ETV Bharat / sukhibhava

ಮಕ್ಕಳ ನಿದ್ದೆ ಮತ್ತು ಆರೋಗ್ಯದ ನಡುವಿದೆ ಸಂಬಂಧ: ಅಧ್ಯಯನ

author img

By

Published : Jun 21, 2023, 2:49 PM IST

ಮಕ್ಕಳಲ್ಲಿ ಸಾಕಷ್ಟು ಪ್ರಮಾಣದ ಗುಣಮಟ್ಟದ ನಿದ್ರೆ ಆರೋಗ್ಯಯುತ ನಡವಳಿಕೆ, ಭಾವನಾತ್ಮಕತೆ ಮತ್ತು ಅರಿವಿನ ಅಭಿವೃದ್ಧಿಗೆ ಅವಶ್ಯಕ.

adolescent-sleep-and-health-are-linked-study

ಕ್ಯಾಲಿಫೋರ್ನಿಯಾ: ನಿದ್ದೆ ಮತ್ತು ಸಾಮಾನ್ಯ ಆರೋಗ್ಯ ಹಾಗೂ ಯೋಗಕ್ಷೇಮದ ನಡುವಿನ ಸಂಕೀರ್ಣ ಸಂಬಂಧದ ಕುರಿತು ಎಸ್​ಆರ್​ಐನ ಹ್ಯೂಮನ್​ ಸ್ಲೀಪ್​ ರಿಸರ್ಚ್​ ಪ್ರೊಗ್ರಾಂ ನಿರ್ದೇಶಕ ಫಿಯೊನ್​ ಬೇಕರ್ ಹೊಸ ಅಧ್ಯಯನ ನಡೆಸಿದ್ದಾರೆ. ಇವರ ಬಹುತೇಕ ಕೆಲಸದ ಮುಖ್ಯಗುರಿ ಮಕ್ಕಳ ನಿದ್ದೆಯ ಮಾದರಿ. ಹದಿಹರೆಯದವರಲ್ಲಿ ಮಿದುಳಿನ ಬೆಳವಣಿಗೆ ನಿದ್ರೆಯ ಆರೋಗ್ಯಯುತ ಮಾದರಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಶೋಧನೆಯಲ್ಲಿ ಈ ಎರಡು ವಿಷಯಗಳ ನಡುವಿನ ಸಂಬಂಧದ ಬಗ್ಗೆ ತಿಳಿಸಲಾಗಿದೆ.

ನಿದ್ರೆ ಪ್ರತಿಯೊಬ್ಬರಿಗೂ ಅವಶ್ಯವಾಗಿ ಬೇಕು. ಅದರಲ್ಲೂ ಮಕ್ಕಳಿಗಿದು ಹೆಚ್ಚು ಅಗತ್ಯ ಎಂದಿದ್ದಾರೆ ಅಧ್ಯಯನಕಾರ ಬೇಕರ್​. 10ರಿಂದ 21 ವರ್ಷದ ನಡುವೆ ಮಿದುಳು ಬೆಳೆಯುತ್ತದೆ ಮತ್ತು ಮೂಲಭೂತ ಮಾರ್ಗದಲ್ಲಿ ಪಕ್ವವಾಗುತ್ತದೆ. ನಿದ್ರೆಯನ್ನು ಕೇವಲ ನಡುವಳಿಕೆ ಮಾತ್ರವಾಗಿ ಅರ್ಥೈಸಿಕೊಳ್ಳದೇ ಇದು ಮಿದುಳು ಮತ್ತು ಜೀವನದ ಯೋಗ ಕ್ಷೇಮ ವಿಚಾರದಲ್ಲಿನ ಪ್ರಮುಖ್ಯತೆಯ ಕುರಿತು ಅಧ್ಯಯನ ನಡೆಸಲಾಗಿದೆ.

