ETV Bharat / sukhibhava

ಭಾರತದಲ್ಲಿ ಮೊದಲ ಕೃತಕ ಹೃದಯ ಕಸಿ ಯಶಸ್ವಿ; ಬದುಕುಳಿದ 2 ವರ್ಷದ ಪುಟಾಣಿ

Artificial heart gets transplant: ಕಾರ್ಡಿಯೋಮಿಯೋಪತಿ ಸ್ಥಿತಿಯಲ್ಲಿ ಹೃದಯದ ಸ್ನಾಯುಗಳು ದೇಹದ ಇತರೆ ಭಾಗಕ್ಕೆ ರಕ್ತ ಪಂಪ್​ ಮಾಡಲು ಸಾಧ್ಯವಾಗುವುದಿಲ್ಲ.

2 year old baby who became the first in India to survive a Berlin Heart

author img

By ETV Bharat Karnataka Team

Published : Nov 30, 2023, 11:41 AM IST

ನವದೆಹಲಿ: ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಪುಟ್ಟ ಕಂದಮ್ಮನಿಗೆ ಬರ್ಲಿನ್​ ಹೃದಯ (ಕೃತಕ ಹೃದಯ) ಕಸಿ ಚಿಕಿತ್ಸೆ ನೀಡುವಲ್ಲಿ ಭಾರತೀಯ ವೈದ್ಯರು ಯಶಸ್ವಿಯಾಗಿದ್ದಾರೆ. ಇದು ದೇಶದಲ್ಲಿ ನಡೆದ ಮೊದಲ ಯಶಸ್ವಿ ಕೃತಕ ಹೃದಯ ಕಸಿ ಚಿಕಿತ್ಸೆಯಾಗಿದೆ.

ಯುಎಇ ದೇಶದ ಮಗು ಕಾರ್ಡಿಯೋಮಿಯೋಪತಿಯಿಂದ ಹೃದಯ ವೈಫಲ್ಯದ ಕೊನೆಯ ಹಂತದಲ್ಲಿ ಹೋರಾಡುತ್ತಿತ್ತು. ಕಾರ್ಡಿಯೋಮಿಯೋಪತಿ ಸ್ಥಿತಿಯಲ್ಲಿ ಹೃದಯದ ಸ್ನಾಯುವು ದೇಹದ ಇತರೆ ಭಾಗಕ್ಕೆ ಹೃದಯದ ರಕ್ತ ಪಂಪ್​ ಮಾಡಲು ಸಾಧ್ಯವಾಗುವುದಿಲ್ಲ. ಇದು ಹೃದಯ ವೈಫಲ್ಯಕ್ಕೂ ಕಾರಣವಾಗುತ್ತದೆ.

ಮಾರ್ಚ್​ನಲ್ಲಿ ನವದೆಹಲಿಯ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಮಗುವಿನ ಹೃದಯ ಕಸಿಗಾಗಿ ರಾಷ್ಟ್ರೀಯ ಅಂಗಾಂಗ ಮತ್ತು ಟಿಶ್ಯೂ ಕಸಿ ಸಂಘಟನೆಯಲ್ಲಿ (ಎನ್​ಒಟಿಟಿಒ) ಕೂಡ ನೋಂದಣಿ ಮಾಡಿಸಲಾಗಿತ್ತು. ಕಸಿ ಶಸ್ತ್ರಚಿಕಿತ್ಸೆಗಾಗಿ ದಾನಿಗಳಿಂದ ಸೂಕ್ತ ಹೃದಯಕ್ಕಾಗಿ ವೈದ್ಯರು ಕಾದಿದ್ದರು. ಆದರೆ, ಈ ನಡುವೆ ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ಈ ನಡುವೆ ಮಗು ಇಂಟ್ರಕ್ಟಬಲ್​ ಕಾರ್ಡಿಯೋಜೆನಿಕ್​ ಆಘಾತಕ್ಕೂ ಒಳಗಾಯಿತು. ಇದರಿಂದ ಹೃದಯವು ರಕ್ತಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪಂಪ್​ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು.

ಮಗುವಿನ ಜೀವ ಉಳಿಸಲು ವೈದ್ಯರು ಬರ್ಲಿನ್​ ಹಾರ್ಟ್​ (ಕೃತಕ ಹೃದಯ) ಎಂಬ ವಿಶೇಷ ಸಾಧನವನ್ನು ಜುಲೈ 29ರಂದು ಕಸಿ ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಿದ್ದಾರೆ. ಇದಾದ ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿತು.

