ಸ್ಯಾನ್ ಫ್ರಾನ್ಸಿಸ್ಕೊ( ಅಮೆರಿಕ): ಕಾಲೇಜ್ನ ಕೆಫೆಟೇರಿಯಾ (ಕ್ಯಾಂಟೀನ್ ಸ್ಥಳಗಳು) ಅಲ್ಲಿ ಶೌಚಾಲಯಕ್ಕಿಂತ 60 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಇರುವಿಕೆಗೆ ನೆಲೆಯಾಗಿವೆ ಎಂಬ ಆಘಾತಕಾರಿ ಮಾಹಿತಿಯೊಂದು ಸಂಶೋಧನೆಯಿಂದ ಹೊರ ಬಿದ್ದಿದೆ.
ಕಾಲೇಜ್ ರೋವರ್ ನಡೆಸಿದ ಅಧ್ಯಯನದಲ್ಲಿ, ಸ್ನಾನದ ಮನೆ, ವಸತಿ ಪ್ರದೇಶ ಸೇರಿದಂತೆ ಸಾಮಾನ್ಯ ಪ್ರದೇಶಗಳು ಮತ್ತು ಕಂಪ್ಯೂಟರ್ ಲ್ಯಾಬ್‌ಗಳಲ್ಲಿನ ಕೀಬೋರ್ಡ್‌ಗಳು ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ವ್ಯಾಬ್ ಮಾಡುವ ಮೂಲಕ ಕ್ಯಾಂಪಸ್‌ಗಳಲ್ಲಿನ ಬ್ಯಾಕ್ಟೀರಿಯಾ ಹೊಂದಿರುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ. ಸ್ವ್ಯಾಬ್ಬಲ್ಲಿ ನಿರ್ದಿಷ್ಟ ವಿಧದ ಹಲವು ಸೂಕ್ಷ್ಮ ಜೀವನ ಸಂಖ್ಯೆಗಳನ್ನು ನಿರ್ಧರಿಸಲಾಗಿದೆ.
ಇದಕ್ಕೆ ಹೆಚ್ಚುವರಿಯಾಗಿ ಸಂಶೋಧಕರು 1000 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದು, ಅವರ ವೈಯಕ್ತಿಕ ಅನುಭವ ಮತ್ತು ಶುಚಿತ್ವದ ಅಭ್ಯಾಸದ ಕುರಿತು ಪ್ರಶ್ನಿಸಿದ್ದಾರೆ. ಅಧ್ಯಯನದ ಅನುಸಾರ, ಎಲ್ಲ ಕ್ಯಾಂಪಸ್ನ ಹಾಟ್ಸ್ಪಾಟ್ನಲ್ಲಿ ಸಾರ್ವಜನಿಕ ಶೌಚಾಲಯಗಳು ಅತ್ಯಂತ ಕೀಟಾಣು ಹೊಂದಿರುವ ಪ್ರದೇಶವಾಗಿದೆ. 47 ಮಿಲಿಯನ್ ಕಾಲೊನಿ ಫಾರ್ಮಿಂಗ್ ಯುನಿಟ್ಗಳಲ್ಲಿ, ಶೇ 64ರಷ್ಟು ಗ್ರಾಮ್ ನಕಾರಾತ್ಮಕ ರಾಡ್‌ಗಳು ಮತ್ತು ಶೇ 34ರಷ್ಟು ಟೈಪ್ 2 ಅಂದರೆ ಪಾರ್ಟಿ ಪ್ರದೇಶಕ್ಕಿಂತ ಕ್ಯಾಂಪಸ್ಗಳ ಸ್ನಾನಗೃಹಗಳು ಕೀಟಾಣುಗಳನ್ನು ಹೆಚ್ಚು ಹೆಚ್ಚು ಹೊಂದಿವೆ ಎಂಬ ಅಂಶ ಅಧ್ಯಯನದಿಂದ ತಿಳಿದು ಬಂದಿದೆ.
ಕೀಟಾಣು ಹೊಂದಿರುವ ಬಾತ್ರೂಮ್ಗಳು ಹೆಚ್ಚು ಅಚ್ಚರಿ ಮೂಡಿಸುವುದಿಲ್ಲ. ಕ್ಯಾಂಪಸ್ ಲಾಂಡ್ರಿ ಕೊಠಡಿಗಳಲ್ಲಿರುವ ಕೀಟಾಣುಗಳ ಸಂಖ್ಯೆ ಅಚ್ಚರಿ ಮೂಡಿಸುತ್ತದೆ. ಇಲ್ಲಿ 30.5 ಮಿಲಿಯನ್ ಸಿಎಫ್ಯು ಇರುತ್ತದೆ ಅಂತಾರೆ ಅಧ್ಯಯನಕಾರರು.
