ETV Bharat / state

ಪೊಲೀಸ್ ಹುತಾತ್ಮ ದಿನಾಚರಣೆ: ಕರ್ತವ್ಯದ ವೇಳೆ ಮಡಿದ ಆರಕ್ಷಕರಿಗೆ ಗೌರವ ವಂದನೆ - ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ

ವಿಜಯಪುರ ಪೊಲೀಸ್ ಮೈದಾನದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ‌ರಿಗೆ ನಮನ ಸಲ್ಲಿಸಲಾಯ್ತು. ಇದೇ ವೇಳೆ ಕೊರೊನಾ ವಿರುದ್ಧ ಹೋರಾಡಿ ಮೃತರಾದ ಪೊಲೀಸರ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​​ ಕುಮಾರ್​ ಹೇಳಿದರು.

police commemoration day celebration in vijaypur
ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಪೊಲೀಸರಿಗೆ ಗೌರವ ವಂದನೆ
author img

By

Published : Oct 21, 2020, 2:37 PM IST

ವಿಜಯಪುರ: ಕೊರೊನಾ ಆರಂಭದ ದಿನಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಸೇವೆ ಅಮೂಲ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​​​ ಹೇಳಿದರು‌.

ಪೊಲೀಸ್ ಹುತಾತ್ಮ ದಿನಾಚರಣೆ
ನಗರದ ಪೊಲೀಸ್ ಮೈದಾನದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ‌ರಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಭದ್ರತೆಯಲ್ಲಿ ಆರಕ್ಷಕರ ಪಾತ್ರ ಮಹತ್ವದ್ದಾಗಿದೆ. ಹಗಲಿರುಳು ತಮ್ಮ ಕುಟುಂಬದ ಕಷ್ಟ ನಷ್ಟ ಬದಿಗಿಟ್ಟು ಕೆಲಸ ಮಾಡುತ್ತಿರುವ ಪೊಲೀಸರು, ದೇಶ ರಕ್ಷಣೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು. ಅನೇಕ ಮಂದಿ ಪೊಲೀಸರು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಾ ಪ್ರಾಣ ಅರ್ಪಿಸಿದ್ದಾರೆ. ಅವರ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ಕರ್ತವ್ಯದ ವೇಳೆ ಮಡಿದ ಆರಕ್ಷಕರ ಸ್ಮಾರಕಕ್ಕೆ ಸುನೀಲ್​​ ಕುಮಾರ್​​ ಪುಷ್ಟಾರ್ಚನೆ ಮಾಡಿದರು. ಸಕಲ ಪೊಲೀಸ್​ ವಾದ್ಯಗಳ ಮೂಲಕ ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.