ಈ ಅವಧಿಯಲ್ಲಿ ಮಿದುಳು ಹೆಚ್ಚು ಸಾಮರ್ಥ್ಯ ಹೊಂದಿರುತ್ತದೆ. ಬಾಲ್ಯದೊಂದಿಗೆ ಮಿದುಳು ಸಾಕಷ್ಟು ಸಾಮ್ಯತೆಯ ಸಂಬಂಧ ಹೊಂದಿರುತ್ತದೆ. ವ್ಯಕ್ತಿಯನ್ನು ಮುಂದಿನ ಜೀವನಕ್ಕೆ ಬಲಗೊಳಿಸುವಲ್ಲಿ ಪ್ರಮುಖವಾಗಿದೆ. ಮಕ್ಕಳು ನಿದ್ರೆ ಮಾಡುವುದು ಕಡಿಮೆಯಾದರೆ ಅದು ಮಿದುಳಿನ ಅಭಿವೃದ್ಧಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಕಡಿಮೆ ನಿದ್ದೆಯಿಂದಾಗಿ ತೂಕ ಹೆಚ್ಚಳ, ಕಳಪೆ ಅರಿವಿನ ಅಭಿವೃದ್ಧಿ ಮತ್ತು ಸಾಮಾಜಿಕ ಭಾವನಾತ್ಮಕ ತೊಂದರೆಗೆ ಒಳಗಾಗಬಹುದು. ಈ ಅವಧಿಯಲ್ಲಿ ವಿಶೇಷ ಕಾಳಜಿಯ ಮೂಲಕ ನಿದ್ರೆಯ ಸಂಬಂಧವನ್ನು ಉತ್ತಮವಾಗಿ ಅರ್ಥೈಸಿಕೊಳ್ಳಬೇಕಿದೆ ಎನ್ನುತ್ತಾರೆ ಅಧ್ಯಯನಕಾರರು.

ಸ್ಕ್ರೀನ್​ ಟೈಂ: ಹೆಚ್ಚಿನ ಪರದೆ ಸಮಯದಿಂದ ಆತಂಕ, ಮದ್ಯದ ಬಳಕೆ ಸೇರಿದಂತೆ ಹಲವು ವಿಚಾರಗಳು ಮಕ್ಕಳ ನಿದ್ದೆಗೆ ಭಂಗ ತರುವ ಅಂಶ. ಇತ್ತೀಚಿನ ಅಧ್ಯಯನದಲ್ಲಿ 10ರಿಂದ 14 ವರ್ಷದವರೇ ಬೆಡ್​ ಟೈಮ್​ ಸ್ಕ್ರೀನ್​ ಟೈಮ್​ (ಮಲಗುವ ಮುನ್ನ ಫೋನ್​, ಕಂಪ್ಯೂಟರ್​, ಟೆಲಿವಿಷನ್​​ ವೀಕ್ಷಣೆ) ಗಮನಿಸಿದಾಗ ಹಲವು ಆಸಕ್ತಿಕರ ಫಲಿತಾಂಶ ಲಭ್ಯವಾಗಿದೆ.

ಮಲಗುವ ಮುಂದೆ ಟಿವಿ ಅಥವಾ ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವ ಎಲೆಕ್ಟ್ರಾನಿಕ್​ ಸಾಧನ ಬಳಕೆಯಿಂದಾಗಿ ಶೇ 28 ಮಂದಿ ನಿದ್ರಾಭಂಗ ಅನುಭವಿಸಿದ್ದಾರೆ. ಇವರು ಎಚ್ಚರವಾಗಿದ್ದು, ಒಟ್ಟಾರೆ ನಿದ್ದೆಯ ಅಡೆತಡೆ ಅನುಭವಿಸಿದ್ದಾರೆ. ಮಕ್ಕಳ ಸಾಮಾನ್ಯ ಬೆಡ್​ ಟೈಂ​ ದಿನಚರಿಯಲ್ಲಿ ಸಿನಿಮಾ ನೋಡುವುದು, ವಿಡಿಯೋ, ಗೇಮಿಂಗ್​ ಆಡುವುದು, ಸಂಗೀತ ಕೇಳುವುದು, ಮಾತು ಆಡುವುದು ಮತ್ತು ಟೆಕ್ಸ್ಟ್​​ ಮಾಡುವುದು, ಸಾಮಾಜಿಕ ಮಾಧ್ಯಮದ ಬಳಕೆಯಾಗಿದ್ದು, ಇದು ನಿದ್ರೆಗೆ ಸವಾಲು ಒಡ್ಡಿದೆ.

ಮತ್ತೊಂದು ಅಧ್ಯಯನದಲ್ಲಿ, ಕೋವಿಡ್-19 ಸಾಂಕ್ರಾಮಿಕತೆ ಬಳಿಕ ಬೆಡ್​ ಟೈಮ್​ ಸ್ಟ್ರೀ ವೀಕ್ಷಣೆ, ತಡವಾಗಿ ಮಲಗುವುದು ಹೇಗೆ ಹದಿ ಹರೆಯದವರ ನಿದ್ದೆಗೆ ತೊಡಕಾಗಿದೆ ಎಂಬುದನ್ನು ನೋಡಲಾಗಿದೆ. ಸಾಂಕ್ರಾಮಿಕತೆ ಸಮಯದಲ್ಲಿ ಆನ್​ಲೈನ್​ ತರಗತಿ, ವಿಡಿಯೋ ಗೇಮ್ಸ್​​, ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹಿತರ ಸಂಪರ್ಕದಂತಹ ಚಟುವಟಿಕೆಯಿಂದ ಅವರ ಸ್ಕ್ರೀನ್​ ಟೈಂ​ ಹೆಚ್ಚಳವಾಗಿದೆ. ಈ ಅಧ್ಯಯನದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ವಿಡಿಯೋ ಗೇಮಿಂಗ್​ ರಾತ್ರಿ ನಿದ್ದೆ ಸಮಯವನ್ನು ಕಡಿತ ಮಾಡಿದೆ, ತಡ ನಿದ್ದೆಗೆ ಪ್ರೋತ್ಸಾಹ ನೀಡಿದೆ ಎಂಬುದನ್ನು ಗಮನಿಸಲಾಗಿದೆ.

