ETV Bharat / state

ಸಂತ್ರಸ್ತರ ಜತೆ ವಾಸ್ತವ್ಯ ಹೂಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ..

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನೆರೆ ಸಂತ್ರಸ್ತರ ಜತೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ವಾಸ್ತವ್ಯ ಹೂಡಿದ್ದಾರೆ. ನೆರೆ ಪೀಡಿತ ಪ್ರದೇಶ ಸಹಜ ಸ್ಥಿತಿಗೆ ಮರಳುವವರೆಗೂ ಸಂತ್ರಸ್ತರೊಂದಿಗೆ ಇರೋದಾಗಿ ಶಾಸಕ ನಡಹಳ್ಳಿ ಭರವಸೆ ನೀಡಿದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
author img

By

Published : Aug 16, 2019, 8:05 PM IST

ವಿಜಯಪುರ: ಸಂತ್ರಸ್ತರು ಸಹಜ ಜೀವನಕ್ಕೆ ಮರಳುವವರೆಗೂ ನಾನು ಅವರೊಂದಿಗೆ ಇರುತ್ತೇನೆ. ರಾಜ್ಯ, ಕೇಂದ್ರ ಸರ್ಕಾರದ ಅನುದಾನವನ್ನೂ ಸಂತ್ರಸ್ತರಿಗೆ ಮುಟ್ಟಿಸುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಹೇಳಿದರು.

ಶಾಸಕ ಎ ಎಸ್ ಪಾಟೀಲ ನಡಹಳ್ಳಿ..

ಇಲ್ಲಿನ ಮುದ್ದೇಬಿಹಾಳದ ತಂಗಡಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಸಂತ್ರಸ್ತರ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಅವರಿಗೆ ಅಗತ್ಯ ನೆರವಿನ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಅವುಗಳನ್ನು ಪೂರೈಸಿ, ಅವರೊಂದಿಗೆ ಗಂಜಿ ಕೇಂದ್ರದಲ್ಲಿಯೇ ವಾಸಿಸುತ್ತೇನೆ ಎಂದು ಹೇಳಿದರು.

ಸಂತ್ರಸ್ತರ ಜತೆಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಅವರಿಗೆ ಭರವಸೆ ನೀಡಿದರು. ಮೊದಲ ಬಾರಿಗೆ ಶಾಸಕರೊಬ್ಬರು ಸಂತ್ರಸ್ತರ ಜತೆ ವಾಸ್ತವ್ಯ ಹೂಡಿರೋದು ಮೆಚ್ಚುಗೆಗೆ ಕಾರಣವಾಗಿದೆ.

Intro:ವಿಜಯಪುರ Body:ವಿಜಯಪುರ: ಭೀಕರ ಪ್ರವಾಹದಿಂದಾಗಿ ಉತ್ತರ‌ ಕರ್ನಾಟಕದ ಜನ್ರು ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದಾರೆ. ಇವರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಕಳೆದ ರಾತ್ರಿ ತಂಗಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಸಂತ್ರಸ್ಥರ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ. ಕುಂಚಗನೂರು, ಕಮಲದಿನ್ನಿ, ತಂಗಡಗಿ ಗ್ರಾಮಸ್ಥರಿರುವ ಸಂತ್ರಸ್ಥರ ಕೇಂದ್ರ ದಲ್ಲಿ ವಾಸ್ತವ್ಯ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ತೆರೆದಿರುವ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ ಮೊದಲ ಶಾಸಕರೆಂಬ ಹೆಗ್ಗಳಿಕೆ. ಇದಕ್ಕೂ ಮೊದಲು ಸಂತ್ರಸ್ಥರೊಂದಿಗೆ ಸ್ವಾತಂತ್ರ್ಯ ದಿನೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿದ್ರು. ಅಲ್ಲದೆ ರಕ್ಷಾಬಂಧನ ಕಾರ್ಯಕ್ರಮದಲ್ಲೂ ಶಾಸಕ ನಡಹಳ್ಳಿ ಭಾಗಿಯಾಗಿದ್ರು. ಸಂತ್ರಸ್ಥರ ಜೊತೆಗೆ ನಾನಿದ್ದೇನೆ ಎಂದು ಅವರಿಗೆ ಧೈರ್ಯ ತುಂಬಿದ್ದಾರೆ.
ಬೈಟ್ ೧: ಎ ಎಸ್ ಪಾಟೀಲ್‌ ನಡಹಳ್ಳಿ, ಶಾಸಕ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.