ಹೈದರಾಬಾದ್ : ಕೊರೊನಾ ವೈರಸ್ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದವರಲ್ಲಿ ಕೆಲವರು ಈಗಾಗಲೇ ಮತ್ತೆ ಕಚೇರಿಗೆ ತೆರಳಿದ್ದಾರೆ. ಇನ್ನೂ ಕೆಲವರು ಇನ್ನೇನು ಕೆಲವೇ ಸಮಯದಲ್ಲಿ ಮತ್ತೆ ಕಚೇರಿಗೆ ತೆರಳುವ ಸಿದ್ಧತೆಯಲ್ಲಿದ್ದಾರೆ.
ಮನೆಯಿಂದಲೇ ಆರಾಮವಾಗಿ ಕೆಲಸ ಮಾಡುತ್ತಿದ್ದವರು ಪುನಃ ವೃತ್ತಿಪರ ಸೆಟಪ್‌ಗೆ ಪರಿವರ್ತನೆಗೊಳ್ಳುವುದು ಸವಾಲಾಗಿ ಪರಿಣಮಿಸಬಹುದು. ಮನೆಯಿಂದ ಕಾರ್ಯಕ್ಷೇತ್ರಕ್ಕೆ ತೆರಳುವಾಗ ನಿಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಇಲ್ಲಿದೆ:
ಸಿಪ್ಪರ್/ನೀರಿನ ಬಾಟಲಿ :
ನಿಮ್ಮ ನೀರಿನ ಬಾಟಲಿ ಅಥವಾ ಸಿಪ್ಪರ್‌ನ ಕೊಂಡೊಯ್ಯಲು ಮರೆಯಬೇಡಿ. ವಿಶೇಷವಾಗಿ ಸಮಯದಲ್ಲಿ ನಿಮ್ಮ ವೈಯಕ್ತಿಕ ಬಾಟಲಿ ಇದ್ದರೆ ಉತ್ತಮ. ಮನೆಯಿಂದಲೇ ಒಯ್ಯುವಾಗ ಯಾವುದೇ ವೈರಸ್ ಅಥವಾ ಸೋಂಕುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇದು ನಿಯಮಿತವಾಗಿ ಹೈಡ್ರೇಟ್ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಇದು ಯಾವಾಗಲೂ ಅವಶ್ಯಕವಾಗಿದೆ.
ಹೆಡ್‌ಫೋನ್‌ಗಳು :
![ಹೆಡ್‌ಫೋನ್](https://etvbharatimages.akamaized.net/etvbharat/prod-images/11120713_inarticlehead1616484220678-98_2303email_1616484232_513.jpg)
ಶಾಂತತೆ ಮತ್ತು ನಿಶ್ಚಲತೆಯು ನಮ್ಮ ಕೆಲಸದ ಪ್ರಮುಖ ಭಾಗವಾಗಿದೆ. ಹಾಡು ಕೇಳುವುದು ಅನೇಕರಿಗೆ ಶಾಂತತೆ ಒದಗಿಸುತ್ತದೆ. ಆದರೆ, ಕೆಲಸದ ಸ್ಥಳದಲ್ಲಿ ಸೂಕ್ತ ಹೆಡ್‌ಫೋನ್ ಬಳಸುವುದು ಉತ್ತಮ. ಯಾಕೆಂದರೆ, ನಿಮ್ಮ ಹೆಡ್ಫೋನ್ನಿಂದ ಶಬ್ದ ಹೊರಗೆ ಕೇಳಿಸಿದರೆ ನಿಮ್ಮ ಸಹೋದ್ಯೋಗಿಗಳಿಗೆ ಕಿರಿಕಿರಿ ಉಂಟಾಗಬಹುದು. ಹೀಗಾಗಿ, ಉತ್ತಮ ಗುಣಮಟ್ಟದ ಶಬ್ದ ಹೊರಗೆ ಸೂಸದ ಹೆಡ್‌ಫೋನ್‌ಗಳನ್ನು ಆರಿಸಿ. ಹೆಡ್‌ಫೋನ್ ಬದಲು ಇಯರ್ಫೋನ್ ಅಥವಾ ಇಯರ್ ಪಾಡ್ಗಳನ್ನು ಕೂಡ ಬಳಸಬಹುದು.
ಸ್ಯಾನಿಟೈಜರ್ : ಕಳೆದ ವರ್ಷದಲ್ಲಿ ನಾವು ಅನೇಕ ಬಾರಿ ಕೇಳಿದ ಪದ ಎಂದರೆ ಸ್ಯಾನಿಟೈಜೇಷನ್. ಸಾಂಕ್ರಾಮಿಕ ರೋಗದ ಭಯದಿಂದ ಜನ ತಮ್ಮ ಕೈಗಳ ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಿದರು.
ಆದರೆ, ಕೈಯನ್ನು ನೈರ್ಮಲ್ಯಗೊಳಿಸುವುದರ ಜೊತೆಗೆ ಕೈಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದರೆ ಮಾಯಿಶ್ಚರೈಸಿಂಗ್ ಸ್ಯಾನಿಟೈಜರ್ ಬಳಕೆ ಸೂಕ್ತ. ಹೀಗಾಗಿ, ಇಂತಹ ಸ್ಯಾನಿಟೈಜರ್ಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ. ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿರಿ.
ಜರ್ನಲ್‌ಗಳು : ವೃತ್ತಿಪರ ಕಾರ್ಯಗಳು ಮತ್ತು ವೈಯಕ್ತಿಕ ಜೀವನ ಬದ್ಧತೆಗಳ ನಡುವೆ ನಾವು ಸ್ವ-ಆರೈಕೆಗಾಗಿ ಸಮಯ ನೀಡುವುದಿಲ್ಲ. ಜರ್ನಲ್‌ಗಳು ಅಂತಹ ಒಂದು ಅವಶ್ಯಕತೆಯಾಗಿದೆ. ಇದು ನಮ್ಮ ಆಲೋಚನೆಗಳು ಮತ್ತು ಕಾಳಜಿಗಳ ಮೇಲೆ ಹಿಡಿತ ಸಾಧಿಸಲು ಮತ್ತು ವಿರಾಮದ ಸಮಯದಲ್ಲಿ ಸಹಾಯ ಮಾಡುತ್ತದೆ. ನಿಮಗೆ ಇಷ್ಟವಾಗುವಂತಹ ಜರ್ನಲ್‌ಗಳನ್ನು ಎತ್ತಿಕೊಳ್ಳುವ ಮೂಲಕ ಓದುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
ಆರೊಮ್ಯಾಟಿಕ್ ಟೀ :
![ಆರೊಮ್ಯಾಟಿಕ್ ಟೀ](https://etvbharatimages.akamaized.net/etvbharat/prod-images/11120713_inarticletea1616484220678-3_2303email_1616484232_443.jpg)
ಆರೊಮ್ಯಾಟಿಕ್ ಚಹಾಗಳು ತಮ್ಮದೇ ಆದ ಮೋಡಿ ಹೊಂದಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಚಹಾ ಪ್ರತಿದಿನವೂ ನಿಮ್ಮನ್ನು ಉಲ್ಲಾಸಭರಿತವಾಗಿರಿಸುವ ಸಾಮರ್ಥ್ಯ ಹೊಂದಿದೆ. ಆರೊಮ್ಯಾಟಿಕ್ ಟೀಯ ಒಂದು ಕಪ್‌ನಲ್ಲಿ ನಿಮ್ಮ ಕೆಲಸದ ಒತ್ತಡವನ್ನು ಕಡಿಮೆಗೊಳಿಸುವ ಶಕ್ತಿ ಇರುತ್ತದೆ.