ETV Bharat / state

ಬೇನಾಮಿ ಹೆಸರಲ್ಲಿ ಮನೆ ಪಡೆದ ವಂಚಕರು: ಕ್ರಮಕ್ಕೆ ಮಂದಾದ ವಿಜಯಪುರ ಮಹಾನಗರ ಪಾಲಿಕೆ - ಮನೆ ರಹಿತರಿಗೆ ಮನೆ ನೀಡಲು ಮುಂದಾದ ಪಾಲಿಕೆ

ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳು, ಎನ್​ಜಿಓ ಹಾಗೂ ಸಿಬ್ಬಂದಿ ಮೂಲಕ ಜಂಟಿ ಸಮೀಕ್ಷೆ ನಡೆಸಿ 1,450 ಮನೆಗಳ ಮಾಲೀಕರ ಬಳಿ ಇರುವ ಖರೀದಿ ಪತ್ರ ರದ್ದುಗೊಳಿಸಿ, ಅದರ ಬದಲು ಸದ್ಯ ವಾಸಿಸುವ ಮನೆ ಇಲ್ಲದ ಬಡವರಿಗೆ ಮನೆ ನೀಡಲು ಪಾಲಿಕೆ ವೆಬ್​ಸೈಟ್ ಮೂಲಕ ಅರ್ಜಿ ಆಹ್ವಾನಿಸಿದೆ.

Vijaypura
ಮನೆ ರಹಿತರಿಗೆ ಮನೆ ನೀಡಲು ಮುಂದಾದ ಪಾಲಿಕೆ..
author img

By

Published : Oct 1, 2020, 3:08 PM IST

ವಿಜಯಪುರ: ಐತಿಹಾಸಿಕ ಪ್ರವಾಸಿ ತಾಣ ವಿಜಯಪುರ ನಗರದಲ್ಲಿ ಸರ್ಕಾರದ ವಿವಿಧ ಯೋಜನೆಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಾಣ ಮಾಡಲಾಗಿದೆ. ಆದರೆ ಆ ಮನೆಗಳ ಪರಿಸ್ಥಿತಿ ಹೇಳತೀರದ್ದಾಗಿದೆ. ಮನೆ ಮಂಜೂರು ಆಗಿದ್ದು ಒಬ್ಬರಿಗೆ ಆದರೆ? ಅಲ್ಲಿ ವಾಸಿಸುವರು ಇನ್ಯಾರೋ ಆಗಿದ್ದಾರೆ.

ವಸತಿ ರಹಿತ ಕುಟುಂಬಗಳು ಮನೆ ನೀಡಿ ಎಂದು ಅರ್ಜಿ ಹಿಡಿದುಕೊಂಡು ಪಾಲಿಕೆ ಕಚೇರಿ ಸುತ್ತಾಡುವುದು ಮಾತ್ರ ತಪ್ಪಿಲ್ಲ. ಸದ್ಯ ಬೇನಾಮಿ ಹೆಸರಿನಲ್ಲಿ ಮನೆ ಪಡೆದುಕೊಂಡು ಸುಮ್ಮನೇ ಕುಳಿತಿರುವ ಮನೆ ಮಾಲೀಕರಿಗೆ ಪಾಲಿಕೆ ಶಾಕ್ ನೀಡಲು ಮುಂದಾಗಿದೆ.

ಬೇನಾಮಿ ಹೆಸರಲ್ಲಿ ಮನೆ ಪಡೆದ ವಂಚಕರಿಕೆ ಶಾಕ್ ನೀಡಲು ಮಂದಾದ ಮಹಾನಗರ ಪಾಲಿಕೆ

ಉತ್ತರ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ವಿಜಯಪುರ ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರವಾಸಿಗರ ಸ್ವರ್ಗ, ದ್ರಾಕ್ಷಿ, ನಿಂಬೆ ಕಣಜ ಎಂದು ಗುರುತಿಸಲ್ಪಡುತ್ತದೆ. ಎಲ್ಲ ಜಿಲ್ಲೆಯಲ್ಲಿರುವಂತೆ ಇಲ್ಲಿಯೂ ಕೂಡ ಲಕ್ಷಾಂತರ ಜನ ಸೂರಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ನಗರದಲ್ಲಿ ಸದ್ಯ 3.50 ಲಕ್ಷ ಜನಸಂಖ್ಯೆಯಿದೆ. 35 ವಾರ್ಡ್​ಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಟ್ಟು 1,722 ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ.

