ETV Bharat / state

ರೈತರ ಹೋರಾಟ ದಾರಿತಪ್ಪಿದಂತೆ ಕಾಣುತ್ತಿದೆ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ನಮ್ಮ ಸಂಸ್ಕ್ರತಿಯ ಪುನರುತ್ಥಾನಕ್ಕೆ ಎಲ್ಲ ಭಾರತೀಯರು ಶ್ರಮಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಹಿಂದೂಗಳ ಪ್ರತೀಕವಾದ ಮಂದಿರ ನಿರ್ಮಾಣಕ್ಕೆ ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದಾರೆ..

Vishva Prasanna Theertha Swamiji statement about farmers protest
ರೈತರ ಹೋರಾಟ ದಾರಿತಪ್ಪಿದಂತೆ ಕಾಣುತ್ತಿದೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
author img

By

Published : Feb 6, 2021, 7:40 PM IST

ವಿಜಯಪುರ : ಕೃಷಿ ಮಸೂದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು, ವಿವಿಧ ಪ್ರಗತಿ ಪರ ಹೋರಾಟಗಾರರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ದಾರಿತಪ್ಪಿದಂತೆ ಕಾಣುತ್ತಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕೆಂಪುಕೋಟೆ ಮೇಲಿದ್ದ ದೇಶದ ಧ್ವಜವನ್ನು ಕಿತ್ತು ಹಾಕುವುದು, ಧ್ವಜಕ್ಕೆ ಅವಮಾನ ಮಾಡುವುದು, ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಮಾತನಾಡುವುದು, ಗಲಾಟೆ ಮಾಡುವುದನ್ನು ನೋಡಿದರೆ ರೈತರ ಹೋರಾಟ ಏಕೋ ದಿಕ್ಕು ತಪ್ಪಿದಂತಿದೆ. ಈ ರೀತಿ ಹೋರಾಟ ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಮ ಮಂದಿರಕ್ಕೆ ದೇಣಿಗೆ: ಹಿಂದೂಗಳ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಜನ ಅಪಾರ ದೇಣಿಗೆ ನೀಡುತ್ತಿದ್ದಾರೆ. ನಮ್ಮ ಸಂಸ್ಕ್ರತಿಯ ಪುನರುತ್ಥಾನಕ್ಕೆ ಎಲ್ಲ ಭಾರತೀಯರು ಶ್ರಮಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಹಿಂದೂಗಳ ಪ್ರತೀಕವಾದ ಮಂದಿರ ನಿರ್ಮಾಣಕ್ಕೆ ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.