ಆಸ್ಪತ್ರೆಯ ಹಿರಿಯ ಕಾರ್ಡಿಯೋಥೊರಸಿಸ್​ ಮತ್ತು ಹೃದಯ ಹಾಗೂ ಶ್ವಾಸಕೋಶ ಕಸಿ ಸರ್ಜನ್​ ಮುಖೇಶ್​​ ಗೋಯಲ್​ ಮಾತನಾಡಿ, ದೇಶದಲ್ಲಿ ಇದೇ ಮೊದಲ ಬಾರಿ ಕೃತಕ ಹೃದಯದಿಂದ ಬದುಕುಳಿದ ಮೊದಲ ಮಗು ಇದಾಗಿದೆ. ಭಾರತದಲ್ಲಿ ಜೀವ ಉಳಿಸುವ ಸಾಧನವನ್ನು ಪಡೆದ ಎರಡನೇ ಮಗುವೂ ಹೌದು ಎಂದರು.

ಈ ಮೊದಲು ಗಂಡು ಮಗುವಿಗೆ ಈ ರೀತಿ ಕೃತಕ ಹೃದಯ ಅಳವಡಿಸಲಾಗಿತ್ತು. ಆದರೆ, 15 ದಿನಗಳ ಬಳಿಕ ಮಗು ಅಸುನೀಗಿತ್ತು. ರೋಗಿಗಳ ಸೂಕ್ಷ್ಮ ಆರೋಗ್ಯ ಪರಿಸ್ಥಿತಿ ಮತ್ತು ಸಂಕೀರ್ಣ ಪ್ರಕ್ರಿಯೆ ಜೊತೆಗೆ ಬರ್ಲಿನ್​ ಅಳವಡಿಕೆ ಬಳಿಕ ಎದುರಾಗುವ ಹೆಚ್ಚಿನ ಚಿಕಿತ್ಸೆಯು ಮಗುವಿನ ಬದುಕುಳಿಯುವಿಕೆ ಮೇಲೆ ಪರಿಣಾಮ ಬೀರುವ ಅಂಶವಾಗಿದೆ ಎಂದಿದ್ದಾರೆ.

ಈ ಮಗು ಉತ್ತಮವಾಗಿ ಚೇತರಿಕೆ ಕಾಣುತ್ತಿದೆ. ಮುಂಬೈನ ಬೈ ಜೆರಬೈ ವಾಡಿಯಾ ಮಕ್ಕಳ ಆಸ್ಪತ್ರೆಯಿಂದ ಶೀಘ್ರದಲ್ಲಿ ಅಂಗಾಂಗ ಪಡೆಯಲಿದೆ. ಇದೀಗ ಹೃದಯವನ್ನು ಯಶಸ್ವಿಯಾಗಿ ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಜನ್​ ಆಗಿ ಕಾರ್ಡಿಯೊಮಿಯೊಪತಿ ಮತ್ತು ಕೊನೆಯ ಹಂತದ ಹೃದಯ ವೈಫಲ್ಯದ ಈ ಪ್ರಕರಣವನ್ನು ಎದುರಿಸುವುದು ಭಾವನಾತ್ಮಕವಾಗಿ ನನಗೆ ಬಹುದೊಡ್ಡ ವಿಚಾರವಾಗಿತ್ತು. ಮಗು ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಕಾರ್ಡಿಯೋಜೆನಿಕ್ ಆಘಾತ ಮತ್ತು ಸೆಪ್ಟಿಸೆಮಿಯಾದ ವಿರುದ್ಧ ಹೋರಾಡಿತು ಎಂದು ಗೋಯೆಲ್​ ತಿಳಿಸಿದ್ದಾರೆ. (ಐಎನ್​ಎಸ್​)

ಇದನ್ನೂ ಓದಿ: ಪೀಕ್​ ಅವರ್​ ಟ್ರಾಫಿಕ್​ನಿಂದ ಬಿಪಿ ಹೆಚ್ಚಳ; ವಾಯು ಮಾಲಿನ್ಯದಿಂದ ಹಲವು ಆರೋಗ್ಯ ಸಮಸ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.