ನಿತ್ಯ ದೈಹಿಕ ಚಟುವಟಿಕೆ ರೂಢಿಸಿಕೊಳ್ಳುವುದರಿಂದ ಹೃದಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ಹೆಚ್ಚು. ಆದರೆ, ಇಂದಿನ ಬ್ಯುಸಿ ಜೀವನದಲ್ಲಿ ಬಹುತೇಕ ಮಂದಿ ಈ ರೀತಿ ದೈನಂದಿನ ವ್ಯಾಯಾಮ ಚಟುವಟಿಕೆ ನಡೆಸುವುದು ಕಷ್ಟವಾಗುತ್ತದೆ. ಆದರೆ, ಅವರು ವಾರದ ಒಂದೆರಡು ದಿನ ಅಥವಾ ವಾರಾಂತ್ಯದ ಸಾಧಾರಣದಿಂದ ಹೆಚ್ಚು ವ್ಯಾಯಾಮ ರೂಢಿಸಿಕೊಳ್ಳುವುದರಿಂದ ವಾರವಿಡಿ ದೈಹಿಕ ಚಟುವಟಿಕೆ ನಡೆಸಿದಷ್ಟೇ ರೀತಿಯಲ್ಲಿ ಪರಿಣಾಮ ಪಡೆಯಲಿದ್ದಾರೆ. ಇದು ಹೃದಯ ರೋಗ ಮತ್ತು ಪಾಶ್ವವಾರ್ಯುವಿನ ಅಪಾಯ ತಡೆಯುತ್ತದೆ ಎಂದು ಅಧ್ಯಯನ ತಿಳಿಸಿದೆ.
ಇನ್ನು ಈ ವಾರಾಂತ್ಯದ ದೈಹಿಕ ಚಟುವಟಕುಗಳು ಕನಿಷ್ಠ 150 ನಿಮಿಷದ ಸಾಧಾರಣದಿಂದ ಹೆಚ್ಚು ಕ್ರಿಯಾಶೀಲ ವ್ಯಾಯಾಮ ಒಳಗೊಂಡಿರಬೇಕು ಎಂಬ ಮಾರ್ಗಸೂಚಿಯನ್ನು ಶಿಫಾರಸು ಮಾಡಿದೆ. ಆದರೆ, ಏಕಾಗ್ರತೆಯಿಂದ ಕೂಡಿದ ವ್ಯಾಯಾಮಗಳು ಹಂಚಿಕೆಯ ಚಟುವಟಿಕೆಗಳಷ್ಟೇ ಪ್ರಯೋಜನ ಹೊಂದಿದೆಯಾ ಎಂಬುದು ಮಾತ್ರ ಅಸ್ಪಷ್ಟವಾಗಿದೆ.
ಈ ಅಧ್ಯಯನವನ್ನು ಆರೋಗ್ಯದ ಮ್ಯಾಗಜಿನ್ವೊಂದರಲ್ಲಿ ಪ್ರಕಟಿಸಲಾಗಿದೆ. ವಾರಾಂತ್ಯದ ಯೋಗದ ಈ ಮಾದರಿಗಳ ಅಳವಡಿಕೆಯು ದೈನಂದಿನ ದೈಹಿಕ ಚಟುವಟಿಕೆ ನಡೆಸುವಷ್ಟೇ ಪ್ರಯೋಜನವನ್ನು ಒಳಗೊಂಡಿದೆ ಎಂದು ಅದರಲ್ಲಿ ಹೇಳಲಾಗಿದೆ. ಜನರು ತಮ್ಮ ಜೀವನ ಜಂಜಾಟದಲ್ಲಿ ದೈನಂದಿನ ಚಟುವಟಿಕೆಯನ್ನು ನಡೆಸಲು ಸಾಧ್ಯವಾಗದೇ ಇರುವವರು ಇದನ್ನು ರೂಢಿಸಿಕೊಳ್ಳಬಹುದಾಗಿದೆ.
ವಾರಾಂತ್ಯ ಅಥವಾ ವಾರದಲ್ಲಿ ಎರಡು ದಿನ ಸಾಧಾರಣ ಮತ್ತು ತೀವ್ರತರದ ವ್ಯಾಯಾಮ ಚಟುವಟಿಕೆಗಳನ್ನು ಮಾಡುವುದರಿಂದ ಹೃದಯ ರಕ್ತನಾಳದಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ ಎಂದು ಅಧ್ಯಯನ ಮಾಡಿದ ಹಿರಿಯ ಲೇಖಕ ಪ್ಯಾಟ್ರಿಕ್ ಟಿ ಎಲ್ಲಿನೊರ್ ತಿಳಿಸಿದ್ದಾರೆ.
