ನವದೆಹಲಿ: ಶೇ 60ರಷ್ಟು ಭಾರತೀಯರಿಗೆ ಸ್ವದೇಶಿ ಆನ್ಲೈನ್ ಗೇಮಿಂಗ್ ವಲಯಗಳು ಜನರಿಗೆ ಜಗತ್ತನ್ನು ರಚಿಸಲು ಅವಕಾಶ ನೀಡುವ ಜೊತೆಗೆ ಸಾಗರೋತ್ತರಗಳಿಗೆ ಪ್ರತಿಭಾವಂತ ಟೆಕ್ಕಿಗಳ ಪಲಾಯನವನ್ನು ಅಂದರೆ ಬ್ರೈನ್ ಡ್ರೈನ್ ಆಗುವುದನ್ನು ತಡೆಯುತ್ತದೆ ಎಂದು ಅಧ್ಯಯನ ತಿಳಿಸಿದೆ.
2021-22ರ ಶೈಕ್ಷಣಿಕ ವರ್ಷದಲ್ಲಿ ಈ ಅಧ್ಯಯನದ ಫಲಿತಾಂಶ ಪತ್ತೆಯಾಗಿದೆ. ಅಮೆರಿಕದಲ್ಲಿ 2,00,000 ಭಾರತೀಯರು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ನಡುವೆ ಭಾರತೀಯ ಐಟಿ ವಲಯವು 2021 ರಲ್ಲಿ ನಿರಂತರವಾಗಿ 25.2 ಶೇಕಡಾ ಅಟ್ರಿಷನ್ ದರವನ್ನು ಎದುರಿಸುತ್ತಿದೆ. ಐಟಿ ವಲಯದಲ್ಲಿ ಪ್ರತಿಭಾವಂತರನ್ನು ಉದ್ಯೋಗಗಳಿಂದ ತೆಗೆದು ಹಾಕುತ್ತಿರುವ ಕ್ರಮ 2025ರವರೆಗೆ ಮುಂದುವರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಸುಮಾರು 2.2 ಮಿಲಿಯನ್ ಮಂದಿ ಐಟಿ - ಬಿಪಿಎಂನಿಂದ ವಾಪಸ್ ಆಗಲಿದ್ದಾರೆ ಅನ್ನುತ್ತಿದೆ ವರದಿ.
ಟ್ಯಾಲೆಂಟ್ ಡ್ರೈನ್ ನಂತಹ ಪರಿಸ್ಥಿತಿಯಲ್ಲಿ, ಆನ್ಲೈನ್ ಗೇಮಿಂಗ್ ವಲಯ ಅವರಿಗೆ ವೃತ್ತಿ ಜೀವನಕ್ಕೆ ಭರವಸೆಯ ಕ್ಷೇತ್ರವಾಗಿ ಹೊರ ಹೊಮ್ಮಲಿದೆ. ಕೌಶಲ್ಯಗಳ ವೇಗದ ಬೆಳವಣಿಗೆ ಮತ್ತು ಭಾರತೀಯ ಟೆಕ್ ಲ್ಯಾಂಡ್ಸ್ಕೇಪ್ ಕೌಶಲ್ಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಇ-ಗೇಮಿಂಗ್ ಫೆಡರೇಶನ್ (ಇಜಿಎಫ್) ಮತ್ತು ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನ ತಿಳಿಸಿದೆ.
ಈ ಸಂಶೋಧನೆಯು ತಂತ್ರಜ್ಞಾನ ಮತ್ತು ಗೇಮಿಂಗ್ ನಡುವಿನ ಸಂಬಂಧವನ್ನು ಸೂಚ್ಯವಾಗಿ ಹೈಲೈಟ್ ಮಾಡಿದೆ. ಉದ್ಯಮವೂ ವೇಗವಾಗಿ ವಿಕಾಸವಾದಂತೆ ನಮ್ಮ ಯುವಜನತೆ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ತಾಂತ್ರಿಕ ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆ ಪೋಷಿಸುವ ಪರಿಸರ ನಿರ್ಮಾಣ ಆಗುತ್ತದೆ ಎಂದು ಸಂಸ್ಥೆಯ ಪ್ರೊಫೆಸರ್ ಡಾ ಸುಭಮೊಯ್ ಮೈತ್ರಾ ತಿಳಿಸಿದ್ದಾರೆ.
ಈ ಅಧ್ಯಯನದ ಸಂಬಂಧ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನಲ್ಲಿ 4,644 ಮಂದಿಯ ಸಮೀಕ್ಷೆ ನಡೆಸಲಾಗಿದೆ. ಅಧ್ಯಯನದಲ್ಲಿ ಆನ್ಲೈನ್ ಕೌಶಲ್ಯದ ಗೇಮಿಂಗ್ ವಲಯದ ಬಗ್ಗೆ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಬ್ಬರೂ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ತೋರಿಸಲಾಗಿದೆ.
ಅಧ್ಯಯನದ ಫಲಿತಾಂಶವೂ ಶೇ 73ರಷ್ಟು ಭಾರತೀಯರು ತಮ್ಮ ವೃತ್ತಿಯನ್ನು ಆನ್ಲೈನ್ ಕೌಶಲ್ಯದ ಗೇಮಿಂಗ್ ವಲಯದಲ್ಲಿ ಪಡೆಯುವ ಉತ್ಸಾಹ ತೋರಿಸಿದ್ದಾರೆ. ಜೊತೆಗೆ ಅವರು ಈ ವಯಲ ವೇಗವಾಗಿ ಸಮರ್ಥವಾಗಿ ಬೆಳೆಯುತ್ತಿರುವ ಕುರಿತು ತಿಳಿಸಿದ್ದಾರೆ. ಉಳಿದ ಶೇ 68ರಷ್ಟು ಮಂದಿ ಗೇಮಿಂಗ್ನ ಪಾತ್ರವೂ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ ಎಂಬುದನ್ನು ಒಪ್ಪಿದ್ದಾರೆ.
ಆನ್ಲೈನ್ ಕೌಶಲ್ಯದ ಗೇಮಿಂಗ್ ವಲಯವು ಡಿಜಿಟಲ್ ಯುಗದಲ್ಲಿ ಬೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಇದು ಟೆಕ್ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳನ್ನು ಗಮನಾರ್ಹ ಆಸಕ್ತಿ ಹೆಚ್ಚಿಸಿದ್ದು, ಈ ಉದ್ಯಮದಲ್ಲಿ ವೃತ್ತಿ ಹೊಂದುವ ಕುರಿತು ಆಲೋಚಿಸುವಂತೆ ಮಾಡಿದೆ. ಜೊತೆಗೆ ಕಳೆದ ಹತ್ತು ವರ್ಷಗಳಿಂದ ಎಐ/ ಎಂಎಲ್ನಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕ್ಷೇತ್ರದಲ್ಲಿ ಹೂಡಿಕೆಯೂ ಗಣನೀಯವಾಗಿ ಹೆಚ್ಚಾಗಿದೆ ಎಂದು ಇ ಗೇಮಿಂಗ್ ಫೆಡೆರೆಷನ್ ಕಾರ್ಯದರ್ಶಿ ಮಲಯ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಎಐ ಕೌಶಲದಿಂದ ವೃತ್ತಿಜೀವನದಲ್ಲಿ ಏಳಿಗೆ: ಯುವ ಉದ್ಯೋಗಿಗಳ ಅಭಿಪ್ರಾಯ