ಯಾದಗಿರಿ: ಕಳೆದ 3 ದಿನಗಳ ಹಿಂದೆ ನಗರದ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ಏಕಕಾಲಕ್ಕೆ 3 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕುಟುಂಬ ಈಗ ಸಂಕಷ್ಟದಲ್ಲಿದೆ. ವಿಷಯ ತಿಳಿದ ಬಾಲಿವುಡ್ ಸ್ಟಾರ್ ಸೋನು ಸೂದ್ ನೆರವಿನ ಭರವಸೆ ನೀಡಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಾಮಸಮುದ್ರ ಗ್ರಾಮದ ನಾಗರಾಜ್ ಬೈಲ್ ಪತ್ತಾರ್ ಪತ್ನಿ ಪದ್ಮಾಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಸಿಜೆರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ್ದರು. ತಾಯಿ ಮಕ್ಕಳು ಆರೋಗ್ಯದಿಂದ ಇದ್ದಾರೆ. ನಾಗರಾಜ ಕುಟುಂಬ ಎದುರಿಸುತ್ತಿರುವ ಸಮಸ್ಯೆಯನ್ನು ಸ್ಥಳೀಯ ಪತ್ರಕರ್ತರೊಬ್ಬರು ನಟ ಸೋನು ಸೂದ್ ಗಮನಕ್ಕೆ ತಂದಿದ್ದಾರೆ.
![Bollywood actor sonu sood help, Bollywood actor sonu sood help to Yadagiri family, Bollywood actor sonu sood, Bollywood actor sonu sood news, Bollywood actor sonu sood latest news, ಸೋನು ಸೂದ್ ಸಹಾಯ ಹಸ್ತ, ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ, ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ ಸುದ್ದಿ, ಬಾಲಿವುಡ್ ನಟ ಸೋನು ಸೂದ್, ಬಾಲಿವುಡ್ ನಟ ಸೋನು ಸೂದ್ ಸುದ್ದಿ,](https://etvbharatimages.akamaized.net/etvbharat/prod-images/kn-ydr-01-25-sonu-sood-av-7208689_25082020161705_2508f_1598352425_1040.jpg)
ಸೋನು ಸೂದ್ ತಂಡದ ಮುಖ್ಯಸ್ಥ ಗೋವಿಂದ ಅಗರ್ವಾಲ್ ಅವರು ಬಾಣಂತಿ ಪದ್ಮಾ ಅವರ ಪತಿ ನಾಗರಾಜನ ಜೊತೆ 3 ಬಾರಿ ಮಾತನಾಡಿ, ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ. ಮೊದಲು ನಾವು ನಿಮಗೆ 2 ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡುವ ಜೊತೆಗೆ ಅವರ ಮಕ್ಕಳ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.
ಓದಿಗಾಗಿ: ಯಾದಗಿರಿಯಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!
ಅದಲ್ಲದೆ ಈಗಾಗಲೇ ನಾಗರಾಜ ಕುಟುಂಬಕ್ಕೆ ಎರಡು ತಿಂಗಳಿಗಾಗುವಷ್ಟು ಧವಸಧಾನ್ಯಗಳನ್ನ ಗೋವಿಂದ್ ಅಗರವಾಲ್ ಕೊರಿಯರ್ ಮಾಡಿರುವುದಾಗಿ ನಾಗರಾಜ್ ಮೊಬೈಲ್ಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಇದರಿಂದ ಬಡ ಕುಟುಂಬದಲ್ಲಿ ಕೊಂಚ ನೆಮ್ಮದಿ ಮೂಡಿದೆ.
![Bollywood actor sonu sood help, Bollywood actor sonu sood help to Yadagiri family, Bollywood actor sonu sood, Bollywood actor sonu sood news, Bollywood actor sonu sood latest news, ಸೋನು ಸೂದ್ ಸಹಾಯ ಹಸ್ತ, ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ, ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ ಸುದ್ದಿ, ಬಾಲಿವುಡ್ ನಟ ಸೋನು ಸೂದ್, ಬಾಲಿವುಡ್ ನಟ ಸೋನು ಸೂದ್ ಸುದ್ದಿ,](https://etvbharatimages.akamaized.net/etvbharat/prod-images/kn-ydr-01-25-sonu-sood-av-7208689_25082020161705_2508f_1598352425_839.jpg)
ಈಗಾಗಲೇ ನಟ ಸೋನು ಸೂದ್ ಮುಂಬೈ ನಗರದಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಹರಡಿದ ಸಂದರ್ಭದಲ್ಲಿ ನಗರದಲ್ಲಿ ಕೆಲಸ ಮಾಡುತ್ತಿರುವ ದೇಶದ ವಿವಿದ ರಾಜ್ಯಗಳ ವಲಸೆ ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ಅವರವರ ಗ್ರಾಮಗಳಿಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಈಗ ಬಡ ನಾಗರಾಜ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ ನೀಡುವ ಮೂಲಕ ಮತ್ತೊಮ್ಮೆ ಉದಾರತೆ ಮೆರೆದಿದ್ದಾರೆ.