ನವದೆಹಲಿ: ಬೆಳಗಿನ ತಿಂಡಿ ಎಂಬುದು ದಿನದ ಬಹುಮುಖ್ಯ ಆಹಾರವಾಗಿದೆ. ಇದು ದಿನವೀಡಿ ಬೇಕಾಗುವ ಗ್ಲುಕೋಸ್ ಪೂರೈಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ.
ಪುರಾವೆ ಆಧಾರಿತ ಅಧ್ಯಯನವೂ ತೋರಿಸುವಂತೆ ಬೆಳಗಿನ ತಿಂಡಿಗಳು ಅನೇಕ ಪ್ರಯೋಜನಗಳನ್ನು ದೇಹಕ್ಕೆ ನೀಡುತ್ತವೆ. ಇದು ಶಕ್ತಿಯ ಮಟ್ಟ ಮತ್ತು ಕಡಿಮೆ ಅವಧಿಯಲ್ಲಿ ಏಕಾಗ್ರತೆಯ ಸಾಮರ್ಥ್ಯವನ್ನು ಹೆಚ್ಚಿಸಿ, ತೂಕ ನಿರ್ವಹಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ, ಟೈಪ್ 2 ಮಧುಮೇಹ ಸೇರಿದಂತೆ ಇನ್ನಿತರ ಅಪಾಯವನ್ನು ಕಡಿಮೆ ಮಾಡಿ, ಹೃದಯ ಸಮಸ್ಯೆಯಿಂದ ದೂರವಿಡುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮದ ಹೊರತಾಗಿ ಈ ಎರಡು ಕಾರಣದಿಂದ ಬೆಳಗಿನ ತಿಂಡಿಯನ್ನು ಅಪ್ಪಿ ತಪ್ಪಿಯೂ ತಪ್ಪಿಸಬಾರದು.
ಬೆಳಗಿನ ತಿಂಡಿ ತಪ್ಪಿಸುವುದರಿಂದ ಒಟ್ಟಾರೆ ಶಕ್ತಿಯ ಸೇವನೆಯನ್ನು ಕಡಿಮೆ ಮಾಡುವ ಮಾರ್ಗ ಎಂದು ಕಾಣಿಸುತ್ತದೆ. ಆದರೆ, ಹೆಚ್ಚಿನ ಶಕ್ತಿ ಸೇವನೆಯೊಂದಿಗೆ ಬೆಳಗಿನ ತಿಂಡಿ ಸೇವಿಸುವವರು ದಿನದ ನಂತರದವರೆಗೆ ತಿನ್ನದವರಿಗಿಂತ ಬೆಳಿಗ್ಗೆ ಹೆಚ್ಚು ದೈಹಿಕವಾಗಿ ಸಕ್ರಿಯರಾಗಿರುತ್ತಾರೆ. ಇನ್ನು ಬೆಳಗಿನ ಆಹಾರವನ್ನು ಸುಲಭವಾಗಿ ಮಾಡುವ ಅನೇಕ ಮಾರ್ಗಗಳು ಇದೆ.
ಅನೇಕ ಮಂದಿ ರಾತ್ರಿ ತಡವಾಗಿ ಊಟ ಮುಗಿಸಿದಾಗ ಬೆಳಗಿನ ಹೊತ್ತು ಆಹಾರ ಸೇವಿಸುವುದು ಸಾಧ್ಯವಾಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ವೇಳೆ, ಅವರು ಸಾಮಾನ್ಯ ಬೆಳಗಿನ ತಿಂಡಿ ಬದಲಾಗಿ ಸುಲಭವಾಗಿ ಹಸಿವನ್ನು ನೀಗಿಸುವ ಆಹಾರಗಳ ಮೊರೆ ಹೋಗಬಹುದು.
ಪ್ರೋಟಿನ್, ಫೈಬರ್, ಕೊಬ್ಬಿನ ಆಹಾರವನ್ನು ಬಳಸಿಕೊಂಡು ಸಮತೋಲಿತ ತಿಂಡಿಗಳನ್ನು ಸೇವಿಸಬಹುದು. ಕಡಲೆಕಾಯಿಕಾಯಿ, ಹಾಲು ಮತ್ತು ಹಣ್ಣು, ಮೊಸರು, ತರಕಾರಿ, ಸ್ಕ್ರಾಂಬಲ್ಡ್ ಮೊಟ್ಟೆಯೊಂದಿಗೆ ಗೋಧಿ ಬ್ರೇಡ್ ಟೋಸ್ಟ್ ಸೇವಿಸಬಹುದು.
