ETV Bharat / sukhibhava

ಸ್ವಯಂ ನಿರೋಧಕ ರೋಗ ಚಿಕಿತ್ಸೆಯಲ್ಲಿ ಶುಂಠಿ ಪೂರಕ ಬಳಸಿದ್ರೆ ಅದ್ಭುತ ಪ್ರಯೋಜನ.. - ಶುಂಠಿ ಪ್ರಮುಖ ಪಾತ್ರ ನಿರ್ವಹಣೆ

ಹಲವಾರು ವಿಭಿನ್ನ ಸ್ವಯಂ ನಿರೋಧಕ ಕಾಯಿಲೆಗಳಿರುವ ಜನರಲ್ಲಿ ಉರಿಯೂತ ಮತ್ತು ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ನೈಸರ್ಗಿಕ ಪೂರಕವಾಗಿ ಶುಂಠಿ ಕಾರ್ಯ ನಿರ್ವಹಿಸುತ್ತದೆ.

Ginger supplement is very beneficial in treating autoimmune diseases

author img

By ETV Bharat Karnataka Team

Published : Sep 23, 2023, 6:06 PM IST

ನ್ಯೂಯಾರ್ಕ್​: ಸ್ವಯಂ ನಿರೋಧಕ ರೋಗ ಹೊಂದಿರುವ ಮಂದಿಯಲ್ಲಿ ಊರಿಯುತವನ್ನು ನಿಯಂತ್ರಣ ಮಾಡುವಲ್ಲಿ ಶುಂಠಿ ಪ್ರಮುಖ ಪಾತ್ರ ನಿರ್ವಹಣೆ ಮಾಡುತ್ತದೆ ಎಂದು ಹೊಸ ಅಧ್ಯಯನ ಪತ್ತೆ ಮಾಡಿದೆ.

ಊರಿಯುತಕ್ಕೆ ಮದ್ದು: ಬಿಳಿ ರಕ್ತ ಕಣ ನ್ಯೂಟ್ರೊಫಿಲ್​ ಮೇಲೆ ಶುಂಠಿಯ ಪೂರಕಗಳ ಪರಿಣಾಮವನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ವಿಶೇಷವಾಗಿ ನ್ಯೂಟ್ರೊಫಿಲ್​ ಎಕ್ಸ್​ಟ್ರಾಸೆಲ್ಯೂಲರ್​ ಟ್ರಾಪ್​​ (ಎನ್​ಇಟಿ) ಜೋಡಣೆಯಲ್ಲಿ ಅವರು ಆಸಕ್ತಿ ಹೊಂದಿದ್ದಾರೆ. ಇದು ಎನ್​ಇಟೊಸಿಸ್​ ಎಂದು ಕೂಡ ಪರಿಚಿತವಾಗಿದೆ. ಇದು ಊರಿಯೂತ ನಿಯಂತ್ರಣ ಮಾಡುತ್ತದೆ.

ಜರ್ನಲ್​ ಜೆಸಿಐ ಇನ್​ಸೈಟ್​ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಆರೋಗ್ಯವಂತ ವ್ಯಕ್ತಿಗಳು ಶುಂಠಿ ಸೇವನೆಯಿಂದ ಅವರಲ್ಲಿನ ನ್ಯೂಟ್ರೋಫಿಲ್​ಗಳನ್ನು ನೆಟೋಸಿಸ್​​ಗೆ ಹೆಚ್ಚು ನಿರೋಧಕವಾಗಿಸುತ್ತದೆ. ಎನ್​ಇಟಿಗಳು ಉರಿಯೂತ ಮತ್ತು ಹೆಪ್ಪುಗಟ್ಟುವಿಕೆಯನ್ನು ಮುಂದೂಡುವ ರಚನೆಗಳಾಗಿವೆ. ಇದು ಲೂಪಸ್, ಆಂಟಿಫಾಸ್ಫೋಲಿಪಿಡ್ ಸಿಂಡ್ರೋಮ್ ಮತ್ತು ರುಮಟಾಯ್ಡ್ ಸಂಧಿವಾತ ಸೇರಿದಂತೆ ಅನೇಕ ಸ್ವಯಂ ನಿರೋಧಕ ಕಾಯಿಲೆಗಳಿಗೆ ಚಿಕಿತ್ಸಕವಾಗಬಲ್ಲದು.

