ಬೆಂಗಳೂರು: ದೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗಳಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಒಪಿಡಿ ಮತ್ತು ಐಪಿಡಿಗಳನ್ನು ತೆರೆಯುವ ಸಂಬಂಧ ಕೇಂದ್ರ ಆಯುಷ್ ಸಚಿವಾಲಯ ಸಿದ್ದತೆ ನಡೆಸಿದೆ. ಈಗಾಗಲೇ ಇರುವ ಏಮ್ಸ್ಗಳಲ್ಲಿ ಮತ್ತು ಭವಿಷ್ಯದಲ್ಲಿ ಕಾರ್ಯ ನಿರ್ವಹಿಸುವ ಏಮ್ಸ್ಗಳಲ್ಲಿ ಇದೂ ಇರಲಿದೆ ಎಂದು ಕೇಂದ್ರ ಆಯುಷ್ ಸಚಿವ ಮಹೇಂದ್ರ ಮುಂಜಾಪರ ತಿಳಿಸಿದ್ದಾರೆ.
ವಿಶ್ವ ಯೋಗದಿನದ ಹಿನ್ನೆಲೆ 100 ದಿನದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದರ ಕುರಿತು ವಿವರಣೆ ನೀಡಿದ ಅವರು, ಜಗತ್ತಿನೆಲ್ಲೆಡೆ ಆಯುರ್ವೇದ ಚಿಕಿತ್ಸೆ ಕುರಿತು ಬೇಡಿಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆಗೆ ಉತ್ತೇಜನ ನೀಡಲು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದಕ್ಕಾಗಿ ಹೊಸ ಸಚಿವಾಲಯ ಸೃಷ್ಟಿಸಿದ್ದು, ಪ್ರತ್ಯೇಕ ಬಜೆಟ್ ಸಹ ನೀಡಿದೆ.
ಇದೀಗ ಕೇಂದ್ರ ಸರ್ಕಾರ ಏಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಲೋಪತಿ ಜೊತೆಯಲ್ಲಿಯೇ ಈ ಆಯುರ್ವೇದ ಮತ್ತು ಹೋಮಿಯೋಪತಿ ಒಪಿಡಿಗಳನ್ನು ನಡೆಸಲು ನಿರ್ಧರಿಸಿದೆ. ರೋಗಿಗಳು ತಮಗೆ ಬೇಕಾದ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಇದಕ್ಕಾಗಿ ದೇಶದ ಎಲ್ಲ ಏಮ್ಸ್ಗಳಲ್ಲಿ ಶೀಘ್ರದಲ್ಲೇ ಆಯುರ್ವೇದ ಮತ್ತು ಹೋಮಿಯೋಪತಿ ಒಪಿಸಿ ಮತ್ತು ಐಪಿಡಿ ಸೇವೆಗಳನ್ನು ಶುರು ಮಾಡಲು ನಿರ್ಧರಿಸಲಾಗುತ್ತದೆ.
100 ದಿನಗಳ ಕಾರ್ಯಕ್ರಮ: ಜೂನ್ 21ರಂದು ವಿಶ್ವ ಯೋಗದಿನದ ಹಿನ್ನೆಲೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 100 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ದೆಹಲಿಯ ತಲ್ಕಟೊರಾ ಒಳಾಂಗಣ ಸ್ಟೇಡಿಯಂನಲ್ಲಿ 100ನೇ ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ. 75ನೇ ದಿನದ ಕಾರ್ಯಕ್ರಮ ಅಸ್ಸೋಂ ದಿಬ್ರಾಂಗ್ನಲ್ಲಿ ನಡೆಲಿದೆ. 50ನೇ ದಿನ ಕಾರ್ಯಕ್ರಮ ಮೇ 5ರಂದು ಜೈಪುರದಲ್ಲಿ ನಡೆಯಲಿದ್ದು, 20 ಸಾವಿರ ಜನರು ಏಕ ಕಾಲದಲ್ಲಿ ಯೋಗವನ್ನು ಪ್ರದರ್ಶನ ನಡೆಸಲಿದ್ದಾರೆ. ರಾಜಸ್ಥಾನದ ಎಲ್ಲ ಸಂಸದರು ಮತ್ತು ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಜೂನ್ 21ರಂದು ಮಧ್ಯಪ್ರದೇಶದ ಉಜ್ಜೈಯನಿಯಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ.
ಏನಿದು ಆಯುರ್ವೇದ ಚಿಕಿತ್ಸೆ: ಜಗತ್ತಿನ ಪುರಾತನ ಚಿಕಿತ್ಸೆ ವಿಧಾನ ಇದಾಗಿದ್ದು, ಭಾರತ ಮೂಲದ ಈ ಚಿಕಿತ್ಸಾ ವಿಧಾನ 3 ಸಾವಿರ ವರ್ಷದ ಇತಿಹಾಸವನ್ನು ಹೊಂದಿದ್ದು, ಪುರಾತನ ಭಾರತೀಯರು ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ರೂಢಿಸಿಕೊಂಡಿದ್ದರು. ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಆಧಾರಿಸಿ, ರೋಗಗಳಿಗೆ ಚಿಕಿತ್ಸೆಗಳನ್ನು ನೀಡಲಾಗುವುದು. ರಾಸಾಯನಿಯವಾಗಿ ತಯಾರಿಸಿದ ಈ ಔಷಧಿ ಅಡ್ಡಪರಿಣಾಮಗಳಿಂದ ಮುಕ್ತವಾಗಿದ್ದವು. ಇದರಲ್ಲಿ ಹಲವು ವಿಧಗಳಿವೆ.
ಹೋಮಿಯೋಪತಿ ಚಿಕಿತ್ಸೆ ಮಹತ್ವ: ಇದು ಕೂಡ ಆಯರ್ವೇದಂತೆ ನೈಸರ್ಗಿಕ ಚಿಕಿತ್ಸೆ ವಿಧಾನವಾಗಿದ್ದು, ಕೊಂಚ ಬದಲಾವಣೆ ಹೊಂದಿದೆ. ಹೋಮಿಯೋಪತಿಗೆ 200 ವರ್ಷದ ಇತಿಹಾಸವಿದ್ದು, ಇದು ತನ್ನ ಸಾಂಪ್ರದಾಯಿಕ ಔಷಧಕ್ಕೆ ನೈಸರ್ಗಿಕ ಮತ್ತು ಸಮಗ್ರ ಪರ್ಯಾಯವಾಗಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ.
ಇದನ್ನೂ ಓದಿ: ವಿಶ್ವ ಹೋಮಿಯೋಪತಿ ದಿನ: ಸಾಂಪ್ರದಾಯಿಕ, ನೈಸರ್ಗಿಕ ಚಿಕಿತ್ಸೆ ಮಹತ್ವ ಇದು