ಬಾಳೆಹಣ್ಣು, ಯೋಗರ್ಟ್ ಮತ್ತು ಓಟ್ಗಳು ಉತ್ತಮ ಪೋಷಕಾಂಶಗಳನ್ನು ಹೊಂದಿದ್ದು, ಇದು ಉತ್ತಮ ರಾತ್ರಿ ಆಹಾರವಾಗಿದೆ. ಪೀನಟ್ ಬಟರ್ ಮತ್ತು ಬಾಳೆಹಣ್ಣಿನ ಸ್ಯಾಂಡ್ವಿಚ್ ಕಡಿಮೆ ವೆಚ್ಚದ ಆಹಾರವಾಗಿದ್ದು, ಬಲು ಸುಲಭವಾಗಿ ಪೋಷಕಾಂಶಗಳನ್ನು ಒದಗಿಸಲಿದೆ.
ಮಾಂಸಾಹಾರಿಗಳಿಗೆ ಇಲ್ಲಿದೆ ಆಯ್ಕೆ: ಕತ್ತರಿಸಿದ ಟರ್ಕಿಗಳು ಕಡಿಮೆ ಕೊಬ್ಬನ್ನು ಹೊಂದಿದ್ದು, ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರೋಟಿನ್ ಅಂಶ ಹೊಂದಿದೆ. ಇದು ಸೀಮಿತ ಕ್ಯಾಲೋರಿಯಲ್ಲಿ ನಿಮ್ಮ ಸ್ನಾಯುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತರಕಾರಿಗಳ ಜೊತೆಗೂ ಟರ್ಕಿಯನ್ನು ಸೇವಿಸಬಹುದಾಗಿದ್ದು, ಜೊತೆಗೆ ಗೋಧಿ ಬ್ರೇಡ್ ಮತ್ತು ಅವಕಾಡೋ ಕೂಡ ಉತ್ತಮ ಆಯ್ಕೆ.
ಸಾಲ್ಮೊನ್ ಮೀನು ಕೂಡ ಆರೋಗ್ಯಯುತ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಜೊತೆಗೆ ಪ್ರೋಟಿನ್ ಮತ್ತು ವಿಟಮಿನ್ ಬಿ ಸಂಪನ್ಮೂಲ ಹೊಂದಿದೆ, ಇದು ಹೃದಯದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಸಸ್ಯಾಹಾರಿಗಳಿಗೆ ಇವು ಉತ್ತಮ ಆಯ್ಕೆ. ಗ್ರೀಕ್ ಯೋಗರ್ಟ್ ಜೊತೆಗೆ ಬೆರ್ರಿ ಮತ್ತು ನಟ್ಗಳು ಇತ್ತೀಚಿನ ದಿನದಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದನ್ನು ವಾಲ್ನಟ್, ಬಾದಾಮಿ, ಗೋಡುಂಬಿ, ಚಿಯಾ ಬೀಜ ಅಥವಾ ಫ್ಲೆಕ್ಸ್ ಸೀಡ್, ತಾಜಾ ಬೆರ್ರಿ, ರೆಸ್ಬೆರ್ರಿ, ಸ್ಟ್ರಾಬೆರಿ ಅಥವಾ ಬ್ಲಾಕ್ ಬೆರಿ ಜೊತೆಗೆ ಸೇವಿಸಬಹುದು. ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಹೊಂದಿರುವ ಪಾಲಕ್, ಬಾದಾಮಿ ಅಥವಾ ಗೋಡುಂಬಿ ಹಾಲು ಮತ್ತು ಬೆರ್ರಿಗಳ ಗ್ರೀನ್ ಸ್ಮೂಥಿಗಳು ಕೂಡಾ ಉತ್ತಮ ಆಯ್ಕೆ ಆಗಿದೆ. ಇದಕ್ಕೆ ಬೇಕಾದಲ್ಲಿ ಕಾಮ ಕಸ್ತೂರಿ ಬೀಜ ಅಥವಾ ಫ್ಲೆಕ್ಸ್ ಸೀಡ್ಗಳನ್ನು ಬಳಕೆ ಮಾಡಬಹುದು.
