ಸುರಪುರ : ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಸುಮಾರು 9 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ ಕಟಾವಿಗೆ ಬಂದಿದೆ. ಗ್ರಾಹಕರಿಲ್ಲದೆ 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಹಣ್ಣು ಮಣ್ಣು ಪಾಲಾಗುತ್ತಿದೆ.
![loss-of-papaya-grower-in-yadagiri](https://etvbharatimages.akamaized.net/etvbharat/prod-images/6698205_520_6698205_1586264163206.png)
ರಾಜ್ಯಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿದೆ. ಲಾಕ್‌ಡೌನ್ ಹಿನ್ನೆಲೆ ಸಾರ್ವಜನಿಕರು ಮನೆ ಸೇರಿದ್ದರಿಂದ ವ್ಯಾಪಾರ, ವಹಿವಾಟು ನೆಲಕಚ್ಚಿದೆ. ಕೆಲವೆಡೆ ಹಣ್ಣು ಕೀಳಲು ಕಾರ್ಮಿಕರೂ ಇಲ್ಲ, ಮತ್ತೊಂದೆಡೆ ಕೊಳ್ಳಲು ಗ್ರಾಹಕರಿಲ್ಲದೇ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಸರ್ಕಾರ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಲಾಕ್ಡೌನ್ನಿಂದಾಗಿ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರವೇ ರೈತರ ಫಸಲನ್ನು ಹಾಪ್‌ಕಾಮ್ಸ್ ಮೂಲಕ ಖರೀದಿಸಬೇಕು. ಇದರಿಂದ ರೈತರಿಗೆ ನೆರವಾಗುತ್ತದೆ.