ನಗರದ ಹೊರವಲಯದ ಬುರಣಾಪುರದ ಬಸವನಗರ ಹಾಗೂ ಗಾಂಧಿನಗರದಲ್ಲಿ ಮಹಾನಗರ ಪಾಲಿಕೆ ಆಶ್ರಯ ಮನೆ ನಿರ್ಮಾಣ ಮಾಡಿ ಮನೆ ರಹಿತರಿಗೆ ಮನೆ ಹಂಚಿಕೆ ಮಾಡಿದೆ. ಅದರಲ್ಲಿ ಬಸವ ನಗರದಲ್ಲಿ ಮನೆ ನಿರ್ಮಿಸಿ 10 ವರ್ಷ ಕಳೆದಿದೆ. ಆದರೆ ಮನೆ ಖರೀದಿಸಿದವರು ಮಾತ್ರ ವಾಸಿಸಲು ಬಂದಿಲ್ಲ. ಪಾಳುಬಿದ್ದ ಮನೆಗಳನ್ನು ಅಷ್ಟು ಇಷ್ಟು ರಿಪೇರಿ ಮಾಡಿಸಿ ಮನೆ ಇಲ್ಲದವರು ಬಂದು ವಾಸಿಸುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಈ ಮನೆಯಲ್ಲಿ ವಾಸಿಸಲು ಭಯ ಪಡುವ ಬಡವರು, ಅದೇ ಮನೆಯನ್ನು ಸಾಲ ಮಾಡಿಯಾದರೂ ರಿಪೇರಿ ಮಾಡಿ ವಾಸಿಸಬೇಕು ಎನ್ನುವ ಬಯಕೆ ಹೊಂದಿದ್ದಾರೆ. ಆದ್ರೆ ಇದಕ್ಕೆ ಮೂಲ ಮನೆ ಮಾಲೀಕರ ಭಯ ಕಾಡುತ್ತಿದೆ. ಬಂದು ಮನೆ ಖಾಲಿ ಮಾಡಿ ಎಂದು ಹೇಳಿದರೆ ಎಲ್ಲಿ ಹೋಗುವುದು ಎಂಬ ಚಿಂತೆ ಕಾಡುತ್ತಿದೆ. ಸದ್ಯ ವಾಸಿಸುವ ಮನೆಯ ಹಕ್ಕುಪತ್ರ ನೀಡಿದರೆ ಅದನ್ನು ರಿಪೇರಿ ಮಾಡಿಸಿ ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುತ್ತಾರೆ ನೊಂದವರು.

Vijaypura
ಮನೆ ರಹಿತರಿಗೆ ಮನೆ ನೀಡಲು ಮುಂದಾದ ಪಾಲಿಕೆ..

