಗತಿಕ ಆರೋಗ್ಯ ಪೂರೈಕೆ ದೃಷ್ಟಿಯಿಂದ ಇದರ ನಿಯಂತ್ರಣದಲ್ಲಿ ಭಾಗಿಯಾಗಬೇಕು. ಈ ಮೂಲಕ ಆರೋಗ್ಯಯುತ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ ಎಂದು ಡಬ್ಲ್ಯೂಎಚ್​ಒ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ-ಎನ್​ಸಿಆರ್​ ವ್ಯಾಪ್ತಿಯ 50 ವರ್ಷದೊಳಗಿನ ಜನರಲ್ಲಿ ಸ್ಮರಣೆ ನಷ್ಟ ಹೆಚ್ಚು: ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.