ETV Bharat / state

ನಿಬಂಧನೆಗಳೊಂದಿಗೆ ಈ ಬಾರಿ ಗಣೇಶೋತ್ಸವಕ್ಕೆ ಅನುಮತಿ

ಕಡೆಗೂ ಗಣೇಶೋತ್ಸವ ಆಚರಣೆಗೆ ವಿಜಯಪುರ ಜಿಲ್ಲಾಡಳಿತ ಅಳೆದು ತೂಗಿ ಅನುಮತಿ‌ ನೀಡಿದೆ. ಒಟ್ಟು ಹತ್ತು ನಿಯಮಗಳನ್ನು ಹಬ್ಬ ಆಚರಿಸಲು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಿದೆ.

ganeshotsav
ಗಣೇಶೋತ್ಸವ
author img

By

Published : Aug 13, 2020, 6:54 PM IST

ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಕೆಲ ನಿಬಂಧನೆಗಳನ್ನು ಹೇರಿ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳ ಬದಲಿಗೆ ದೇವಸ್ಥಾನದಲ್ಲಿ ಅಥವಾ ಮನೆಗಳಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಬೇಕು. ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಇಲ್ಲದಿದ್ದರೆ, ಗಣೇಶ ವಿರ್ಸಜನೆ ಮಾಡಲು ಮುಂದಿನ ವರ್ಷದವರೆಗೆ ಕಾಯಬೇಕು ಎನ್ನುವ ನಿರ್ಬಂಧ ಹೇರಿದೆ. ಇದರ ಜೊತೆಗೆ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿ ವೀಕ್ಷಣೆಗೆ ಆನ್​ಲೈನ್ ವ್ಯವಸ್ಥೆಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಗಣೇಶ ಉತ್ಸವ ಸಮಿತಿ ಅಥವಾ ಮಂಡಳಿಗಳಿಗೆ ಇದು ಸವಾಲಿನ ಪ್ರಶ್ನೆಯಾಗಿದೆ.

ಕಡೆಗೂ ಗಣೇಶೋತ್ಸವ ಆಚರಣೆಗೆ ಅಳೆದು ತೂಗಿ ಜಿಲ್ಲಾಡಳಿತ ಅನುಮತಿ‌ ನೀಡಿದೆ. ಒಟ್ಟು ಹತ್ತು ನಿಯಮಗಳನ್ನು ಹಬ್ಬ ಆಚರಿಸಲು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಿದೆ.

ganeshotsav
ಮತ್ತೆ ಬಂತು ಗಣಪನ ಹಬ್ಬ
  • ಇದರಲ್ಲಿ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿ ಪೀಠ ಸಹಿತ 2 ಅಡಿ ಹಾಗೂ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಪೀಠ ಸಮೇತ 4 ಅಡಿಗಳನ್ನು ಮೀರಬಾರದು.
  • ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡಬಾರದು.
  • ಕಡ್ಡಾಯವಾಗಿ ಮಣ್ಣಿನ ಗಣೇಶನನ್ನೇ ಪ್ರತಿಷ್ಟಾಪಿಸಬೇಕು.
  • ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶನ ಮೂರ್ತಿಯನ್ನು ಮನೆಯ ಆವರಣದಲ್ಲಿಯೇ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು.
  • ಇಲ್ಲವಾದರೆ ಪಾಲಿಕೆ ಸೂಚಿಸುವ ಕೃತಕ ಹೊಂಡದಲ್ಲಿ ವಿಸರ್ಜಿಸಬೇಕು. ಎರಡೂ ಸಾಧ್ಯವಾಗದಿದ್ದರೆ, ಮುಂದಿನ ವರ್ಷ ವಿಸರ್ಜಿಸಬೇಕು.
  • ದೇವಸ್ಥಾನದಲ್ಲಿ ಪ್ರತಿಷ್ಟಾಪಿಸುವ ಗಣೇಶನ ಮೂರ್ತಿ ಸುತ್ತ ಮುತ್ತ ಕೊವಿಡ್ ರೋಗದ ಜಾಗೃತಿಯ ಸಂದೇಶಗಳನ್ನು ಅಂಟಿಸಬೇಕು.
  • ಗಣೇಶನ ಆರತಿ ವೇಳೆ ಐದು ಜನ ಮಾತ್ರ ಇರಬೇಕು.
  • ಶಬ್ಧ ಮಾಲಿನ್ಯ ಮಾಡಬಾರದು
  • ಗಣೇಶ ವೀಕ್ಷಣೆಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಪಾಡಬೇಕು.
  • ಇದರ ಜತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲು ಸೂಚಿಸಿದೆ.
    ಗಣೇಶೋತ್ಸವಕ್ಕೆ ಅನುಮತಿ

ಗಣೇಶೋತ್ಸವಕ್ಕೆ ಕೆಲವೇ ದಿನಗಳು ಉಳಿದಿವೆ. ಮೊದಲೇ ಗಜಾನನ ಮಂಡಳಿ ಹಾಗೂ ಹಿಂದೂ ಪರ ಸಂಘಟನೆಗಳನ್ನು ಕರೆದು ಸಭೆ ನಡೆಸಿ ಗಣೇಶೋತ್ಸವ ಆಚರಣೆ ಕುರಿತು ಸಲಹೆಗಳನ್ನು ಕೇಳಬೇಕಿತ್ತು ಎಂದು ವಿವಿಧ ಸಂಘಟನೆಗಳ ಬೇಡಿಕೆಯನ್ನು ಈ ಹಿಂದೆ ಅಧಿಕಾರಿಗಳ ಮುಂದೆ ಇಟ್ಟಿದ್ದೆವು. ಆಕಸ್ಮಿಕವಾಗಿ ಸರ್ಕಾರ ಉತ್ಸವಕ್ಕೆ ನಿಬಂಧನೆ ಹೇರಿ ಅನುಮತಿ ನೀಡಿದರೂ, ಸರ್ಕಾರದ ಜೊತೆಗೆ ಯಾವುದೇ ಸಂರ್ಘಷಕ್ಕೆ ಇಳಿಯದೆ ಕೋವಿಡ್ ನಿಯಮ ಪಾಲಿಸುವುದಾಗಿ ಹಲವು ಮುಖಂಡರು ತಮ್ಮ ಅಭಿಪ್ರಾಯವನ್ನು ಈಗಾಗಲೇ ಹಂಚಿಕೊಂಡಿದ್ದಾರೆ.

ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ಹಾಕಿರುವ ನಿಬಂಧನೆಗಳನ್ನು ಪಾಲಿಸುವ ಅನಿರ್ವಾಯತೆ ಈಗ ಗಣೇಶ ಭಕ್ತರಿಗೆ ಒದಗಿ ಬಂದಿದೆ. ದೇವಸ್ಥಾನಗಳಲ್ಲಿ ಗಣೇಶನನ್ನು ಪ್ರತಿಷ್ಟಾಪಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೋವಿಡ್ ನಿಯಮದಂತೆ ಸಾಮಾಜಿಕ ಅಂತರ ಕಾಪಾಡುವದು, ಕಡ್ಡಾಯ ಮಾಸ್ಕ್ ಬಳಕೆ, ದೇವಸ್ಥಾನವನ್ನು ಸ್ಯಾನಿಟೈಸ್​ ಮಾಡುವುದು ಗಣೇಶ ಉತ್ಸವ ಮಂಡಳಿಗೆ ಸವಾಲಾಗಿ ಪರಿಣಮಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.