ನವದೆಹಲಿ: ವಿಕೇಂಡ್ ಮಸ್ತಿಯ ಜೊತೆಗೆ ನಿಮ್ಮ ದಾಹ ನೀಗಿಸಿ ಮನೋಲ್ಲಾಸ ನೀಡುವ ಪಾನೀಯಗಳನ್ನು ಕೊಂಚ ಸ್ಟೈಲಿಸ್ಟ್ ಆಗಿ ಸೇವಿಸುವ ಬಯಕೆ ನಿಮಗಿದೆಯಾ?. ಹಾಗಾದರೆ ಅದಕ್ಕಾಗಿ ಕೆಲವು ಕಾಕ್ಟೈಲ್ ಪಾನೀಯಗಳ ರೆಸಿಪಿಗಳಿವೆ. ವಿಭಿನ್ನ ರುಚಿ ಭರಿತದ ಈ ಪಾನೀಯಗಳು ನಿಮ್ಮ ಮೂಡ್ ರಿಫ್ರೇಶ್ ಮಾಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತವೆ. ಹಾಗಾದ್ರೆ ಮತ್ಯಾಕೆ ತಡ ನಿಮಗಾಗಿ ವಿಭಿನ್ನ ರುಚಿ ಭರಿತ ಪಾನೀಯಗಳನ್ನು ತಯಾರಿಸುವ ವಿಧಾನ ಅನುಸರಿಸಿ
ಫೈರ್ ವರ್ಕ್: ಹೆಸರು ಹೇಳುವಂತೆ ಫೈರ್ ವರ್ಕ್ ಕಾಕ್ಟೈಲ್ ನಿಮ್ಮ ಬಾಯಲ್ಲಿ ಸ್ವಾದದ ಸ್ಪೋಟವನ್ನೇ ಮಾಡುತ್ತದೆ. ಇನ್ನು ಇದನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ.
ಐಸ್ಕ್ಯೂಬ್, 45ಎಂಎಲ್ ಅಬ್ಸುಲುಟ್ ವೋಡ್ಕಾ, 60 ಎಂಎಲ್ ನಿಂಬೆ ರಸ, 60 ಎಂಎಲ್ ಐಸ್ಟೀ, 1 ನಿಂಬೆ
ಮಾಡುವ ವಿಧಾನ: ಐಸ್ ಕ್ಯೂಬ್ ತುಂಬಿದ ಗ್ಲಾಸ್ಗೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಿಸಿ, ಅದಕ್ಕೆ ನಿಂಬೆಯಿಂದ ಅಲಂಕರಿಸಿ.
ಸೀ ಬ್ರೀಸ್: ಬಿರು ಬೇಸಿಗೆಯ ದಿನದಲ್ಲಿ ನಿಮ್ಮ ಮನಸ್ಸಿನಲ್ಲಿ ತಂಗಾಳಿ ಏಳುವಂತೆ ಮಾಡುವ ಅದ್ಬುತ ರುಚಿಯ ಕಾಕ್ಟೈಲ್ ಇದಾಗಿದೆ. ಇದು ಸಮುದ್ರ ಅಲೆಗಳು ಏಳುವಂತೆ ಹಿತವಾದ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು
ಐಸ್ ಕ್ಯೂಬ್, 45 ಎಂಎಲ್ ಅಬ್ಸುಲುಟ್ ವೋಡ್ಕಾ, 80 ಎಂಎಲ್ ದ್ರಾಕ್ಷಿ ರಸ, 45 ಎಂಎಲ್ ಕ್ಯಾನ್ಬೆರ್ರಿ ಜ್ಯೂಸ್, 1 ನಿಂಬೆ ಗಾಲಿ
ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಅದಕ್ಕೆ ನಿಂಬೆಯ ಗಾಲಿ ಚಕ್ರದಿಂದ ಗ್ಲಾಸ್ ಅನ್ನು ಅಲಂಕರಿಸಿದರೆ, ರುಚಿಯಾದ ಸೀ ಬ್ರೀಸ್ ಕಾಕ್ಟೈಲ್ ರೆಡಿ
ವೋಡ್ಕಾ ಮೊಜಿಟೊ: ವೋಡ್ಕಾ ಮಾಜಿಟೋ ಸಿಹಿಯಿಂದ ಕೂಡಿದ ಸರಳ ಪಾನೀಯವಾಗಿದ್ದು, ಇದು ನಿಮ್ಮ ದಿನವನ್ನು ತಾಜಾಗೊಳಿಸುತ್ತದೆ
ಇದಕ್ಕೆ ಬೇಕಾಗಿರುವ ಸಾಮಗ್ರಿಗಳು: 45 ಎಂಎಲ್ ಅಬ್ಸುಲುಟ್ ವೋಡ್ಕಾ, 20 ಎಂಎಲ್ ಸಿಂಪಲ್ ಸಿರಪ್, 6 ಪುದಿನಾ ಎಲೆ, 4 ನಿಂಬೆ, ಸೋಡಾ ನೀರು.