ಸಾಂಕ್ರಾಮಿಕತೆ ಪರಿಣಾಮ: ಕೋವಿಡ್​ ಸಮಯದಲ್ಲಿ ಹದಿ ಹರೆಯದವರ ನಿದ್ದೆ ಮಾದರಿಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡಿದೆ. ಇದು ಆತಂಕ ಮತ್ತು ಕಾಳಜಿ ವಿಷಯ. ಈ ಸಂಬಂಧ ಅರಿವು- ಶಿಕ್ಷಣ ಮೂಡಿಸಬೇಕಿದೆ. ಕುಟುಂಬಗಳು ಮಕ್ಕಳ ಸ್ಕ್ರೀನ್​ ಟೈಮ್​ ಕಡಿಮೆ ಮಾಡುವ ವಿಧಾನಕ್ಕೆ ಮುಂದಾಬೇಕು. ಮಲಗುವ ಮುನ್ನ ಅಂದರೆ ಕನಿಷ್ಟ 30 ನಿಮಿಷಕ್ಕೆ ಮುಂಚೆ ಸ್ಕ್ರೀನ್​ ಟೈಂ​ನಿಂದ ದೂರ ಇರಬೇಕಿದೆ.

ಇತ್ತೀಚೆಗೆ ಬೇಕರ್​ ಮತ್ತು ಸಹೋದ್ಯೋಗಿಗಳು ಮಂದಿಸಿದ ಮೂರನೇ ಪೇಪರ್​ನಲ್ಲಿ, ನಾಲ್ಕು ವರ್ಷಗಳ ಅವಧಿಯಲ್ಲಿ 94 ಮಕ್ಕಳ ಮಿದುಳಿನ ಸ್ಕ್ಯಾನ್​ ಅನ್ನು ಪತ್ತೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಮಕ್ಕಳ ಆಲ್ಕೋಹಾಲ್​ ಬಳಕೆ ಹೇಗೆ ನಿದ್ದೆ ಭಂಗವಾಗುತ್ತದೆ ಎಂದು ಗಮನಿಸಲಾಗಿದೆ. ಈ ವೇಳೆ ಹರೆಯದ ಮಕ್ಕಳು ಅತಿ ಹೆಚ್ಚಿನ ಮದ್ಯ ಸೇವನೆ ಅವರ ನಿದ್ದೆಗೆ ಹೆಚ್ಚು ತೊಂದರೆ ಯಾಗುತ್ತದೆ ಎಂದು ಬೇಕರ್​ ತಿಳಿಸಿದ್ದಾರೆ. ಅವರು ಕುಡಿಯುವುದನ್ನು ನಿಲ್ಲಿಸಿದಾಗ ಅವರು ಸಾಮಾನ್ಯ ಸ್ಥಿತಿಗೆ ತೆರೆಳುತ್ತಾರೆ ಎಂದು ಈಗಲೇ ಹೇಳುವುದು ಕೂಡ ತುಂಬಾ ಬೇಗವಾಗುತ್ತದೆ ಎಂದಿದ್ದಾರೆ.

ಮಕ್ಕಳು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಿದ್ರೆ ಪರಿಣಾಮ ಬೀರುತ್ತದೆ ಎಂಬುದರ ಅರಿವನ್ನು ಹೊಂದಿರಬೇಕು. ಇದಕ್ಕೆ ಪೋಷಕರ ಮೇಲ್ವಿಚಾರಣೆಯೂ ಬೇಕು ಎಂದು ಬೇಕರ್​​ ತಿಳಿಸಿದ್ದಾರೆ. ಉತ್ತಮ ಗುಣಮಟ್ಟದ ನಿದ್ರೆ ಆರೋಗ್ಯ ಅಭೊವೃದ್ಧಿಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Good sleep...ರಾತ್ರಿ ಒಳ್ಳೆಯ ನಿದ್ದೆಗೆ ಇದೆ ದಾರಿ: ಉತ್ತಮ ಆರೋಗ್ಯಕ್ಕೆ ಈ ಅಭ್ಯಾಸ ಮುಖ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.