ಹಲವಾರು ವಿಭಿನ್ನ ಸ್ವಯಂ ನಿರೋಧಕ ಕಾಯಿಲೆಗಳಿರುವ ಜನರಲ್ಲಿ ಉರಿಯೂತ ಮತ್ತು ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ನೈಸರ್ಗಿಕ ಪೂರಕವಾಗಿ ಶುಂಠಿ ಕಾರ್ಯ ನಿರ್ವಹಿಸುತ್ತದೆ. ಇದು ನೆಟೀಸಿಸ್​​ ತಡೆಯಲು ಸಾಧ್ಯವಾಗುತ್ತದೆ ಎಂದು ಅಮೆರಿಕದ ಯುನಿವರ್ಸಿಟಿ ಆಫ್​ ಕೊಲೊರಾಡೋ ಸ್ಕೂಲ್​ ಆಫ್​ ಮೆಡಿಸಿನ್​ ಸಹಾಯಕ ಪ್ರಾಧ್ಯಾಪಕಿ ಮತ್ತು ಸಂಶೋಧನೆಯ ಮುಖ್ಯ ಲೇಖಕರಾದ ಕ್ರಿಸ್ಟೆನ್​ ಡೆಮೊರುಲ್ಲೆ ತಿಳಿಸಿದ್ದಾರೆ.

ಪ್ರತಿನಿತ್ಯ 20 ಮಿ ಗ್ರಾಂ ಶುಂಠಿ ಸೇವನೆ: ಇನ್ನು ಈ ಸಂಬಂಧ ನಡೆಸಲಾದ ಪ್ರಯೋಗದಲ್ಲಿ ಏಳು ದಿನದ ಕಾಲ ಭಾಗಿದಾರರಿಗೆ 20 ಮಿ ಗ್ರಾಂ ಶುಂಠಿಯ ಪೂರಕವನ್ನು ನೀಡಲಾಗಿದೆ. ಸಿಎಎಂಪಿ ಸೇವಿಸುವುದರಿಂದ ಎನ್​ಇಟೊಸಿಸ್ ಪ್ರತಿಬಂಧಿಸಬಹುದಾಗಿದೆ.

ಶುಂಠಿಯು ಉರಿಯೂತದ ಗುಣಲಕ್ಷಣಗಳಿಗೆ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುವ ಕಾರ್ಯವಿಧಾನದ ಸಾಕ್ಷಿಯನ್ನು ನೀಡಲಾಗಿದೆ ಎಂದು ಮಿಚಿಗನ್​​ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಜೇಸಸ್​ ನೈಟ್​​ ತಿಳಿಸಿದ್ದಾರೆ.

ಶುಂಠಿಯು ನ್ಯೂಟ್ರೋಫಿಲ್​ ಸೇರಿದಂತೆ ಅನೇಕ ಅಂಶಗಳ ಮೇಲೆ ಪರಿಣಾಮವನ್ನು ಹೊಂದಿದೆ ಎಂದು ತೋರಿಸಿದೆ. ಚಿಕಿತ್ಸೆಯಲ್ಲಿ ಶುಂಠಿಯ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನಕಾರಿಯಾಗಬಹುದೇ ಎಂದು ಚರ್ಚಿಸಲು ಈ ಅಧ್ಯಯನ ಪ್ರೋತ್ಸಾಹಿಸುತ್ತದೆ ಎಂದು ಸಂಶೋಧಕರು ನಿರೀಕ್ಷಿಸಿದ್ದಾರೆ.

ಜನರ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವ ವಿಷಯದಲ್ಲಿ ಹೆಚ್ಚು ಕಾರ್ಯತಂತ್ರ ಮತ್ತು ವೈಯಕ್ತೀಕರಿಸುವುದು ಗುರಿಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಪಿಜ್ಜಾ, ಬರ್ಗರ್​​, ಡಯಟ್​ ಕೋಕ್ ಪ್ರಿಯರಿಗೆ ಖಿನ್ನತೆಯ ಅಪಾಯ ಹೆಚ್ಚು​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.