ವಿಜಯಪುರ ನಗರದಲ್ಲಿ ನಿರ್ಮಾಣವಾಗಿರುವ 1,722 ಮನೆಗಳಲ್ಲಿ ಮೂಲ ಮನೆ ನಿವಾಸಿಗಳಲ್ಲಿ ಕೇವಲ 286 ಕುಟುಂಬಗಳು ವಾಸಿಸುತ್ತಿವೆ. ಉಳಿದ ಮನೆಗಳಲ್ಲಿ ಬಹುತೇಕ ಮನೆಯಲ್ಲಿ ಮನೆ ರಹಿತರು ವಾಸವಿದ್ದಾರೆ. ರಾಮನಗರದಲ್ಲಿ ನಿರ್ಮಿಸಿರುವ ಮನೆಗಳು ಬಹುತೇಕ ಖಾಲಿ ಇವೆ. ಮನೆಯ ಮೂಲ ಮಾಲೀಕರು ಮನೆಯ ಬಾಗಿಲಿಗೆ ಚೀಟಿ ಅಂಟಿಸಿ, ಇಲ್ಲಿ ವಾಸವಿದ್ದರೆ ಅಂಥವರ ವಿರುದ್ದ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದೆನ್ನೆಲ್ಲ ಗಮನಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಎನ್​ಜಿಓ ಹಾಗೂ ಸಿಬ್ಬಂದಿ ಮೂಲಕ ಜಂಟಿ ಸಮೀಕ್ಷೆ ನಡೆಸಿ 1,450 ಮನೆಗಳ ಮಾಲೀಕರ ಬಳಿ ಇರುವ ಖರೀದಿ ಪತ್ರ ರದ್ದುಗೊಳಿಸಿ, ಅದರ ಬದಲು ಸದ್ಯ ವಾಸಿಸುವ ಮನೆ ಇಲ್ಲದ ಬಡವರಿಗೆ ಪಾಲಿಕೆ ವೆಬ್​ಸೈಟ್ ಮೂಲಕ ಅರ್ಜಿ ಆಹ್ವಾನಿಸಿದೆ. ಮನೆಯಿಲ್ಲದವರಿಗೆ ಮನೆ ನೀಡಿ ಅವರಿಗೆ ಹಕ್ಕುಪತ್ರ ವಿತರಿಸುವ ಯೋಜನೆ ಹಾಕಿಕೊಂಡಿದೆ.

ಇದರ ಜೊತೆ ನಗರದಲ್ಲಿ ನಿರಾಶ್ರಿತ ಬಡವರಿಗೆ ರಾಜೀವಗಾಂಧಿ ಹೌಸಿಂಗ್ ಕಾರ್ಪೊರೇಷನ್​ನಿಂದ ನಿವೇಶನ ನೀಡಲು ಅರ್ಜಿ ಆಹ್ವಾನಿಸಿದೆ. ಸುಮಾರು 10 ಸಾವಿರ ಜನರು ಅರ್ಜಿ ಹಾಕಿದ್ದಾರೆ. ಅದನ್ನು ಪರಿಷ್ಕರಿಸಿ 6 ಸಾವಿರ ಅರ್ಜಿಗಳಿಗೆ ಮಾನ್ಯತೆ ನೀಡಿದೆ. ಇವರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ನಗರದ ಹೊರವಲಯದ ಆಲ್ ಅಮೀನ್ ಕಾಲೇಜ್ ಹಿಂಭಾಗದ ಪಾಲಿಕೆಯ 31ಎಕರೆ ಪ್ತದೇಶದಲ್ಲಿ‌ 3,750 ಮನೆ ನಿರ್ಮಾಣ ಕಾರ್ಯಕ್ಕೆ ಅನುಮೊದನೆ ದೊರೆತಿದೆ. ಅದರಲ್ಲಿ 1493 ಮನೆ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಇನ್ನೇನು ಮನೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಭಿಕ್ಷುಕರಿಗೆ, ಬೀದಿ ಬದಿ ಮಲಗುವ ನಿರಾಶ್ರಿತರಿಗೆ ಶೆಲ್ಟರ್ ಮನೆ ನಿರ್ಮಾಣಕ್ಕೂ ಮುಂದಾಗಿದೆ. ಸದ್ಯ ಮಹಿಳೆಯರಿಗೆ ಮಾತ್ರ ಶೆಲ್ಟರ್ ಮನೆ ನಿರ್ಮಿಸಲಾಗಿದೆ. ಅಲ್ಲದೇ ಪುರುಷರಿಗಾಗಿ 40 ಲಕ್ಷ ರೂ.ವೆಚ್ಚದಲ್ಲಿ ಶೆಲ್ಟರ್ ಮನೆ ನಿರ್ಮಾಣಕ್ಕೆ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.