ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 1,452 ಪ್ರಕರಣಗಳ ಪೈಕಿ 1,051 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಹುಣಸಗಿ ತಾಲೂಕಿನ ನಾರಾಯಣಪುರ ಯುಕೆಪಿ ಕ್ಯಾಂಪ್ನ 29 ವರ್ಷದ ಮಹಿಳೆ (ಪಿ-42229) ಹಾಗೂ ಯಾದಗಿರಿಯ ಬಸವನಗರದ 60 ವರ್ಷದ ಮಹಿಳೆ (ಪಿ-42313) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತ ಮಹಿಳೆಯರ ಸಂಪರ್ಕದ ಹಿನ್ನೆಲೆ ಪತ್ತೆಹಚ್ಚಲಾಗುತ್ತಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ ಜನರಲ್ಲಿ ಆತಂಕ ಮುಂದುವರೆದಿದೆ.