ಈ ಕುರಿತು ದತ್ತಾಂಶ ವಿಶ್ಲೇಷಣೆ ಕೂಡಾ ಮಾಡಲಾಗಿದೆ. ಇದಕ್ಕಾಗಿ ಅಧ್ಯಯನದಲ್ಲಿ ಭಾಗಿಯಾದ 89,573 ಮಂದಿಯ ಮಣಿಕಟ್ಟಿನ ಆಕ್ಸಿಲೆರೊಮೀಟರ್ ಮೂಲಕ ಅವರ ದೈಹಿಕ ಚಟುವಟಿಕೆ ಮತ್ತು ಪ್ರತಿನಿತ್ಯ ಅವರು ನಡೆಸಿದ ವಿವಿಧ ವ್ಯಾಯಮದ ದಾಖಲೆಗಳನ್ನು ಪಡೆಯಲಾಗಿದೆ.
ಈ ವೇಳೆ 33.7ರಷ್ಟು ಭಾಗಿದಾರರು ವಾರದಲ್ಲಿ150 ನಿಮಿಷಕ್ಕೂ ಕಡಿಮೆಯ ಮತ್ತು ತೀವ್ರತರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಶೇ 42.2ರಷ್ಟು ಮಂದಿ ವಾರಾಂತ್ಯದಲ್ಲಿ ವ್ಯಾಯಾಮ ಮಾಡುವವರಾಗಿದ್ದಾರೆ. ಇವರು ವಾರಾಂತ್ಯದಲ್ಲಿ ಕನಿಷ್ಠ 150 ನಿಮಿಷದ ವ್ಯಾಯಾಮ ಚಟುವಟಿಕೆಯಲ್ಲಿ ಅರ್ಧದಷ್ಟನ್ನು ಪೂರೈಸಿದ್ದಾರೆ. ಇನ್ನು 24.0 ರಷ್ಟು ಮಂದು ಪ್ರತಿನಿತ್ಯ 150 ನಿಮಿಷ ವ್ಯಾಯಾಮ ಮಾಡುವವರಾಗಿದ್ದಾರೆ.
ಈ ಹೊಂದಾಣಿಕೆ ಬಳಿಕ ಎರಡೂ ದೈಹಿಕ ಚಟುವಟಿಕೆ ಮಾದರಿಗಳು ಕಡಿಮೆ ಹೃದಯಾಘಾತಕ್ಕೆ ಸಂಬಂಧ ಹೊಂದಿದೆ ಎಂಬುದು ಕಂಡು ಬಂದಿದೆ. ವಾರಾಂತ್ಯದ ದೈಹಿಕ ಚಟುವಟಿಕೆಯಲ್ಲಿ ತೊಡಗಿದವರು ಶೇ 27ರಷ್ಟು ಕಡಿಮೆ ಹೃದಯಾಘಾತದ ಅಪಾಯ ಹೊಂದಿದ್ದಾರೆ ಶೇ 35ರಷ್ಟು ಮಂದಿ ದೈನಂದಿನ ಚಟುವಟಿಕೆ ಅಪಾಯವನ್ನು ಹೊಂದಿದ್ದಾರೆ. ಇವರಲ್ಲಿ ಹೃದಯ ವೈಫಲ್ಯದ ದರ ಶೇ 38 ಮತ್ತು 36ರಷ್ಟು ಕಡಿಮೆ ಇದೆ. ಜೊತೆಗೆ ಪಾಶ್ವರ್ವಾಯು ಅಪಾಯ ಕೂಡ ಶೇ 21 ಮತ್ತು ಶೇ 17ರಷ್ಟು ಕಡಿಮೆ ಇದೆ.
ವಾರಾಂತ್ಯದ ಯೋಧ ರೀತಿಯ ಚಟುವಟಿಕೆಯು ವ್ಯಾಪಕವಾದ ರೋಗಗಳ ಕಡಿಮೆ ಅಪಾಯಗಳೊಂದಿಗೆ ಸಂಬಂಧ ಹೊಂದಿದೆಯೇ ಎಂದು ನಿರ್ಣಯಿಸಲು ತಂಡವು ಯೋಜಿಸಿದೆ.
ಇದನ್ನೂ ಓದಿ: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಲೇಸರ್ ಯಂತ್ರ ಬಳಕೆ ಆರಂಭ: ಏನಿದರ ಪ್ರಯೋಜನ? ಈ ಜಿಲ್ಲೆಗಳ ಜನರಿಗೆ ಅನುಕೂಲ