ಕ್ಯಾಂಪಸ್ನ ವಿವಿಧ ಪ್ರದೇಶದಲ್ಲಿನ ಕೀಟಾಣುಗಳು: ಕ್ಯಾಂಪಸ್ನ ಕೆಫೆಟೆರಿಯನ್ಗೆ ಹೋಲಿಕೆ ಮಾಡಿದಾಗ ಲಾಂಡ್ರಿ ರೂಮ್ಗಳು ಹೆಚ್ಚು ಕೀಟಾಣುಗಳಿಂದ ಕೂಡಿರುವುದಿಲ್ಲ. ಇಲ್ಲಿ 1,00,000 ಸಿಎಫ್ಯುಗಳಿದೆ. ಇನ್ನು ಮನೆಯಲ್ಲಿ ಅಡುಗೆ ಕೋಣೆಯ ಸಿಂಕ್ಗಳು ಅತ್ಯಂತ ಕೀಟಾಣು ಪ್ರದೇಶವಾಗಿದ್ದು, ಇಲ್ಲಿ ಶೇ 11,4ಮಿಲಿಯನ್ ಸಿಎಫ್ಯು ಇದೆ. ಕಾಲೇಜ್ ಲೈಬ್ರರಿ ಡೆಸ್ಕ್ಗಳಲ್ಲಿ 2.6 ರಷ್ಟು ಹೆಚ್ಚಿನ ಕೀಟಾಣು ಇದೆ.
ಸಂಶೋಧಕರು ಕಾಲೇಜು ವಿದ್ಯಾರ್ಥಿಗಳನ್ನು ಅವರ ಶುಚಿತ್ವದ ಅಭ್ಯಾಸಗಳ ಬಗ್ಗೆ ಸಮೀಕ್ಷೆ ನಡೆಸಿದ್ದರು. ಸುಮಾರು 15 ಪ್ರತಿಶತ ಕಾಲೇಜು ವಿದ್ಯಾರ್ಥಿಗಳು ತಿಂಗಳಿಗೆ ಒಮ್ಮೆ ಮಾತ್ರ ತಮ್ಮ ವಾಸಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ ಎಂದು ಕಂಡುಕೊಂಡರು. ಜನರು ಕೆಮ್ಮುವಾಗ ಯಾವುದೇ ವಸ್ತ್ರದ ಬಳಕೆ ಮಾಡದಿರುವುದನ್ನು ಅಧ್ಯಯನಕಾರರು ಗಮನಿಸಿದ್ದಾರೆ. ವಸ್ತ್ರ ಹಿಡಿದುಕೊಳ್ಳದೇ ಕೆಮ್ಮಿದಾಗ ಅಥವಾ ಸೀನಿದಾಗ ಹೆಚ್ಚು ಕೀಟಾಗಳು ಹರಡಿರುವುದು ಗೊತ್ತಾಗಿದೆ. ಅದರಲ್ಲೂ ಮಹಿಳಾ ವಿದ್ಯಾರ್ಥಿನಿಯರು, ಅಂದರೆ ಮಾತನಾಡಿಸಿದ ಸುಮಾರು ಐವರಲ್ಲಿ ನಾಲ್ವರು ಅವರು ಕ್ಯಾಂಪಸ್‌ನಲ್ಲಿ ನೋಡಿದ ಅತ್ಯಂತ ಅಸಹ್ಯ ನೈರ್ಮಲ್ಯ ಅಭ್ಯಾಸ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಶೌಚಾಲಯವನ್ನು ಬಳಸಿದ ನಂತರ ಕೈ ತೊಳೆಯದಿರುವುದು, ನಿಯಮಿತವಾಗಿ ಸ್ನಾನ ಮಾಡದಿರುವುದು ಅಥವಾ ಹಲ್ಲುಜ್ಜದಿರುವುದು ಮತ್ತು ಶೌಚಾಲಯವನ್ನು ಫ್ಲಶ್ ಮಾಡದಿರುವಂತಹ ಇತರ ಅಸಹ್ಯ ನೈರ್ಮಲ್ಯ ಅಭ್ಯಾಸಗಳನ್ನು ವಿದ್ಯಾರ್ಥಿಗಳಲ್ಲಿ ಕಂಡು ಬಂದಿದೆ.
ಕೆಮ್ಮಿದಾಗ ಅಥವಾ ಸೀನುವಾಗ ಮಹಿಳೆಯರು ಕರವಸ್ತ್ರವನ್ನು ಅಡ್ಡ ಹಿಡಿಯುವುದಿಲ್ಲ ಎಂದಿದ್ದಾರೆ. ಐವರಲ್ಲಿ ನಾಲ್ಕು ಮಂದಿ ಕ್ಯಾಂಪಸ್‌ನಲ್ಲಿ ಇರುವ ಅನೈರ್ಮಲ್ಯದ ಬಗ್ಗೆ ವಿವರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹಣ್ಣಲ್ಲ.., ಹಣ್ಣಿನ ಸಿಪ್ಪೆಯಲ್ಲಿದೆ ಸೌಂದರ್ಯದ ಗುಟ್ಟು! ಅದು ಹೇಗೆ ಅನ್ನೋದು ನಿಮ್ಮ ಪ್ರಶ್ನೆಯೇ?