ಓಟ್ಮಿಲ್: ಇದು ಫೈನರ್, ಗ್ಲೇಸೆಮಿಕ್ ಹೊಂದಿದ್ದು ಸಮೃದ್ಧವಾಗಿದೆ, ಇದು ನಿಮ್ಮ ತಿನ್ನುವ ಬಯಕೆಯನ್ನು ತಪ್ಪಿಸುತ್ತದೆ. ಇದಕ್ಕೆ ಹಾಲು ಅಥವಾ ಮೊಸರು, ಬೆರ್ರಿ, ಒಳಹಣ್ಣು, ತಾಜಾ ಹಣ್ಣುಗಳನ್ನು ಬಳಕೆ ಮಾಡಬಹುದು. ಇದು ಕೂಡ ನಿಮ್ಮ ರುಚಿಯ ಸ್ವಾದ ಹೆಚ್ಚಿಸುವ ಜೊತೆಗೆ ಅಧಿಕ ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು, ರೋಗ, ವಯಸ್ಸಾಗುವಿಕೆ ಮತ್ತು ಊರಿಯುತದಿಂದ ದೂರ ಇರಿಸುತ್ತದೆ.
ಬಾದಾಮಿ ಬೆಣ್ಣೆ, ಬಾಳೆಹಣ್ಣು, ಯೋಗರ್ಟ್ ಮತ್ತು ಚಕ್ಕೆ ಪುಡಿಗಳು ಸ್ಮೂಥಿ ಕೂಡ ಉತ್ತಮ ಆರೋಗ್ಯಕರ ಆಯ್ಕೆಯಾಗಿದೆ. ಇದು ನಿಮ್ಮ ದೇಹಕ್ಕೆ ಬೇಕಾದ ಫೈಬರ್, ಪೋಟಾಶಿಯಂ. ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ ಬಿ6 ಅನ್ನು ನೀಡಿ ಒತ್ತಡವನ್ನು ನೀಗಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
ವೆಗಾನ್ಗಳಿಗೂ ಇದೆ ಆಯ್ಕೆ: ವೆಗಾನ್ ಆಹಾರಗಳನ್ನು ಅದೇ ರೀತಿಯ ಪೋಷಕಾಂಶದ ಅಂಶಗಳನ್ನು ಬಳಕೆ ಮಾಡಬಹುದು. ಅವಕಾಡೋ, ಒಣಹಣ್ಣುಗಳು ಆರೋಗ್ಯಯುತ ಕೊಬ್ಬಿನ ಆಹಾರಗಳ ಮೂಲವಾಗಿದೆ, ಬೇಳೆಗಳು ಕೂಡ ಫೈಬರ್ ಅಂಶ ಹೊಂದಿದ್ದು, ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಬೀನ್ಸ್ ಟೊಫುಗಳು ಪ್ರೋಟಿನ್ ಸಮೃದ್ದವಾಗಿದೆ. ವಾಲ್ನಟ್ ಮತ್ತು ಪ್ಲೆಕ್ಸ್ ಸೀಡ್ನಲ್ಲಿ ಒಮೆಗಾ 3 ಅಂಶ ಇದೆ.
ಓಟ್ಸ್ ಜೊತೆಗೆ ಒಣಹಣ್ಣು ಮತ್ತು ತಾಜಾ ಹಣ್ಣುಗಳು, ಸೋಯಾ ಯೋಗರ್ಟ್, ಬಾಳೆಹಣ್ಣು ಮತ್ತು ಬೆರ್ರಿಗಳನ್ನು ಬಳಕೆ ಮಾಡಬಹುದು. ಮಾವಿನ ಹಣ್ಣಿನ ಜೊತೆಗೆ ಗ್ರೀನ್ ಸ್ಮೂಥಿಗಳು ಕೂಡ ಉತ್ತಮ ಶಕ್ತಿಯನ್ನು ನೀಡುತ್ತದೆ. ಎಳನೀರನ್ನು ಕೂಡ ಉತ್ತಮ ಆಯ್ಕೆಯಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ವಿಕೇಂಡ್ ಮಸ್ತಿಗೆ ಸಾಥ್ ನೀಡುವ ರುಚಿಕರ ಕಾಕ್ಟೈಲ್ನ ರೆಸಿಪಿಗಳಿವು.. ನೀವೂ ಒಮ್ಮೆ ಟ್ರೈ ಮಾಡಿ!