ಸುರಪುರ: ನಗರದಲ್ಲಿ 3 ದಿನಗಳ ಹಿಂದೆ ಜನಿಸಿದ ಗಂಡು ಮಗುವನ್ನು ಅನಾಥವಾಗಿ ಸಾರ್ವಜನಿಕ ಶೌಚಾಲಯ ಬಳಿ ಬಿಟ್ಟು ಹೋಗಿದ್ದು, ಸಾರ್ವಜನಿಕರೊಬ್ಬರು ಕಾಪಾಡಿದ್ದಾರೆ. ಸದ್ಯ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಶಕ್ಕೆ ಪಡೆದಿದೆ.
ವಿಷಯವನ್ನು ಪೊಲೀಸ್ ಅಧಿಕಾರಿಗಳ ಮೂಲಕ ತಿಳಿದ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ನವಜಾತ ಶಿಶುವನ್ನು ವಶಕ್ಕೆ ಪಡೆದು ಯಾದಗಿರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ವಿಷಯ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಮಾನುಸಾರ ಮಗುವನ್ನು ಕಲಬುರಗಿಯ ಅಮೂಲ್ಯ ಶಿಶು ಗೃಹಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ತಿಳಿಸಿದ್ದಾರೆ. ಈ ಅನಾಥ ಮಗುವನ್ನು ವ್ಯಕ್ತಿವೋರ್ವರು ಸಾಕಲು ಮುಂದೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಶೋಕ ರಾಜನ್, ದಶರಥ ರಾಜೇಂದ್ರ ಡೊಳ್ಳೆ, ಸಿಪಿಐ ಎಸ್.ಎಮ್. ಪಾಟೀಲ್, ಮಹಿಳಾ ರಕ್ಷಕಿ ಅನೀತಾ ಎಸ್, ಅಂಗನವಾಡಿ ಮೇಲ್ವಿಚಾರಕಿ ಪದ್ಮಾ. ಡಿ. ನಾಯಕ ಉಪಸ್ಥಿತರಿದ್ದರು.