ಮಾಡುವ ವಿಧಾನ: ಪುದಿನಾ ಎಲೆ, ನಿಂಬೆ ಮತ್ತು ಸಿಂಪಲ್ ಸಿರಪ್ ಅನ್ನು ಗ್ಲಾಸ್ಗೆ ಹಾಕಿ ಚೆನ್ನಾಗಿ ಬೆರಸಿ, ಅದಕ್ಕೆ ಐಸ್ ಕ್ಯೂಬ್ ಜೊತೆಗೆ ಅಬ್ಸುಲುಟ್ ವೋಡ್ಕಾ ಹಾಕಿ ಕಲಿಸಿ ಬಳಿಕ ಸೋಡ ಬೆರಸಿ ನಂತರ ಪುದಿನಾ ಎಲೆಯಿಂದ ಅಲಂಕರಿಸಿ.
ಕಾಸ್ಮೋಪೊಲಿಟನ್: ಈ ಪಾನೀಯವೂ ಸಿಹಿ, ಹುಳಿರ ರುಚಿಯಿಂದ ಕೂಡಿದ್ದು, ನಯವಾದ ಮತ್ತು ಉತ್ಕೃಷ್ಟತೆಯ ಸ್ವಾದ ನೀಡುತ್ತದೆ.
ಬೇಕಾಗುವ ಸಾಮಗ್ರಿ: 40 ಎಂಎಲ್ ಅಬ್ಸುಲುಟ್ ಸಿಟ್ರೊನ್, 20 ಎಂಎಲ್ ಟ್ರಿಪಲ್ ಸೆಕ್, 20 ಎಂಎಲ್ ನಿಂಬೆ ರಸ, 20 ಎಂಎಲ್ ಕ್ಯಾನ್ಬೆರ್ರಿ ಜ್ಯೂಸ್, 1 ಕಿತ್ತಳೆ ಗಾಲಿ
ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಬೆರಸಿ ಅದಕ್ಕೆ ಐಸ್ ಕ್ಯೂಬ್ ಹಾಕಿ ಕಲಕಿ ಬಳಿಕ ಕಿತ್ತಳೆಯ ಗಾಲಿಯೊಂದಿಗೆ ಅಲಂಕರಿಸಿ.
ಮಾಸ್ಕೋ ಮ್ಯೂಲೆ: ಶಕ್ತಿದಾಯದ ಪಾನೀಯಾಗಿದ್ದು, ತಾಮ್ರದ ಲೋಟದಲ್ಲಿ ಇದನ್ನು ನೀಡುವುದರಿಂದ ಇದು ಮತ್ತಷ್ಟು ಆಕರ್ಷಣೀಯ ಮತ್ತು ಸ್ವಾದ ಭರಿತವಾಗುತ್ತದೆ.
ಇದಕ್ಕೆ ಬೇಕಾಗಿರುವ ಸಾಮಗ್ರಿಗಳು: ಐಸ್ಕ್ಯೂಬ್, 40 ಎಂಎಲ್ ಅಲ್ಸುಲುಟ್ ವೋಡ್ಕಾ, 15 ಎಂಎಲ್ ನಿಂಬೆ ಜ್ಯೂಸ್, ಜಿಂಜರ್ ಬೀರ್, 1 ನಿಂಬೆ,
ಮಾಡುವ ವಿಧಾನ: ತಣ್ಣಗಿರುವ ಸ್ಟೀಲ್ ಅಥವಾ ತಾಮ್ರದ ಲೋಟಕ್ಕೆ ಐಸ್ ಕ್ಯೂಬ್ ಬೆರಸಿ ಅದಕ್ಕೆ 1.5 ಭಾಗದಷ್ಟು ವೋಡ್ಕಾ ಮತ್ತು 0.5 ಭಾಗ ನಿಂಬೆ ಜ್ಯೂಸ್ ಬೆರಸಿ, ಅದಕ್ಕೆ ಜಿಂಜರ್ ಬೀರ್ ಅನ್ನು ಹಾಕಿ ಬಳಿಕ ನಿಂಬೆ ಗಾಲಿಗಳೊಂದಿಗೆ ಅಲಂಕರಿಸಿ.
ಇದನ್ನೂ ಓದಿ: ನೀವು ಸೆಲ್ಫಿ ಪ್ರಿಯರೇ... ಹಾಗಾದರೆ ಅದು ನಿಮ್ಮ ಆಹಾರ ಕ್ರಮಗಳ ಬದಲಾವಣೆಗೂ ಕಾರಣವಾಗಬಹುದು!