ETV Bharat / state

ಗುಮ್ಮಟ ನಗರಿಯಲ್ಲಿ ವೃದ್ಧೆ ಮೇಲೆ ಅತ್ಯಾಚಾರ: ಆಟೋ ಚಾಲಕರಿಬ್ಬರ ಬಂಧನ - ಮಹಿಳಾ ಪೊಲೀಸ್​ ಠಾಣಾ ಪೊಲೀಸರು

ಕುಡಿದ ಅಮಲಿನಲ್ಲಿ ವೃದ್ಧೆ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರು ಆಟೋ ಚಾಲಕರನ್ನು ಮಹಿಳಾ ಪೊಲೀಸ್​ ಠಾಣಾ ಪೊಲೀಸರು ಬಂಧಿಸಿದ್ದಾರೆ.

Two arrested accused
ಇಬ್ಬರು ಬಂಧಿತ ಆರೋಪಿಗಳು
author img

By

Published : Mar 4, 2023, 4:17 PM IST

ವಿಜಯಪುರ: ಗುಮ್ಮಟ ನಗರಿಯಲ್ಲಿ ಕುಡುಕ ಕಾಮುಕರಿಬ್ಬರು ವೃದ್ಧೆ ಮೇಲೆ ಅತ್ಯಾಚಾರ ನಡೆಸಿದ್ದು, ಕಾಮುಕರ ಅಟ್ಟಹಾಸಕ್ಕೆ ವೃದ್ಧೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ರಾತ್ರಿ ಆಟೋ ಹತ್ತಿದ 60ರ ಒಬ್ಬಂಟಿ ವೃದ್ಧೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ನಡೆಸಿದ್ದಾರೆ. ಮನೆಗೆ ಹೊಗಬೇಕು ಎಂದು ವಿಜಯಪುರ ನಗರದ ವಾಟರ್ ಟ್ಯಾಂಕ್ ಬಳಿ ನಿಂತಿದ್ದ ಮಹಿಳೆಯನ್ನು ಆಟೋವೊಂದರಲ್ಲಿ ಅಲ್ಲಿಗೆ ಬಂದ ಇಬ್ಬರು ಆಟೋ ಚಾಲಕರಿಂದ ಈ ಕೃತ್ಯ ನಡೆದಿದೆ.

ಫೆಬ್ರವರಿ 23ರ ರಾತ್ರಿ ಸಮಾರು 9.30ರ ವೇಳೆಗೆ ಮನೆಗೆ ಹೋಗಲೆಂದು ವೃದ್ಧೆ ವಿಜಯಪುರ ನಗರದ ವಾಟರ್​ ಟ್ಯಾಂಕ್​ ಬಳಿ ನಿಂತಿದ್ದರು. ಆ ಹೊತ್ತಿಗೆ ಅಲ್ಲಿಗೆ ಆಟೋದಲ್ಲಿ ಬಂದ ಇಬ್ಬರು ಚಾಲಕರು ಮನೆಗೆ ಕರೆದುಕೊಂಡು ಹೋಗುವುದಾಗಿ ವೃದ್ಧೆಯನ್ನು ಆಟೋ ಹತ್ತಿಸಿಕೊಂಡಿದ್ದಾರೆ. ಅಲ್ಲಿಂದ ಮನೆಗೆ ಕರೆದುಕೊಂಡು ಹೋಗದೇ ಇಬ್ಬರು ಆಟೋ ಚಾಲಕ ಯುವಕರು ವೃದ್ಧೆಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅತ್ಯಾಚಾರ ನಡೆಸಿರುವುದು ಬಯಲಾಗಿದೆ. ವಿಜಯಪುರ ನಗರದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಹಾಗೂ ಬಸವ ನಗರ ನಿವಾಸಿ ರವಿ ಎಂಬುವರು ಈ ಕೃತ್ಯ ಎಸಗಿದ್ದಾರೆ.

ಇಬ್ಬರು ಆರೋಪಿಗಳು ರಾತ್ರಿ 10ರಿಂದ 11ರ ವರೆಗೆ ಅತ್ಯಾಚಾರ ಎಸಗಿ ವೃದ್ಧೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ವೃದ್ಧೆ ನರಳಾಡುತ್ತಿದ್ದದ್ದನ್ನು ಕಂಡ ಸಾರ್ವಜನಿಕರು 112 ಕ್ಕೆ ಕರೆ ಮಾಡಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ವೃದ್ಧೆಯನ್ನು ರಕ್ಷಿಸಿ, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಮಹಿಳಾ ಪೊಲೀಸ್​ ಠಾಣೆಯ ಪೊಲೀಸರು ತಕ್ಷಣವೇ ತನಿಖೆ ನಡೆಸಿ, ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವೃದ್ಧೆಯ ಮಹಿತಿ ಹಾಗೂ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ತನಿಖೆ ಕೈಗೊಂಡ ಮಹಿಳಾ ಠಾಣೆ ಪೊಲೀಸರು ಇಬ್ಬರು ಆರೋಪಿಗಳಾದ ಸದ್ದಾಂ ಶೇಖ್ ಹಾಗೂ ರವಿಯನ್ನು ಬಂಧಿಸಿದ್ದಾರೆ.

ದೆಹಲಿಯಲ್ಲಿ ಉಬರ್​ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ: ಈ ರೀತಿ ರಾತ್ರಿ ಹೊತ್ತು ಆಟೋ, ಕ್ಯಾಬ್​ ಚಾಲಕರಿಂದ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ನಿನ್ನೆಯಷ್ಟೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಬರ್​ ಆಟೋ ಚಾಲಕ ಮಹಿಳಾ ಪತ್ರಕರ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ತನ್ನ ಮನೆಯಿಂದ ಸ್ನೇಹಿತನನ್ನು ಭೇಟಿ ಮಾಡಲು ಹೋಗಲು ಉಬರ್​ ಆಟೋ ಬುಕ್​ ಮಾಡಿದ್ದ ಮಹಿಳಾ ಪತ್ರಕರ್ತೆ ಮೇಲೆ ಆಟೋ ಡ್ರೈವರ್​ ಮಾರ್ಗಮಧ್ಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಇದರ ವಿರುದ್ಧ ದೆಹಲಿ ಮಹಿಳಾ ಆಯೋಗಕ್ಕೆ ಪತ್ರಕರ್ತೆ ದೂರು ನೀಡಿದ್ದು, ಆಯೋಗ ನಗರ ಪೊಲೀಸ್​ ಮತ್ತು ಬ್ಯಾಬ್​ ಸಂಸ್ಥೆಗೆ ನೋಟಿಸ್​ ಕೂಡ ನೀಡಿದೆ. ತನಗಾದ ಸಮಸ್ಯೆಯ ಕುರಿತು ಸಂತ್ರಸ್ತೆ ಪತ್ರಕರ್ತೆ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಉಬರ್ ಚಾಲಕನಿಂದ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ; ಪೊಲೀಸರಿಗೆ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.